IPL 2021: ಗೈಲ್- ಚಹಾಲ್ ಶರ್ಟ್​ಲೆಸ್ ಫೊಟೊ ಹಂಚಿಕೊಂಡು ಆರ್​ಸಿಬಿಯನ್ನು ಟ್ರೋಲ್ ಮಾಡಿದ ಪಂಜಾಬ್ ಕಿಂಗ್ಸ್!

| Updated By: ganapathi bhat

Updated on: Sep 05, 2021 | 10:41 PM

ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿತ್ತು. ಚಿತ್ರ ಬಳಸಿಕೊಂಡು ಪಂಜಾಬ್ ಕಿಂಗ್ಸ್ ಟ್ವಿಟರ್ ಹ್ಯಾಂಡಲ್ ತಾನು ಕೂಡ ಆರ್​ಸಿಬಿ ಕಾಲೆಳೆದಿದೆ. ಈ ಚಿತ್ರ ಆರ್​ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದ ಪರ್ಫೆಕ್ಟ್ ರೆಪ್ರೆಸೆಂಟೇಷನ್ ಎಂಬಂತೆ ಬರೆದುಕೊಂಡಿದೆ.

IPL 2021: ಗೈಲ್- ಚಹಾಲ್ ಶರ್ಟ್​ಲೆಸ್ ಫೊಟೊ ಹಂಚಿಕೊಂಡು ಆರ್​ಸಿಬಿಯನ್ನು ಟ್ರೋಲ್ ಮಾಡಿದ ಪಂಜಾಬ್ ಕಿಂಗ್ಸ್!
ಹೌದು, ಎಬಿ ಡಿವಿಲಿಯರ್ಸ್​ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಕ್ರಿಸ್ ಗೇಲ್ ಟ್ವೀಟ್ ಮಾಡಿದ್ದಾರೆ. ನಾನು ತೊರೆಯುವುದಿಲ್ಲ ಎಂದು ಗೇಲ್ ಟ್ವೀಟ್ ಮಾಡಿ, ಸದ್ಯಕ್ಕೆ ನಿವೃತ್ತಿಯಿಲ್ಲ ಎಂದಿದ್ದಾರೆ. ಹೀಗಾಗಿ ಕ್ರಿಸ್ ಗೇಲ್ ಹೆಸರು ಮುಂದಿನ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು.
Follow us on

ಐಪಿಎಲ್ 2021 ಸರಣಿಯ 26ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪಂಜಾಬ್ ಕಿಂಗ್ಸ್ 34 ರನ್​ಗಳಿಂದ ಸೋಲಿಸಿತು. ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಆರ್​ಸಿಬಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ವೈಫಲ್ಯ ಅನುಭವಿಸಿತು. ಪಂದ್ಯದ ಬಳಿಕ ನಡೆದ ವಿಶೇಷ ಸನ್ನಿವೇಶ ಒಂದನ್ನು ಕೆ.ಎಲ್. ರಾಹುಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡ ವಿರಾಟ್ ಕೊಹ್ಲಿ ನೇತೃತ್ವದ ಆರ್​ಸಿಬಿ ಬಗ್ಗೆ ಟ್ವಿಟ್ ಮಾಡುವ ಮೂಲಕ ಕಾಲೆಳೆದಿದೆ.

ಪಂಜಾಬ್ ಮೂಲದ ಫ್ರಾಂಚೈಸಿ, ತನ್ನ ಟ್ವಿಟರ್ ಹ್ಯಾಂಡಲ್​ನಲ್ಲಿ ಕ್ರಿಸ್ ಗೈಲ್ ಮತ್ತು ಯಜ್ವೇಂದ್ರ ಚಹಾಲ್​ರ ಚಿತ್ರ ಒಂದನ್ನು ಹಂಚಿಕೊಂಡಿದೆ. ಸಚಿನ್ ಬೇಬಿ ಗೈಲ್ ಹಾಗೂ ಚಹಾಲ್​ರ ಫೊಟೊ ಕ್ಲಿಕ್ಕಿಸುವ ಚಿತ್ರ ಅದಾಗಿತ್ತು. ಚಹಾಲ್ ಹಾಗೂ ಗೈಲ್ ಇಬ್ಬರೂ ಕೂಡ ಶರ್ಟ್​ಲೆಸ್ ಆಗಿ ಫೊಟೊಗೆ ಪೋಸ್ ಕೊಡುತ್ತಿದ್ದರು. ಶಕ್ತಿಪ್ರದರ್ಶನಕ್ಕೆ ನಿಂತಂತೆ ಇಬ್ಬರು ಆಟಗಾರರು ಫೊಟೊಗೆ ಮುಖಮಾಡಿದ್ದರು.

ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿತ್ತು. ಚಿತ್ರ ಬಳಸಿಕೊಂಡು ಪಂಜಾಬ್ ಕಿಂಗ್ಸ್ ಟ್ವಿಟರ್ ಹ್ಯಾಂಡಲ್ ತಾನು ಕೂಡ ಆರ್​ಸಿಬಿ ಕಾಲೆಳೆದಿದೆ. ಈ ಚಿತ್ರ ಆರ್​ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದ ಪರ್ಫೆಕ್ಟ್ ರೆಪ್ರೆಸೆಂಟೇಷನ್ ಎಂಬಂತೆ ಬರೆದುಕೊಂಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ 34 ರನ್​ಗಳ ಗೆಲುವು ದಾಖಲಿಸಿತ್ತು. ಪಂಜಾಬ್ ಕಿಂಗ್ಸ್​ ಪರವಾಗಿ ಹರ್​ಪ್ರೀತ್ ಬ್ರರ್ ಅದ್ಭುತ ಬೌಲಿಂಗ್ ದಾಳಿ ನಡೆಸಿದ್ದರು. 4 ಓವರ್​ಗೆ ಕೇವಲ 19 ರನ್ ನೀಡಿ 3 ಮುಖ್ಯ ವಿಕೆಟ್ ಕಬಳಿಸಿದ್ದರು. ರವಿ ಬಿಶ್ನೊಯಿ 4 ಓವರ್​ಗೆ 17 ರನ್ ದಾಖಲಿಸಿ 2 ವಿಕೆಟ್ ಪಡೆದಿದ್ಧರು. ಆರ್​ಸಿಬಿ ಪರ ಯಾವೊಬ್ಬ ದಾಂಡಿಗನೂ ತಂಡ ಗೆಲ್ಲಿಸುವ ಪ್ರದರ್ಶನ ನೀಡಿರಲಿಲ್ಲ. ಕೊಹ್ಲಿ 35, ಪಾಟೀದಾರ್ 31 ರನ್ ಗಳಿಸಿದ್ದರ ಹೊರತಾಗಿ ಉಳಿದ ಬ್ಯಾಟ್ಸ್​ಮನ್​ಗಳು ಒಂದಂಕಿ ದಾಟಿರಲಿಲ್ಲ. ರಾಯಲ್ ಚಾಲೆಂಜರ್ಸ್ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗ ಎರಡರಲ್ಲೂ ವೈಫಲ್ಯ ಅನುಭವಿಸಿ ಸೋಲೊಪ್ಪಿಕೊಂಡಿತ್ತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್​ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 179 ರನ್ ದಾಖಲಿಸಿತ್ತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 180 ರನ್ ಟಾರ್ಗೆಟ್ ನೀಡಿತ್ತು. ಪಂಜಾಬ್ ಪರ ನಾಯಕ ಕೆ.ಎಲ್. ರಾಹುಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅವರು 57 ಬಾಲ್​ಗೆ 91 ರನ್ (7 ಬೌಂಡರಿ, 5 ಸಿಕ್ಸರ್) ಕಲೆಹಾಕಿದ್ದರು. ಮೊದಲ ವಿಕೆಟ್ ಬಳಿಕ ಕ್ರಿಸ್ ಗೈಲ್ 46 (24) ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರೂ ಹೆಚ್ಚು ಹೊತ್ತು ಉಳಿಯಲಿಲ್ಲ. ಅಂತಿಮವಾಗಿ ಹರ್​ಪ್ರೀತ್ ಬ್ರರ್ 25 (17) ರನ್ ಸೇರಿಸಿದ್ದರು. ಉಳಿದಂತೆ ಪಂಜಾಬ್ ಬ್ಯಾಟಿಂಗ್ ಲೈನ್​ಅಪ್ ಕುಸಿತ ಕಂಡಿತ್ತು. ಪೂರನ್ ಹಾಗೂ ಶಾರುಖ್ ಖಾನ್ ಸೊನ್ನೆಗೆ ಔಟ್ ಆಗಿದ್ದರು.

ಇದನ್ನೂ ಓದಿ: IPL 2021: ಸೂರ್ಯಕುಮಾರ್ ಯಾದವ್ ಸಾಮಾಜಿಕ ಅಂತರ ಪಾಲಿಸಿ ಪತ್ನಿಗೆ ಕಿಸ್ ಕೊಟ್ಟ ಫೊಟೊ ವೈರಲ್

ಟಿ20 ಕ್ರಿಕೆಟ್ ಆಡಿದ ಮೊದಲ ಭಾರತೀಯ ಇವರು! ದಾಖಲೆಗಳು ಏನೇನು? ಇಲ್ಲಿದೆ ವಿವರ

(IPL 2021 RCB vs PBKS Punjab Kings troll with shirtless photo of Chris Gayle Yuzvendra Chahal goes viral)

Published On - 6:17 pm, Sat, 1 May 21