ಚಮಚಗಿರಿಗೂ ಒಂದು ಮಿತಿ ಇರಬೇಕು! ನೀನು ವಿರಾಟ್ ಕೊಹ್ಲಿ ಚಮ್ಚಾ ಎಂದಿದ್ದ ನೆಟ್ಟಿಗನಿಗೆ ತಕ್ಕ ಉತ್ತರ ಕೊಟ್ಟ ಇರ್ಫಾನ್ ಪಠಾಣ್

Irfan Pathan: ಇರ್ಫಾನ್ ಪಠಾಣ್ ಅವರು ವಿರಾಟ್ ಕೊಹ್ಲಿಯನ್ನು ಹೊಗಳಲು ಹಣ ಪಡೆಯುತ್ತಿದ್ದಾರೆ. ಚಮಚಗಿರಿಗೂ ಒಂದು ಮಿತಿ ಇರಬೇಕು ಎಂದು ಪಠಾಣ್​ರನ್ನು ಹೀಯಾಳಿಸಿದ್ದ.

ಚಮಚಗಿರಿಗೂ ಒಂದು ಮಿತಿ ಇರಬೇಕು! ನೀನು ವಿರಾಟ್ ಕೊಹ್ಲಿ ಚಮ್ಚಾ ಎಂದಿದ್ದ ನೆಟ್ಟಿಗನಿಗೆ ತಕ್ಕ ಉತ್ತರ ಕೊಟ್ಟ ಇರ್ಫಾನ್ ಪಠಾಣ್
ಇರ್ಫಾನ್ ಪಠಾಣ್

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡದ ಸೋಲಿನ ನಂತರ, ಅನೇಕ ಅನುಭವಿಗಳು ಮತ್ತು ಅಭಿಮಾನಿಗಳು ವಿರಾಟ್ ಕೊಹ್ಲಿ ಮತ್ತು ಅವರ ನಾಯಕತ್ವವನ್ನು ಪ್ರಶ್ನಿಸಿದ್ದರು. ಈ ಟೆಸ್ಟ್​ನಲ್ಲಿ ಕೊಹ್ಲಿ ತನ್ನ ಬ್ಯಾಟ್‌ನಿಂದ ಹೆಚ್ಚಿನ ರನ್​ ಕಲೆಹಾಕಲು ಆಗಲಿಲ್ಲ. ಆದರೆ, ಇದರ ಹೊರತಾಗಿಯೂ, ಕಾಮೆಂಟೆಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದ ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅವರನ್ನು ಹೊಗಳಿದರ., ಇದನ್ನು ಕೆಲವು ಅಭಿಮಾನಿಗಳಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅಭಿಮಾನಿಯೊಬ್ಬರು ಪಠಾಣ್‌ಗೆ ಒಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಈ ಕ್ರಿಕೆಟಿಗ ಸಭ್ಯವಾಗಿ ಉತ್ತರಿಸಿ ಆತನ ಬಾಯಿ ಮುಚ್ಚಿಸಿದ್ದಾರೆ. ಪಠಾಣ್‌ಗೆ ಉಳಿದ ಅಭಿಮಾನಿಗಳ ಬೆಂಬಲವೂ ಸಿಕ್ಕಿತು.

ಕೇವಲ 13 ರನ್ ಗಳಿಸಲು ಸಾಧ್ಯವಾಯಿತು
ಡಬ್ಲ್ಯುಟಿಸಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 44 ರನ್ ಗಳಿಸಿದರು. ಅದೇ ಸಮಯದಲ್ಲಿ, ಅವರು ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 13 ರನ್ ಗಳಿಸಲು ಸಾಧ್ಯವಾಯಿತು. ಎರಡೂ ಇನ್ನಿಂಗ್ಸ್‌ಗಳಲ್ಲಿ ಅವರನ್ನು ಕೈಲ್ ಜಾಮಿಸನ್ ಔಟ್ ಮಾಡಿದರು. ಈ ಪಂದ್ಯದಲ್ಲಿ ಜೇಮೀಸನ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನೂ ಪಡೆದರು. ಇದರ ಹೊರತಾಗಿಯೂ, ಪಠಾಣ್ ನಾಯಕ ಕೊಹ್ಲಿಯನ್ನು ಹೊಗಳಿದಾಗ, ಅಭಿಮಾನಿ ಅವರನ್ನು ಪ್ರಶ್ನಿಸುವುದರ ಜೊತೆಗೆ ಪಠಾಣ್​ರನ್ನು ಕೊಹ್ಲಿಯ ಚಮ್ಚಾ ಎಂದು ಕರೆದಿದ್ದರು.

ವಿರಾಟ್ ಕೊಹ್ಲಿಯನ್ನು ಹೊಗಳಿದ್ದ ಇರ್ಫಾನ್
ಆರ್ ದತ್ತಾ ಎಂಬ ಅಭಿಮಾನಿ ಟ್ವೀಟ್ ಮಾಡಿ, ಇರ್ಫಾನ್ ಪಠಾಣ್ ಅವರು ಕಾಮೆಂಟರಿಂಗ್ ಮಾಡಲು ಅಥವಾ ವಿರಾಟ್ ಕೊಹ್ಲಿಯನ್ನು ಹೊಗಳಲು ಹಣ ಪಡೆಯುತ್ತಿದ್ದಾರೆ. ಚಮಚಗಿರಿಗೂ ಒಂದು ಮಿತಿ ಇರಬೇಕು ಎಂದು ಪಠಾಣ್​ರನ್ನು ಹೀಯಾಳಿಸಿದ್ದ. ಇದಕ್ಕೆ ಪ್ರತಿಕ್ರಿಯಿಸಿದ ಪಠಾಣ್, ಹಾಗಾದರೆ ನಾನು ವಿಶ್ವದ ಅತ್ಯುತ್ತಮ ಆಟಗಾರನನ್ನು ಹೊಗಳುವುದು ನಿಮಗೆ ಇಷ್ಟವಿಲ್ಲವ ಎಂದು ಆತನಿಗೆ ಮರು ಪ್ರಶ್ನೆ ಹಾಕಿದ್ದಾರೆ. ಪಠಾಣ್ ಉತ್ತರ ನೀಡಿದ ನಂತರ ಇನ್ನೂ ಅನೇಕ ಅಭಿಮಾನಿಗಳು ಪ್ರಶ್ನೆ ಕೇಳಿದ ವ್ಯಕ್ತಿಯನ್ನು ಟ್ರೋಲ್ ಮಾಡಿದ್ದಾರೆ.

Read Full Article

Click on your DTH Provider to Add TV9 Kannada