IPL 2021: ಮಹಾರಾಷ್ಟ್ರದಲ್ಲಿ ಲಾಕ್​ಡೌನ್​, ಮುಂಬೈನಲ್ಲಿ ನಡೆಯುವ ಐಪಿಎಲ್​ ಪಂದ್ಯಗಳು ಅಬಾಧಿತ

| Updated By: ganapathi bhat

Updated on: Apr 14, 2021 | 9:53 PM

Indian Premier League 2021: ಮಹಾರಾಷ್ಟ್ರ ಸರಕಾರ ಇಡೀ ರಾಜ್ಯದಲ್ಲಿ ಲಾಕ್​ಡೌನ್​ ಘೋಷಿಸಿದೆ. ಆದರೆ, ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ ಪಂದ್ಯಗಳಿಗೆ ಯಾವ ತೊಂದರೆ ಆಗದು ಎಂದು ಐಪಿಎಲ್​ ಗೌರ್ನಿಂಗ್​ ಕೌನ್ಸಿಲ್​ನ ಮೂಲಗಳು ತಿಳಿಸಿವೆ.

IPL 2021: ಮಹಾರಾಷ್ಟ್ರದಲ್ಲಿ ಲಾಕ್​ಡೌನ್​, ಮುಂಬೈನಲ್ಲಿ ನಡೆಯುವ ಐಪಿಎಲ್​ ಪಂದ್ಯಗಳು ಅಬಾಧಿತ
ಐಪಿಎಲ್ 2021
Follow us on

ಮಹಾರಾಷ್ಟ್ರ ಸರಕಾರ ಘೋಷಿಸಿರುವ ಲಾಕ್​ಡೌನ್​ ಮಂಗಳವಾರದಿಂದ ಜಾರಿಗೆ ಬಂದಿದ್ದು ಈಗ ಕ್ರಿಕೆಟ್​ ಪ್ರೇಮಿಗಳ ಮುಂದಿರುವ ಪ್ರಶ್ನೆಯೇನೆಂದರೆ-ಮುಂಬಯಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ ಕ್ರಿಕೆಟ್​ ಟೂರ್ನಮೆಂಟ್​ನ ಬಾಕಿ ಪಂದ್ಯಗಳು ನಡೆಯುತ್ತವೆಯೋ ಅಥವಾ ಅವನ್ನೆಲ್ಲಾ ಬೇರೆ ಕಡೆ ವರ್ಗಾಯಿಸಲಾಗುತ್ತದೆಯೋ?  ಅಥವಾ ಈ ಪಂದ್ಯಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆಯೋ?  ವಾಂಖೆಡೆ ಕ್ರೀಡಾಂಗಣದಲ್ಲಿ ಈ ಬಾರಿ ಒಟ್ಟೂ ಹತ್ತು ಪಂದ್ಯಗಳು ನಡೆಯುತ್ತವೆ.

ಕ್ರಿಕೆಟ್​ ಪ್ರೇಮಿಗಳು ನಿಟ್ಟುಸಿರು ಬಿಡುವ ಸುದ್ದಿ ಬಂದಿದೆ. ಎಎನ್​ಐ ಸುದ್ದಿ ಸಂಸ್ಥೆ ವರದಿಯ ಪ್ರಕಾರ, ಎಲ್ಲಾ ಪಂದ್ಯಗಳು ಮೊದಲು ನಿರ್ಧರಿಸಿದಂತೆ ನಡೆಯುತ್ತವೆ. ಈಗಾಗಲೇ ಎರಡು ಪಂದ್ಯಗಳು ಮುಗಿದಿವೆ ಮತ್ತು ಇನ್ನು ಎಂಟು ಬಾಕಿ ಇವೆ. ಲಾಕ್​ ಡೌನ್​ನ ಪರಿಣಾಮ ಐಪಿಎಲ್​ ಮೇಲೆ ಬೀಳುವುದಿಲ್ಲ ಎಂದು ಐಪಿಎಲ್​ ಗೌರ್ನಿಂಗ್​ ಕೌನ್ಸಿಲ್​ನ ಮೂಲಗಳು ಹೇಳಿವೆ.

ಕಳೆದ ಕೆಲವು ದಿನಗಳಲ್ಲಿ ಮಹಾರಾಷ್ಟ್ರ ಅತೀ ಹೆಚ್ಚು ಕೊವಿಡ್​ ಕೇಸುಗಳನ್ನು ಕಂಡಿವೆ. ಪ್ರತಿದಿನ 60-70,000 ಕೊವಿಡ್​ ಕೇಸುಗಳು ವರದಿಯಾಗುತ್ತಿವೆ. ಮತ್ತು ಮುಂಬೈ ನಗರ ಮತ್ತು ಇಡೀ ರಾಜ್ಯದಲ್ಲಿ ಕಲಂ 144 ನ್ನು ಜಾರಿಗೊಳಿಸಲಾಗಿದೆ. ಆದರೆ, ಪೆಟ್ರೋಲ್​ ಪಂಪ್​, ಹಣಕಾಸು ಸಂಸ್ಥೆಗಳು ಮತ್ತು ಇನ್ನಿತರೆ ಅವಶ್ಯಕ ಸೇವಾ ಕೆಲಸಗಳು ನಡೆಯುತ್ತವೆ ಎಂದು ಸರಕಾರ ಹೇಳಿದೆ. ಹೋಟೆಲ್​ಗಳಿಂದ ಆಹಾರವನ್ನು ಕೊಂಡೊಯ್ದು ಮನೆಯಲ್ಲಿ ತಿನ್ನಲು ಅನುಮತಿ ನೀಡಲಾಗಿದೆ. ಆದರೆ, ಐಪಿಎಲ್​ನಲ್ಲಿ ಆಡುತ್ತಿರುವ ತಂಡಗಳಿಗೆ ಕೆಲವೊಂದು ವಿನಾಯಿತಿ ನೀಡಲಾಗಿದೆ ಎಂದು ಎಎನ್​ಐ ಹೇಳಿದೆ.

ಮುಂಬೈನಲ್ಲಿ ನಡೆಯಲಿರುವ ಪಂದ್ಯಗಳ ವಿವರ:

Match Number Date Team
Match 7 Thursday, 15 April Rajasthan Royals vs Delhi Capitals
Match 8 Friday, 16 April Punjab Kings vs Chennai Super Kings
Match 11 Sunday, 18 April Delhi Capitals vs Punjab Kings
Match 12 Monday, 19 April Chennai Super Kings vs Rajasthan Royals
Match 15 Wednesday, 21 April Kolkata Knight Riders vs Chennai Super Kings
Match 16 Thursday, 22 April Royal Challengers Bangalore vs Rajasthan Royals
Match 18 Saturday, 21 April Rajasthan Royals vs Kolkata Knight Riders
Match 19 Sunday, 22 April Chennai Super Kings vs Royal Challengers Bangalore

ಇದನ್ನೂ ಓದಿ: SRH vs RCB Live Score, IPL 2021: ಆರ್​ಸಿಬಿ ಉತ್ತಮ ಆರಂಭ; ಸನ್​ರೈಸರ್ಸ್ ಮೊದಲ ವಿಕೆಟ್ ಪತನ

ಇದನ್ನೂ ಓದಿ: KKR vs MI, IPL 2021: 30 ಬಾಲ್​ಗೆ 31 ರನ್ ಗಳಿಸಲು ಆಗದೇ ಸೋತ ಕೋಲ್ಕತ್ತಾ; ಅಚ್ಚರಿಯಿಂದ ಪ್ರತಿಕ್ರಿಯೆ ನೀಡಿದ ಹಿರಿಯ ಕ್ರಿಕೆಟಿಗರು