RR vs DC Predicted Playing 11: ಡೆಲ್ಲಿ- ರಾಜಸ್ಥಾನ್ ಮುಖಾಮುಖಿ; ಸ್ಟೋಕ್ಸ್ ಸ್ಥಾನಕ್ಕೆ ಯಾರು, ತಂಡದಲ್ಲಿ ಏನೇನು ಬದಲಾವಣೆ?

| Updated By: ganapathi bhat

Updated on: Nov 30, 2021 | 12:21 PM

ರಾಜಸ್ಥಾನ್ ಬೌಲಿಂಗ್ ವಿಭಾಗವು ಸಾಲು ಸಾಲು ಬೌಲರ್​ಗಳಿಂದ ಕೂಡಿದೆ. 8 ಮಂದಿ ಕೊನೆಯ ಪಂದ್ಯದಲ್ಲಿ ಬೌಲ್ ಮಾಡಿದ್ದಾರೆ. ಆದರೆ ರನ್ ಗತಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಬೌಲರ್​ಗಳ ಮೇಲೆ ಇಂದು ಒತ್ತಡ ಹೆಚ್ಚಿದೆ.

RR vs DC Predicted Playing 11: ಡೆಲ್ಲಿ- ರಾಜಸ್ಥಾನ್ ಮುಖಾಮುಖಿ; ಸ್ಟೋಕ್ಸ್ ಸ್ಥಾನಕ್ಕೆ ಯಾರು, ತಂಡದಲ್ಲಿ ಏನೇನು ಬದಲಾವಣೆ?
ರಿಷಭ್ ಪಂತ್- ಸಂಜು ಸ್ಯಾಮ್ಸನ್
Follow us on

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು (ಏಪ್ರಿಲ್ 15) ಐಪಿಎಲ್ ಟೂರ್ನಿಯ 7ನೇ ಪಂದ್ಯ ನಡೆಯಲಿದೆ. ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್, ಕಳೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿಯೂ ಸೋತಿದ್ದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಇಬ್ಬರು ವಿಕೆಟ್ ಕೀಪರ್ ನಾಯಕರು ಇಂದು ತಮ್ಮ ತಂಡಗಳನ್ನು ಮುನ್ನಡೆಸಲಿದ್ದಾರೆ. ಇದುವರೆಗೆ ಈ ತಂಡಗಳು ಮುಖಾಮುಖಿಯಾದಾಗ ಆರ್​ಆರ್​ 11 ಸಲ ಹಾಗೂ ಡಿಸಿ 11 ಬಾರಿ ಗೆದ್ದಿದೆ. ಹಾಗಾಗಿ, ರಿಷಭ್ ಪಂತ್- ಸಂಜು ಸ್ಯಾಮ್ಸನ್ ಟೀಂ ನಡುವಿನ ಇಂದಿನ ಹಣಾಹಣಿಯ ಬಗ್ಗೆ ಕುತೂಹಲ ಹೆಚ್ಚಿದೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಟೂರ್ನಿಯ 4ನೇ ಪಂದ್ಯದಲ್ಲಿ ರಾಜಸ್ಥಾನ್ ಭರ್ಜರಿ ಪ್ರದರ್ಶನ ತೋರಿತ್ತು. ಸಂಜು ಸ್ಯಾಮ್ಸನ್ ಸ್ಫೋಟಕ ಶತಕ ಸಿಡಿಸಿದ್ದರು. ಉಳಿದ ಆಟಗಾರರು ಸೂಕ್ತ ರೀತಿಯಲ್ಲಿ ನಾಯಕನಿಗೆ ಸಾತ್ ನೀಡಲು ಸಫಲರಾಗಲಿಲ್ಲ. ಆದರೂ ಇಂದು ಬ್ಯಾಟಿಂಗ್ ಲೈನ್​ಅಪ್ ಬದಲಾವಣೆ ಸಾಧ್ಯತೆ ಕಡಿಮೆ ಇದೆ. ಹಿಂದಿನ ಪಂದ್ಯದಲ್ಲಿ ಸಾಧಾರಣ ಆಟ ತೋರಿದ ಆಟಗಾರರು ಇಂದು ಉತ್ತಮ ಪ್ರದರ್ಶನ ತೋರಬೇಕಿದೆ. ರಾಜಸ್ಥಾನ್ ಬೌಲಿಂಗ್ ವಿಭಾಗವು ಸಾಲು ಸಾಲು ಬೌಲರ್​ಗಳಿಂದ ಕೂಡಿದೆ. 8 ಮಂದಿ ಕೊನೆಯ ಪಂದ್ಯದಲ್ಲಿ ಬೌಲ್ ಮಾಡಿದ್ದಾರೆ. ಆದರೆ ರನ್ ಗತಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಬೌಲರ್​ಗಳ ಮೇಲೆ ಇಂದು ಒತ್ತಡ ಹೆಚ್ಚಿದೆ.

ರಾಜಸ್ಥಾನ್ ತಂಡದ ಮುಖ್ಯ ಬದಲಾವಣೆ ಎಂದರೆ ಬೆನ್ ಸ್ಟೋಕ್ಸ್​ ಅವರದು. ಸ್ಟೋಕ್ಸ್ ಕೈ ಬೆರಳು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಾಗಿ ಡೇವಿಡ್ ಮಿಲ್ಲರ್ ಬ್ಯಾಟ್ ಬೀಸುವ ಸಾಧ್ಯತೆ ದಟ್ಟವಾಗಿದೆ. ಓಪನಿಂಗ್​ಗೆ ವೋಹ್ರಾ ಜೊತೆ ಬಟ್ಲರ್ ಆಡಬಹುದು. ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೆನ್ನೈ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದೆ. ಹೀಗಾಗಿ, ಅದೇ ತಂಡವನ್ನು ಮುಂದುವರಿಸುವ ಸಾಧ್ಯತೆ ಹೆಚ್ಚಿದೆ.

ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್:
1) ಜೋಸ್ ಬಟ್ಲರ್
2) ಮನನ್ ವೊಹ್ರಾ
3) ಸಂಜು ಸ್ಯಾಮ್ಸನ್ (ನಾಯಕ & ವಿಕೆಟ್ ಕೀಪರ್)
4) ಡೇವಿಡ್ ಮಿಲ್ಲರ್
5) ರಿಯಾನ್ ಪರಾಗ್
6) ರಾಹುಲ್ ತೆವಾಟಿಯಾ
7) ಶಿವಂ ದುಬೆ
8) ಶ್ರೇಯಸ್ ಗೋಪಾಲ್
9) ಕ್ರಿಸ್ ಮೋರಿಸ್
10) ಮುಸ್ತಾಫಿಜುರ್ ರಹಮಾನ್
11) ಚೇತನ್ ಸಕರಿಯಾ

ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್:
1) ಶಿಖರ್ ಧವನ್
2) ಪೃಥ್ವಿ ಶಾ
3) ಅಜಿಂಕ್ಯ ರಹಾನೆ
4) ರಿಷಭ್ ಪಂತ್ (ನಾಯಕ & ವಿಕೆಟ್ ಕೀಪರ್)
5) ಮಾರ್ಕಸ್ ಸ್ಟೋನಿಸ್
6) ಶಿಮ್ರಾನ್ ಹೆಟ್ಮಿಯರ್
7) ಕ್ರಿಸ್ ವೋಕ್ಸ್
8) ರವಿಚಂದ್ರನ್ ಅಶ್ವಿನ್
9) ಟಾಮ್ ಕರ್ರನ್
10) ಅಮಿತ್ ಮಿಶ್ರಾ
11) ಅವೇಶ್ ಖಾನ್

ಇದನ್ನೂ ಓದಿ: RR vs PBKS, IPL 2021: ಕೊನೆಯ ಓವರ್​ನಲ್ಲಿ ಸಿಂಗಲ್ ಓಟ ನಿರಾಕರಿಸಿದ ಸಂಜು ಸ್ಯಾಮ್ಸನ್​ಗೆ ಕ್ರಿಕೆಟ್ ದಿಗ್ಗಜರು ರಿಯಾಕ್ಟ್ ಮಾಡಿದ್ದು ಹೀಗೆ

ಇದನ್ನೂ ಓದಿ: Kaviya Maran: ಹೈದರಾಬಾದ್ ಪಂದ್ಯದ ವೇಳೆ ಕ್ಯಾಮರಾ ಕಣ್ಣಿಗೆ ಬೀಳುವ ಈ ಸುಂದರಿ ಯಾರು?

(IPL 2021 RR vs DC Playing 11 Prediction Rajasthan Royals Delhi Capitals who will replace Ben Stokes)

Published On - 5:51 pm, Thu, 15 April 21