AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಚ್ಚುಕಟ್ಟು ವ್ಯವಸ್ಥೆ: ಆರ್​​ಸಿಬಿ ಮ್ಯಾಚ್ ಸುಸೂತ್ರ, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ಅಚ್ಚುಕಟ್ಟು ವ್ಯವಸ್ಥೆ: ಆರ್​​ಸಿಬಿ ಮ್ಯಾಚ್ ಸುಸೂತ್ರ, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ಪ್ರದೀಪ್​ ಚಿಕ್ಕಾಟಿ
| Edited By: |

Updated on:Mar 29, 2026 | 4:27 PM

Share

ಚಿನ್ನಸ್ವಾಮಿ ಸ್ಪೇಡಿಯಂ ಬಳಿಕ ಕಾಲ್ತುಳಿ ಸಂಭವಿಸಿ 11 ಆರ್​​ಸಿಬಿ ಅಭಿಮಾನಿಗಳು ದುರಂತ ಸಾವು ಕಂಡಿದ್ದರು. ಈ ಕರಾಳ ಘಟನೆ ಬೆನ್ನಲ್ಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು, ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳು ಸುಸೂತ್ರವಾಗಿ ನಡೆಲು ಎಲ್ಲಾ ವ್ಯವಸ್ಥೆ ಮಾಡಿದೆ.

ಬೆಂಗಳೂರು, (ಮಾರ್ಚ್ 29): ಚಿನ್ನಸ್ವಾಮಿ ಸ್ಪೇಡಿಯಂ ( Chinnaswamy stadium )ಬಳಿಕ ಕಾಲ್ತುಳಿ ಸಂಭವಿಸಿ 11 ಆರ್​​ಸಿಬಿ ಅಭಿಮಾನಿಗಳು ದುರಂತ ಸಾವು ಕಂಡಿದ್ದರು. ಈ ಕರಾಳ ಘಟನೆ ಬೆನ್ನಲ್ಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು, ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯಗಳು ಸುಸೂತ್ರವಾಗಿ ನಡೆಲು ಎಲ್ಲಾ ವ್ಯವಸ್ಥೆ ಮಾಡಿದೆ. ಹೌದು… ನಿನ್ನೆ (ಮಾರ್ಚ್ 28) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್​​​ಸಬಿ ಹಾಗೂ ಸನ್​ ರೈಸರ್ಸ್ ಹೈದರಾಬಾದ್ ನಡುವಿನ ಉದ್ಘಾಟನಾ ಪಂದ್ಯ ಯಾವುದೇ ಅಹಿತಕ, ಗೊಂದಲ ಆಗದಂತೆ ಸುಸೂತ್ರವಾಗಿ ನಡೆದಿದೆ. ಪ್ರೇಕ್ಷಕರು ಸ್ಟೇಡಿಯಂ ಪ್ರವೇಶ ಹಾಗೂ ನಿರ್ಗಮನದ ವೇಳೆ ನೂಕು ನುಗ್ಗಲು, ಗೊಂದಲ ಆಗದ ರೀತಿಯಲ್ಲಿ ನಿರ್ವಹಣೆ ಮಾಡಿದೆ. ಸ್ಟೇಡಿಯಂ ಬಳಿ ಟೀ ಶರ್ಟ್ ಕೂಡ ಮಾರಲು ಅವಕಾಶ ಕೊಟ್ಟಿರಲಿಲ್ಲ. ಇನ್ನು ಟ್ರಾಫಿಕ್ ಸಮಸ್ಯೆ ತಡೆಯಲು ಪಂದ್ಯ ವೀಕ್ಷಣೆಗೆ ಬರುವವರಿಗೆ ರಸ್ತೆ ಬದಲಿಗೆ ಮೈದಾನದೊಳಗೆ ಸರದಿ ಸಾಲು ವ್ಯವಸ್ಥೆ ಮಾಡಲಾಗಿತ್ತು. ಹೀಗೆ KSCA ಜತೆ ಸಮನ್ವಯದೊಂದಿಗೆ ಪೊಲೀಸ್ ಇಲಾಖೆ ಕಳೆದ ಒಂದು ತಿಂಗಳಿಂದ ನಡೆದಿದ್ದ ಭದ್ರತೆ ತಯಾರಿ ಯಶಸ್ವಿಯಾಗಿದ್ದು, ಪೊಲೀಸರ ಅಚ್ಚಕಟ್ಟು ನಿರ್ವಹಣೆಗೆ ಸಾರ್ವಜನಿಕರಿಂದ ಮೆಚ್ಚುಗೆಗಳು ವ್ಯಕ್ತವಾಗಿವೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ.

Published on: Mar 29, 2026 04:25 PM
Follow Us