IPL 2021: ಅರ್ಧಕ್ಕೆ ನಿಂತಿದ್ದ ಐಪಿಎಲ್​ ಮತ್ತೆ ಆರಂಭ; ಸೆಪ್ಟೆಂಬರ್​ನಿಂದ ಸರಣಿ ಮುಂದುವರೆಸಲು ಬಿಸಿಸಿಐ ನಿರ್ಧಾರ

IPL 2021 Reschedule: ಸೆಪ್ಟೆಂಬರ್ 18 ಶನಿವಾರ ಹಾಗೂ 19ನೇ ತಾರೀಖು ಭಾನುವಾರ ಆಗಿರುವುದು ಪಂದ್ಯಗಳನ್ನು ಪುನಾರಂಭಿಸಲು ಅತ್ಯಂತ ಸೂಕ್ತ ದಿನವೆಂದು ಬಿಸಿಸಿಐ ನಿರ್ಧರಿಸಿದೆ.

IPL 2021: ಅರ್ಧಕ್ಕೆ ನಿಂತಿದ್ದ ಐಪಿಎಲ್​ ಮತ್ತೆ ಆರಂಭ; ಸೆಪ್ಟೆಂಬರ್​ನಿಂದ ಸರಣಿ ಮುಂದುವರೆಸಲು ಬಿಸಿಸಿಐ ನಿರ್ಧಾರ
ಮುಂದಿನ ಸೀಸನ್​​ಗಾಗಿ ನಡೆಯಲಿರುವ ಮೆಗಾ ಹರಾಜಿಗಾಗಿ ಬಿಸಿಸಿಐ ಈಗಾಗಲೇ ರೂಪುರೇಷೆಗಳನ್ನು ಸಿದ್ದಪಡಿಸಿದೆ. ಅದರಂತೆ ಮುಂದಿನ ಸೀಸನ್​ ಮೆಗಾ ಹರಾಜಿಗೂ ಮುನ್ನ ಹಳೆಯ 8 ಫ್ರಾಂಚೈಸಿಗಳು 4 ಆಟಗಾರರನ್ನು ಉಳಿಸಿಕೊಳ್ಳಬಹುದು.
Follow us
Skanda
| Updated By: Digi Tech Desk

Updated on:May 25, 2021 | 6:26 PM

ದೆಹಲಿ: ಕೊರೊನಾ ಎರಡನೇ ಅಲೆ ಉಪಟಳದಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡಿರುವ ಐಪಿಲ್​ 2021ಆವೃತ್ತಿಯನ್ನು ದುಬೈನಲ್ಲಿ ಮುಂದುವರೆಸಲು ಬಿಸಿಸಿಐ ನಿರ್ಧರಿಸಿದೆ. ಸೆಪ್ಟೆಂಬರ್ 18 ಅಥವಾ 19ರಿಂದ ಐಪಿಎಲ್ 14 ಪುನಾರಂಭಗೊಳ್ಳಲಿದ್ದು ಮೂರು ವಾರಗಳ ಕಾಲ ನಡೆಯಲಿರುವ ಆವೃತ್ತಿಯ ದ್ವಿತೀಯಾರ್ಧದಲ್ಲಿ 10 ಮುಖಾಮುಖಿ ಪಂದ್ಯಗಳನ್ನು ಆಯೋಜಿಸಲು ಚಿಂತಿಸಲಾಗಿದೆ ಎಂದು ಬಿಸಿಸಿಐ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಆ ಮೂಲಕ ಅರ್ಧದಲ್ಲೇ ನಿಂತು ಕ್ರಿಕೆಟ್ ಪ್ರೇಮಿಗಳಿಗೆ ಉಂಟಾಗಿದ್ದ ನಿರಾಸೆಯನ್ನು ಶಮನ ಮಾಡಲು ಬಿಸಿಸಿಐ ಚಿಂತಿಸುತ್ತಿರುವುದು ದೃಢಪಟ್ಟಿದೆ.

ಈ ಸರಣಿಯ ಫೈನಲ್ ಪಂದ್ಯವನ್ನು ಅಕ್ಟೋಬರ್ 9 ಅಥವಾ 10ರಂದು ಆಡಿಸಲು ಬಿಸಿಸಿಐ ನಿರ್ಧರಿಸಿದೆ ಎಂಬುದು ಕೂಡಾ ಇದೇ ಸಂದರ್ಭದಲ್ಲಿ ಬಹಿರಂಗವಾಗಿದೆ. ಈ ಬಗ್ಗೆ ಬಿಸಿಸಿಐ ಈಗಾಗಲೇ ಎಲ್ಲಾ ಫ್ರಾಂಚೈಸಿಗಳೊಂದಿಗೆ ನಿರ್ಧರಿಸಿದ್ದು ಬಾಕಿ ಉಳಿದಿರುವ ಪಂದ್ಯಾವಳಿಗಳನ್ನು ಸೆಪ್ಟೆಂಬರ್ 18-20ರ ಆಸುಪಾಸಿನಲ್ಲಿ ಆರಂಭಿಸುವುದಾಗಿ ಮಾಹಿತಿ ರವಾನಿಸಿದೆ.

ಸೆಪ್ಟೆಂಬರ್ 18 ಶನಿವಾರ ಹಾಗೂ 19ನೇ ತಾರೀಖು ಭಾನುವಾರ ಆಗಿರುವುದು ಪಂದ್ಯಗಳನ್ನು ಪುನಾರಂಭಿಸಲು ಅತ್ಯಂತ ಸೂಕ್ತ ದಿನವೆಂದು ಬಿಸಿಸಿಐ ನಿರ್ಧರಿಸಿದೆ. ಹೀಗಾಗಿ ಮೇ 4ರಂದು ಏಕಾಏಕಿ ನಿಂತಿದ್ದ ಪಂದ್ಯ ಈಗ ಮತ್ತೆ ಆರಂಭಗೊಳ್ಳುವುದು ಖಚಿತವಾಗಿದೆ. ಉಳಿದ 31 ಪಂದ್ಯಗಳನ್ನು ಆಡಿಸಬೇಕೆಂದರೂ ಮೂರು ವಾರಗಳ ಕಾಲ ಆರಾಮವಾಗಿ ಸಾಕು ಎಂದು ಅಭಿಪ್ರಾಯಪಟ್ಟಿರುವ ಬಿಸಿಸಿಐ ಈ ಬಾರಿಯ ಸರಣಿಗೆ ಸೂಕ್ತ ಅಂತ್ಯ ನೀಡಲೇಬೇಕೆಂಬ ಕಾರಣಕ್ಕೆ ಈ ನಿಲುವು ತಾಳಿರುವುದಾಗಿ ತಿಳಿಸಿದೆ.

ಬಾಕಿ ಸರಣಿಯಲ್ಲಿ 10 ಮುಖಾಮುಖಿ ಪಂದ್ಯಗಳು (ಒಟ್ಟು 20 ಪಂದ್ಯ), ಏಳು ಸಂಜೆ ಅವಧಿಯ ಪಂದ್ಯಗಳು, 2 ಕ್ವಾಲಿಫೈಯರ್, ಒಂದು ಎಲಿಮಿನೇಟರ್ ಹಾಗೂ ಒಂದು ಅಂತಿಮ ಪಂದ್ಯ ಸೇರಿ ಒಟ್ಟು 31 ಪಂದ್ಯ ಇರಲಿದೆ ಎಂದು ಬಿಸಿಸಿಐ ಈಗ ನೀಡಿರುವ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

ಇಂಗ್ಲೆಂಡ್​ ವಿರುದ್ಧದ ಟೆಸ್ಟ್ ಮ್ಯಾಚ್ ಸೆಪ್ಟೆಂಬರ್ 14ರಂದು ಅಂತ್ಯಗೊಳ್ಳಲಿದ್ದು ಅಲ್ಲಿಂದ ಭಾರತೀಯ ಆಟಗಾರರೆಲ್ಲರೂ ಅತ್ಯಂತ ಸುರಕ್ಷಿತ ರೀತಿಯಲ್ಲಿ ದುಬೈ ತಲುಪಲಿದ್ದಾರೆ. ಹಾಗೆಯೇ ಉಳಿದ ಆಟಗಾರರನ್ನೂ ಕರೆತರಲಾಗುವುದು ಎಂದು ಆಯೋಜಕರು ಹೇಳಿದ್ದಾರೆ. ಭಾರತದಲ್ಲಿ ಬಯೋ ಬಬ್ಬಲ್​ ಇದ್ದಾಗಿಯೂ ಉಂಟಾಗಿದ್ದ ಸಮಸ್ಯೆಗಳು ಮತ್ತೆ ತಲೆದೋರದಂತೆ ನೋಡಿಕೊಳ್ಳುವುದಾಗಿಯೂ ಇದೇ ವೇಳೆ ಭರವಸೆ ನೀಡಲಾಗಿದೆ.

ಇದನ್ನೂ ಓದಿ: IPL 2021: ಉಳಿದ ಐಪಿಎಲ್ ಪಂದ್ಯಗಳನ್ನು ಇಂಗ್ಲೆಂಡ್​ನಲ್ಲಿ ಆಯೋಜಿಸುವುದು ಬೇಡ; ಇಂಗ್ಲೆಂಡ್ ಮಾಜಿ ಕ್ರಿಕೆಟಿಗನ ವಿರೋಧ 

IPL 2021: ಯುಎಇಯಲ್ಲಿ ಉಳಿದ ಐಪಿಎಲ್ ಪಂದ್ಯಗಳು; 3 ಅನುಕೂಲಗಳನ್ನು ಬಿಸಿಸಿಐ ಮುಂದಿಟ್ಟ ಐಪಿಎಲ್‌ ಸಿಇಒ

Published On - 5:58 pm, Tue, 25 May 21

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ