AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MI vs KKR: ಬಲಿಷ್ಠ ಮುಂಬೈ ಬೌಲಿಂಗ್​ನ ಧೂಳಿಪಟ ಮಾಡಿದ ರಹಾನೆ- ಅಲೆನ್

MI vs KKR: ಬಲಿಷ್ಠ ಮುಂಬೈ ಬೌಲಿಂಗ್​ನ ಧೂಳಿಪಟ ಮಾಡಿದ ರಹಾನೆ- ಅಲೆನ್

ಪೃಥ್ವಿಶಂಕರ
|

Updated on:Mar 29, 2026 | 8:46 PM

Share

IPL 2026 MI vs KKR: ಐಪಿಎಲ್ 2026 ರ MI vs KKR ಪಂದ್ಯದಲ್ಲಿ, ವಾಂಖೆಡೆಯಲ್ಲಿ ಅಜಿಂಕ್ಯ ರಹಾನೆ ಮತ್ತು ಫಿನ್ ಅಲೆನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಇವರಿಬ್ಬರು ಕೇವಲ 3.5 ಓವರ್‌ಗಳಲ್ಲಿ ಕೆಕೆಆರ್‌ಗೆ ವೇಗದ 50 ರನ್ ಗಳಿಸಲು ನೆರವಾದರು, ಮುಂಬೈ ಬೌಲಿಂಗ್ ಬೆವರಿಳಿಸಿದರು. ಹಾರ್ದಿಕ್ ಪಾಂಡ್ಯ ತಮ್ಮ ದುಬಾರಿ ಓವರ್‌ನಲ್ಲಿ 26 ರನ್ ಬಿಟ್ಟುಕೊಟ್ಟರು. ರಹಾನೆ ಐಪಿಎಲ್ ವೃತ್ತಿಜೀವನದ 34ನೇ ಅರ್ಧಶತಕ ಪೂರೈಸಿದರೆ, ಅಲೆನ್ ವೇಗದ 37 ರನ್ ಗಳಿಸಿದರು.

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ 2026 ರ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್​ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಅಜಿಂಕ್ಯ ರಹಾನೆ ಹಾಗೂ ಫಿಲ್ ಅಲೆನ್ ತಮ್ಮ ಸ್ಫೋಟಕ ಬ್ಯಾಟಿಂಗ್‌ ಮೂಲಕ ಮುಂಬೈನ ಬಲಿಷ್ಠ ಬೌಲಿಂಗ್ ವಿಭಾಗದ ಬೆವರಿಳಿಸಿದರು.

ಆರಂಭದಿಂದಲ್ಲೂ ಅಬ್ಬರದ ಬ್ಯಾಟಿಂಗ್‌ ಮಾಡಿದ ಇವರಿಬ್ಬರು ಮೊದಲ ವಿಕೆಟ್​ಗೆ ಕೇವಲ 32 ಎಸೆತಗಳಲ್ಲಿ 69 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಅದರಲ್ಲೂ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್​ನಲ್ಲಿ ಬೌಂಡರಿಗಳ ಮಳೆಗರೆದ ಈ ಜೋಡಿ ಪಾಂಡ್ಯರ ಒಂದೇ ಓವರ್​ನಲ್ಲಿ 26 ರನ್ ಕಲೆಹಾಕಿತು.

ಪವರ್‌ಪ್ಲೇನಲ್ಲಿ ಹಾರ್ದಿಕ್ ಪಾಂಡ್ಯ ಎರಡು ಓವರ್‌ಗಳನ್ನು ಬೌಲ್ ಮಾಡಿ ಒಟ್ಟು 29 ರನ್‌ಗಳನ್ನು ಬಿಟ್ಟುಕೊಟ್ಟರು. ಅದರಲ್ಲೂ ತಮ್ಮ ಖೋಟಾದ ಎರಡನೇ ಓವರ್‌ನಲ್ಲಿ ಪಾಂಡ್ಯ 26 ರನ್‌ಗಳನ್ನು ಬಿಟ್ಟುಕೊಟ್ಟರು. ಫಿನ್ ಅಲೆನ್ ಮತ್ತು ರಹಾನೆ ಈ ಓವರ್​ನಲ್ಲಿ ಎರಡು ಸಿಕ್ಸರ್‌ಗಳು ಮತ್ತು ಮೂರು ಬೌಂಡರಿಗಳನ್ನು ಬಾರಿಸಿದರು. ಇದು ಹಾರ್ದಿಕ್ ಪಾಂಡ್ಯ ಅವರ ಐಪಿಎಲ್ ಇತಿಹಾಸದಲ್ಲಿ ಎರಡನೇ ಅತ್ಯಂತ ದುಬಾರಿ ಓವರ್ ಎನಿಸಿಕೊಂಡಿತು.

ಇವರಿಬ್ಬರ ಈ ಅಬ್ಬರದಿಂದಾಗಿ ಕೆಕೆಆರ್ ಕೇವಲ 3.5 ಓವರ್‌ಗಲ್ಲಿ 50 ರನ್‌ಗಳ ಗಡಿ ದಾಟಿತು. ಇದು ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್‌ನ ಅತ್ಯಂತ ವೇಗದ ಅರ್ಧಶತಕವಾಗಿದೆ. ಆದಾಗ್ಯೂ ಫಿನ್ ಅಲೆನ್ 17 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಿತ 37 ರನ್ ಗಳಿಸಿ ಔಟಾದರೆ, ರಹಾನೆ ಕೇವಲ 27 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ ತಮ್ಮ ಐಪಿಎಲ್‌ ವೃತ್ತಿಜೀವನದ 34 ನೇ ಅರ್ಧಶತಕ ಪೂರೈಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Mar 29, 2026 08:44 PM
Follow Us