ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು (ಏಪ್ರಿಲ್ 15) ರಾಜಸ್ಥಾನ್ ರಾಯಲ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣೆಸಾಡಲಿದೆ. ಪಂಜಾಬ್ ವಿರುದ್ಧದ ರೋಚಕ ಪಂದ್ಯದಲ್ಲಿ ಸೋಲುಂಡಿರುವ ರಾಜಸ್ಥಾನ್ ರಾಯಲ್ಸ್, ಚೆನ್ನೈ ವಿರುದ್ಧ ಗೆದ್ದು ಬೀಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವ್ನು ಎದುರಿಸಲಿದೆ. ಮುಂಬೈ ವಾಂಖೆಡೆ ಮೈದಾನ ಬ್ಯಾಟಿಂಗ್ಗೆ ಸಹಕಾರಿಯಾಗಿರುವುದರಿಂದ, ಭರ್ಜರಿ ರನ್ ಹೊಳೆ ಬರುವ ನಿರೀಕ್ಷೆ ಇದೆ.
ರಾಜಸ್ಥಾನ್ಗೆ ಬೆನ್ ಸ್ಟೋಕ್ಸ್ ಇಲ್ಲದಿರುವುದು ತಂಡದ ಬಲ ಕೊಂಚ ಕುಗ್ಗಿದೆ. ಉಳಿದಂತೆ ಸಂಜು ಸ್ಯಾಮ್ಸನ್ ಜೊತೆಗೆ ಇತರ ದಾಂಡಿಗರೂ ಬಲಿಷ್ಠ ಆಟ ತೋರಬೇಕಿದೆ. ಧಾರಾಳ ಸಂಖ್ಯೆಯ ಬೌಲರ್ಗಳು ರಾಜಸ್ಥಾನ್ ತಂಡದಲ್ಲಿ ಇದ್ದಾರೆ. ಆದರೆ, ಕಳೆದ ಪಂದ್ಯದಲ್ಲಿ ಸಹಕಾರಿಯಾ ಹಾಗೂ ಮಾರಿಸ್ ಮಾತ್ರ ಉತ್ತಮ ಆಟ ಪ್ರದರ್ಶಿಸಿದ್ದಾರೆ. ಉಳಿದ ಬೌಲರ್ಗಳ ಆಟವೂ ವಿಕೆಟ್ ಕೀಳುವಲ್ಲಿ ಸಹಕಾರಿಯಾಗಬೇಕಿದೆ.
ಮತ್ತೊಂದೆಡೆ, ಚೆನ್ನೈ ಸೂಪರ್ ಕಿಂಗ್ಸ್ ಸೋಲಿಸಿರುವ ಸಂಭ್ರಮದಲ್ಲಿ ಡೆಲ್ಲಿ ತಂಡವಿದೆ. ಇಂದೂ ಕೂಡ ಪಂದ್ಯ ಗೆದ್ದು ಗೆಲುವಿನ ಸಂಖ್ಯೆ ಹೆಚ್ಚಿಸಿಕೊಳ್ಳುವ ನಿರೀಕ್ಷೆ ಇದೆ. ಡೆಲ್ಲಿ ತಂಡದ ಶಿಖರ್ ಧವನ್, ಪೃಥ್ವಿ ಶಾ, ರಿಷಭ್ ಪಂತ್ ಭರ್ಜರಿ ಆಟ ತೋರಿದ್ದಾರೆ. ವೋಕ್ಸ್, ಅವೇಶ್ ಖಾನ್, ಅಶ್ವಿನ್ರೊಂದಿಗೆ ಬೌಲಿಂಗ್ ವಿಭಾಗವೂ ಸದೃಢವಾಗಿದೆ. ರಾಜಸ್ಥಾನ್ ರಾಯಲ್ಸ್ಗೆ ಹೋಲಿಸಿದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡವೇ ಗೆಲ್ಲಬಹುದು ಅನ್ನೋದು ಕ್ರಿಕೆಟ್ ಅಭಿಮಾನಿಗಳ ಅಭಿಪ್ರಾಯ ಆಗಿದೆ.
ಆರ್ಆರ್ ಮತ್ತು ಡಿಸಿ ನಡುವಿನ ಐಪಿಎಲ್‌ನ ಏಳನೇ ಪಂದ್ಯ ಯಾವಾಗ ನಡೆಯುತ್ತದೆ?
ಆರ್ಆರ್ ಮತ್ತು ಡಿಸಿ ನಡುವಿನ ಐಪಿಎಲ್ 2021 ರ ಏಳನೇ ಪಂದ್ಯವು 2021ರ ಏಪ್ರಿಲ್ 15, ಗುರುವಾರ ನಡೆಯಲಿದೆ.
ಪಂದ್ಯ ನಡೆಯುವ ಸ್ಥಳ?
ಈ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪಂದ್ಯವು ಯಾವ ಸಮಯದಲ್ಲಿ ಪ್ರಾರಂಭವಾಗುತ್ತದೆ?
ಸಂಜೆ 7.30 ಕ್ಕೆ ಪಂದ್ಯ ಆರಂಭವಾಗಲಿದೆ. ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ.
ಯಾವ ಟಿವಿ ಚಾನೆಲ್‌ಗಳು ಪಂದ್ಯವನ್ನು ಪ್ರಸಾರ ಮಾಡುತ್ತವೆ?
ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿಯೂ ಲಭ್ಯವಿರುತ್ತದೆ. ಇದಲ್ಲದೆ, ನೀವು ಲೈವ್ ಮಾಹಿತಿಗಾಗಿ ಮತ್ತು ಓವರ್ ಟು ಓವರ್ ಅಪ್ಡೆಟ್ಗಾಗಿ ಟಿವಿ9 ಡಿಜಿಟಲ್ ಲೈವ್ಬ್ಲಾಗ್ ವೀಕ್ಷಿಸಿ.
Published On - 3:11 pm, Thu, 15 April 21