IPL 2021: ಐಪಿಎಲ್ಗೆ ವಿದೇಶಿ ಆಟಗಾರರ ತಲೆನೋವು! ಇಂಗ್ಲೆಂಡ್, ಆಸ್ಟ್ರೇಲಿಯಾ ಮಂಡಳಿ ಬೆನ್ನಿಂದೆ ಬಿದ್ದ ಬಿಸಿಸಿಐ
IPL 2021: ಬಿಸಿಸಿಐ ಈಗಾಗಲೇ ಯುಎಇನಲ್ಲಿ ನಡೆಯಲಿರುವ ಐಪಿಎಲ್ 14ನೇ ಆವೃತ್ತಿಯ 31 ಪಂದ್ಯಗಳ ಆರಂಭ ಮತ್ತು ಅಂತ್ಯದ ದಿನಾಂಕವನ್ನು ಸ್ಪಷ್ಟಪಡಿಸಿದೆ. ಸೆಪ್ಟೆಂಬರ್ 19ರಂದು ಆರಂಭಗೊಳ್ಳಲಿರುವ ಐಪಿಎಲ್, ಅಕ್ಟೋಬರ್ 15ಕ್ಕೆ ಮುಕ್ತಾಯಗೊಳ್ಳಲಿದೆ.
ಕೊವಿಡ್ನಲ್ಲಿ ಅರ್ಧಕ್ಕೆ ನಿಂತಿದ್ದ ಐಪಿಎಲ್ ಅನ್ನ ಬಿಸಿಸಿಐ, ಯುಎಇನಲ್ಲಿ ನಡೆಸಲು ಹೋರಟಿದೆ. ಒಂದರ್ಥದಲ್ಲಿ ಇದು ಬಿಸಿಸಿಐ ಬಿಗ್ಬಾಸ್ಗಳಿಗೆ ಮಹಾ ಗೆಲುವು ಅಂತಾನೇ ಹೇಳಬೇಕು. ಆದ್ರೀಗ ಈ ಮಹಾ ಗೆಲುವಿನಲ್ಲೂ ವಿದೇಶಿ ಆಟಗಾರರು, ಐಪಿಎಲ್ಗೆ ಅಲಭ್ಯತೆಯ ಬರೆ ಎಳೆಯುವ ಭೀತಿ ಬಿಸಿಸಿಐಗೆ ಶುರುವಾಗಿದೆ. ಬಿಸಿಸಿಐ ಈಗಾಗಲೇ ಯುಎಇನಲ್ಲಿ ನಡೆಯಲಿರುವ ಐಪಿಎಲ್ 14ನೇ ಆವೃತ್ತಿಯ 31 ಪಂದ್ಯಗಳ ಆರಂಭ ಮತ್ತು ಅಂತ್ಯದ ದಿನಾಂಕವನ್ನು ಸ್ಪಷ್ಟಪಡಿಸಿದೆ. ಸೆಪ್ಟೆಂಬರ್ 19ರಂದು ಆರಂಭಗೊಳ್ಳಲಿರುವ ಐಪಿಎಲ್, ಅಕ್ಟೋಬರ್ 15ಕ್ಕೆ ಮುಕ್ತಾಯಗೊಳ್ಳಲಿದೆ. ಆದ್ರೀಗ ಬಿಸಿಸಿಐಗೆ ವಿದೇಶಿ ಆಟಗಾರರ ತಲೆನೋವು ಶುರುವಾಗಿದೆ.
ಸೆಪ್ಟಂಬರ್ ಮತ್ತು ಅಕ್ಟೋಬರ್ ಸಮಯದಲ್ಲಿ ವಿದೇಶಿ ಆಟಗಾರರು, ತಮ್ಮ ರಾಷ್ಟ್ರೀಯ ತಂಡಗಳ ಪರ ಬ್ಯುಸಿಯಾಗಿರಲಿದ್ದಾರೆ. ಇದು ಬಿಸಿಸಿಐ ಬಿಗ್ಬಾಸ್ಗಳಿಗೆ ತಲೆನೋವಾಗಿ ಪರಿಣಮಿಸಿದೆ. ಹಾಗಿದ್ರೂ ಬಿಸಿಸಿಐ, ಐಪಿಎಲ್ಗೆ ತೊಡಕಾಗಿದ್ದ ಕೆರಿಬಿಯನ್ ಪ್ರೀಮಿಯರ್ ಲೀಗ್ನ ದಿನಾಂಕದಲ್ಲಿ ಬದಲಾವಣೆ ಮಾಡಿದೆ. ಬಿಸಿಸಿಐ ಮನವಿಯ ಮೇರೆಗೆ ವಿಂಡೀಸ್ ಕ್ರಿಕೆಟ್ ಮಂಡಳಿ, ಸಿಪಿಎಲ್ ಅನ್ನ ಸೆಪ್ಟಂಬರ್ 15ರೊಳಗೆ ಮುಗಿಸೋದಾಗಿ ಒಪ್ಪಿಕೊಂಡಿದೆ..
ಇಂಗ್ಲೆಂಡ್, ಆಸಿಸ್ ಮಂಡಳಿ ಮನವೊಲಿಸುತ್ತಿರುವ ಬಿಸಿಸಿಐ! ಬಹುತೇಕ ಐಪಿಎಲ್ನಲ್ಲಿರುವ 8 ತಂಡಗಳಲ್ಲೂ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಆಟಗಾರರಿದ್ದಾರೆ. ಒಂದು ವೇಳೆ ಆಂಗ್ಲೋ-ಆಸಿಸ್ ಆಟಗಾರರು ಅಲಭ್ಯರಾದ್ರೆ, ಐಪಿಎಲ್ ತಂಡಗಳು ಸಂಕಷ್ಟಕ್ಕೆ ಸಿಲುಕಲಿವೆ. ಹಾಗೇ ಮಿಲಿಯನ್ ಡಾಲರ್ ಟೂರ್ನಿಯ ಕ್ರೇಜ್ ಕೂಡ ಕಡಿಮೆಯಾಗಲಿದೆ. ಹೀಗಾಗಿ ಬಿಸಿಸಿಐ, ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ & ವೇಲ್ಸ್ ಕ್ರಿಕೆಟ್ ಮಂಡಳಿ ಮನವೊಲಿಸಲು ಹೊರಟಿದೆ..
ಸೆಪ್ಟಂಬರ್-ಅಕ್ಟೋಬರ್ನಲ್ಲಿ ಇಂಗ್ಲೆಂಡ್ ತಂಡ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಿರುದ್ಧ ಸರಣಿ ಆಡಲಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದೆ. ಹೀಗಾಗಿ ಐಪಿಎಲ್ನ ಉಳಿದ ಪಂದ್ಯಗಳಿಗೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಆಟಗಾರರ ಲಭ್ಯತೆ ಅನುಮಾನವಾಗಿದೆ. ಇನ್ನು ಇಂಗ್ಲೆಂಡ್ ಕ್ರಿಕೆಟಿಗರು ಅಂತರಾಷ್ಟ್ರೀಯ ಪಂದ್ಯಗಳಿದ್ರೆ, ಐಪಿಎಲ್ನಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ..
ಆಫ್ರಿಕಾ ಕ್ರಿಕೆಟಿಗರ ಅಲಭ್ಯತೆ ಕಾಡುವದಿಲ್ಲ ಇಷ್ಟೆಲ್ಲಾ ಸಂಕಷ್ಟಗಳ ಮಧ್ಯೆಯೂ ಬಿಸಿಸಿಐ ಮುಂದೆ ಒಂದು ಆಶಾ ಭಾವನೆಯಿದೆ. ಅದೇನಂದ್ರೆ ಎರಡೂ ಕ್ರಿಕೆಟ್ ಮಂಡಳಿಗಳೂ ಇನ್ನೂ ಸರಣಿಯ ದಿನಾಂಕವನ್ನ ನಿಗದಿ ಪಡಿಸಿಲ್ಲ. ಇದು ಬಿಸಿಸಿಐ ವರದಾನವಾಗಿ ಪರಿಣಮಿಸಿದೆ. ಹೀಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ & ವೇಲ್ಸ್ ಕ್ರಿಕೆಟ್ ಮಂಡಳಿಗೆ ತಮ್ಮ ಆಟಗಾರರು ಐಪಿಎಲ್ಗೆ ಲಭ್ಯವಾಗುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗುವ ಸಾಧ್ಯತೆಯಿದೆ.
ಒಂದು ವೇಳೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟಿಗರು ಐಪಿಎಲ್ಗೆ ಅಲಭ್ಯರಾಗದೇ ಇದ್ದಲ್ಲಿ, ಬಿಸಿಸಿಐ ಬಳಿ ಮತ್ತೊಂದು ಪ್ಲಾನ್ ಇದೆ. ಅದೇನಂದ್ರೆ ಅಫ್ಘಾನಿಸ್ತಾನ್, ಬಾಂಗ್ಲಾದೇಶಿ ಆಟಗಾರರನ್ನ ಬ್ಯಾಕ್ ಅಪ್ ಪ್ಲೇಯರ್ ಆಗಿ ಬಳಸಿಕೊಳ್ಳಲು ಯೋಚನೆ ನಡೆಸಿದ್ದಾರೆ. ಅಫ್ಘಾನ್ ಮತ್ತು ಬಾಂಗ್ಲಾ ಕ್ರಿಕೆಟ್ ಮಂಡಳಿಗಳ ಜೊತೆಯೂ ಮಾತುಕತೆ ನಡೆಸಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ತಂಡಕ್ಕೆ ಯಾವುದೇ ಸರಣಿಯಿಲ್ಲ. ಹೀಗಾಗಿ ಆಫ್ರಿಕಾ ಕ್ರಿಕೆಟಿಗರ ಅಲಭ್ಯತೆ ಕಾಡುವದಿಲ್ಲ.
ಒಂದು ವೇಳೆ ಕೊರೊನಾ ಕಾರಣದಿಂದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ದುಬೈನಲ್ಲೇ ಆಡಿದ್ರೆ, ಆಗ ಐಪಿಎಲ್ಗೆ ವಿದೇಶಿ ಆಟಗಾರರ ಅಲಭ್ಯತೆ ಕಾಡುವ ಸಾಧ್ಯತೆ ಕಡಿಮೆ. ಹೀಗಾಗಿ ಬಿಸಿಸಿಐ, ವಿಂಡೀಸ್ ಕ್ರಿಕೆಟ್ ಮಂಡಳಿ ಮನವೊಲಿಸಿದಂತೆ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಮನವೊಲಿಸುವ ಸಾಧ್ಯತೆ ಹೆಚ್ಚಿದೆ.