ಇಂಗ್ಲೆಂಡ್ ಟೀಮಿನ ಬ್ಯಾಟಿಂಗ್ ಅಸ್ಥಿರ ಮತ್ತು ಶಿಥಿಲವಾಗಿದೆ, ಇಂಡಿಯಾದ ಕ್ವಾಲಿಟಿ ದಾಳಿಯೆದುರು ರನ್ ಗಳಿಸಲಾರದು: ಮೈಕೆಲ್ ವಾನ್
ಡಬ್ಲ್ಯೂಟಿಸಿ ಫೈನಲ್ನಲ್ಲಿ ಭಾರತ ಕಿವೀಸ್ ತಂಡಕ್ಕೆ ಸೋತಿರುವುದು ನಿಜ; ಆದರೆ ಅದೇ ತಂಡ ಡಬ್ಲ್ಯೂಟಿಸಿ ಫೈನಲ್ ಗೆ ಮೊದಲು ಇಂಗ್ಲೆಂಡ್ ವಿರುದ್ಧ ಆಡಿದ 2-ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದಿತ್ತು, ಅಂದರೆ, ಇಂಗ್ಲೆಂಡ್ ಟೀಮಿನ ನೈತಿಕ ಸ್ಥೈರ್ಯವೂ ಚೇತೋಹಾರಿಯಾಗಿಲ್ಲ.
ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿ ಆರಂಭವಾಗಲು ಇನ್ನೂ ಒಂದು ತಿಂಗಳಿಗಿಂತ ಹೆಚ್ಚು ಸಮಯ ಬಾಕಿಯಿದೆ. ಎರಡೂ ತಂಡಗಳಿಗೆ ಇದು ಮಹತ್ವದ ಸರಣಿ. ಅತಿಥೇಯರು ಮೊನ್ನೆಯಷ್ಟೇ ಭಾರತದಲ್ಲಿ ನಡೆದ ಸರಣಿಯಲ್ಲಿ ಅನುಭವಿಸಿದ ಸೋಲಿನ ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತಿದ್ದರೆ, ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯೂಟಿಸಿ) ಫೈನಲ್ನಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಮೈದಾನಕ್ಕಿಳಿದು ಪಂದ್ಯದ ಆಟ ಸಾಧ್ಯವಾದ ಕೇವಲ ಮೂರು ದಿನಗಳಲ್ಲಿ ಅವಮಾನಕರ ರೀತಿಯಲ್ಲಿ ಸೋತ ಭಾರತಕ್ಕೆ ಕಳೆದುಕೊಂಡಿರುವ ಪ್ರತಿಷ್ಠೆಯನ್ನು ವಾಪಸ್ಸು ಪಡೆಯವ ತವಕ. ಸದರಿ ಪಂದ್ಯವವನ್ನು ಟೀಮ್ ಇಂಡಿಯಾ ಸೋತಿದೆ ಅಂತ ಅದನ್ನು ಹಗುರವಾಗಿ ಪರಿಗಣಿಸುವ ತಪ್ಪು ಇಂಗ್ಲೆಂಡ್ ಸರ್ವಥಾ ಮಾಡಲಾರದು. ಯಾಕೆಂದರೆ, ಇಂಗ್ಲಿಷರಿಗೆ ಮಾತ್ರವಲ್ಲ, ವಿಶ್ವದ ಎಲ್ಲ ಕ್ರಿಕೆಟಿಂಗ್ ರಾಷ್ಟ್ರಗಳಿಗೆ ಭಾರತ ಬಲಾಢ್ಯ ತಂಡ ಅಂತ ಚೆನ್ನಾಗಿ ಗೊತ್ತು. ಇಂಗ್ಲೆಂಡ್ ಮಾಜಿ ಸ್ಕಿಪ್ಪರ್ ಮೈಕೆಲ್ ವಾನ್, ಇಂಗ್ಲಿಷ್ ತಂಡಕ್ಕೆ ಭಾರತವನ್ನು ಸೋಲಿಸುವುದ ಸಾಧ್ಯವಾಗಲಿಕ್ಕಿಲ್ಲ ಎಂಬ ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ತಂಡದಲ್ಲಿ ಹಲವು ಕೊರತೆ ಮತ್ತು ದೌರ್ಬಲ್ಯಗಳಿವೆ, ಅವುಗಳನ್ನು ಸರಣಿ ಆರಂಭಕ್ಕೆ ಮೊದಲು ಸರಿಪಡಿಸಿಕೊಳ್ಳದಿದ್ದರೆ ತೊಂದರೆ ಎದುರಾಗೋದು ನಿಶ್ಚಿತ ಎಂದು ವಾನ್ ಹೇಳಿದ್ದಾರೆ.
ಡಬ್ಲ್ಯೂಟಿಸಿ ಫೈನಲ್ನಲ್ಲಿ ಭಾರತ ಕಿವೀಸ್ ತಂಡಕ್ಕೆ ಸೋತಿರುವುದು ನಿಜ; ಆದರೆ ಅದೇ ತಂಡ ಡಬ್ಲ್ಯೂಟಿಸಿ ಫೈನಲ್ ಗೆ ಮೊದಲು ಇಂಗ್ಲೆಂಡ್ ವಿರುದ್ಧ ಆಡಿದ 2-ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದಿತ್ತು, ಅಂದರೆ, ಇಂಗ್ಲೆಂಡ್ ಟೀಮಿನ ನೈತಿಕ ಸ್ಥೈರ್ಯವೂ ಚೇತೋಹಾರಿಯಾಗಿಲ್ಲ. ಇಂಗ್ಲೆಂಡ್ ಟೀಮಿನ ಶಿಥಿಲ ಬ್ಯಾಟಿಂಗ್ ಲೈನಪ್ ಮತ್ತು ಇನ್ನೂ ಕೆಲ ಅಂಶಗಳು ಬಗೆಹರಿಯದ ಹೊರತು, ಬಲಿಷ್ಠ ಟೀಮ್ ಇಂಡಿಯಾವನ್ನು ಸೋಲಿಸುವುದು ಸಾಧ್ಯವಾಗಲಾರದು ಎಂದು ವಾನ್ ಹೇಳಿದ್ದಾರೆ.
‘ಲಾರ್ಡ್ಸ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಸರಣಿಯ ಮೊದಲ ಟೆಸ್ಟ್ನಲ್ಲಿ ಉತ್ತಮವಾದ ಹವಾಮಾನವಿತ್ತು. ಮಳೆ ಕಾಟ ಇರಲಿಲ್ಲ. ಆದರೆ ಆ ಟೆಸ್ಟ್ನಲ್ಲಿ ಇಂಗ್ಲೆಂಡ್ ಸ್ಪಿನ್ನರ್ನನ್ನು ಆಡಿಸಲಿಲ್ಲ. ನಂತರ ಎಜ್ಬ್ಯಾಸ್ಟನ್ನಲ್ಲಿ ಆಡಿದ ಎರಡನೇ ಟೆಸ್ಟ್ನಲ್ಲೂ ಕೇವಲ ವೇಗದ ಬೌಲರ್ಗಳಿದ್ದರು. ಮತ್ತೊಂದು ಉಲ್ಲೇಖನೀಯ ಸಂಗತಿಯೆಂದರೆ, ಟೀಮಿನ ಬ್ಯಾಟಿಂಗ್ ಅಸ್ಥಿರ ಮತ್ತು ಶಿಥಿಲವಾಗಿದೆ,’ ಎಂದು, ‘ರೋಡ್ ಟು ದಿ ಆಶಸ್’ ಪಾಡ್ಕಾಸ್ಟ್ನಲ್ಲಿ ವಾನ್ ಹೇಳಿದರು.
2007 ರ ಇಂಗ್ಲೆಂಡ್ ಪ್ರವಾಸದಲ್ಲಿ ಸರಣಿ ಗೆದ್ದ ಭಾರತ ಟೀಮಿನ ನಾಯಕರಾಗಿದ್ದ ರಾಹುಲ್ ದ್ರಾವಿಡ್ ಅವರು ವಿರಾಟ್ ನಾಯಕತ್ವದ ಈ ತಂಡಕ್ಕೆ ಆ ಸಾಧನೆಯನ್ನು ಪುನರಾವರ್ತಿಸುವ ಉತ್ತಮ ಅವಕಾಶವಿದೆ ಎಂದು ಹೇಳಿದ್ದಾರೆ. 2011 , 2014 ಮತ್ತು 2018 ರಲ್ಲಿ ನಡೆದ ಸರಣಿಗಳನ್ನು ಭಾರತ ಸುಲಭವಾಗಿ ಸೋತಿತ್ತು. ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಮಾಂಟಿ ಪನೇಸಾರ್ ಅವರು, ಅತಿಥೇಯರ ಬ್ಯಾಟಿಂಗ್ ಮೊದಲಿನ ಹಾಗೆ ಸಶಕ್ತವಾಗಿಲ್ಲ, ಹಾಗಾಗಿ ಭಾರತ 5-0 ಅಂತರದಿಂದ ಸರಣಿ ಗೆದ್ದರೂ ಅಶ್ಚರ್ಯಪಡಬೇಕಿಲ್ಲ ಎಂದು ಹೇಳಿದ್ದಾರೆ.
ವಾನ್ ಸಹ ಇದೇ ಮಾತನ್ನು ಪುನರುಚ್ಛರಿಸುತ್ತಿದ್ದಾರೆ. ಬೆನ್ ಸ್ಟೋಕ್ಸ್ ಮತ್ತು ಜಾಸ್ ಬಟ್ಲರ್ ಮೊದಲಾದ ಆಟಗಾರರು ತಂಡಕ್ಕೆ ವಾಪಸ್ಸಾದರೂ, ಅತ್ಯುತ್ತಮ ಬೌಲಿಂಗ್ ಆಕ್ರಮಣ ಹೊಂದಿರುವ ಭಾರತದ ವಿರುಧ್ಧ ಬೇಕಿರುವ ಬ್ಯಾಟಿಂಗ್ ಆಳ ತಂಡದಲ್ಲಿಲ್ಲ ಎಂದು ವಾನ್ ಹೇಳಿದ್ದಾರೆ. ಇಂಗ್ಲೆಂಡ್ಗೆ ಎದುರಾಗಲಿರುವ ಮತ್ತೊಂದು ಸಮಸ್ಯೆಯೆಂದರೆ ಸ್ಟಾರ್ ಬೌಲರ್ ಜೊಫ್ರಾ ಆರ್ಚರ್ ಅವರ ಅಲಭ್ಯತೆ. ಮೊಣಕೈ ಶಸ್ತ್ರಚಿಕಿತ್ಸೆಗೊಳಗಾಗಿರುವ ಆರ್ಚರ್ ಇನ್ನೂ ಚೇತರಿತೆಯ ಹಾದಿಯಲ್ಲಿದ್ದಾರೆ.
‘ಬಟ್ಲರ್, ಸ್ಟೋಕ್ಸ್ ಮತ್ತು ವೋಕ್ಸ್ ಮೊದಲಾದವರು ತಂಡಕ್ಕೆ ಮರಳಿದ್ದಾರೆ ನಿಜ, ಅವರ ಆಗಮನ ಖಂಡಿತವಾಗಿಯೂ ಟೀಮಿನ ಶಕ್ತಿಯನ್ನು ಹೆಚ್ಚಿಸಲಿದೆ. ಆದರೆ ಟೀಮಿನ ಲೈನಪ್ ಬದಲಾಗಬೇಕು ಮತ್ತು ಈ ಬ್ಯಾಟ್ಸ್ಮನ್ಗಳು ಕ್ವಾಲಿಟಿ ಬೌಲಿಂಗ್ ಆಕ್ರಮಣದ ಎದುರು ಬಿಗ್ ಇನ್ನಿಂಗ್ಸ್ಗಳನ್ನು ಆಡುವುದು ಹೇಗೆ ಅನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಕಲಿಯಬೇಕು. ಯಾಕೆಂದರೆ ಇಂಡಿಯಾದ ಬೌಲಿಂಗ್ ಆಕ್ರಮಣ ಎರಡನೇ ದರ್ಜೆ ಟೆಸ್ಟ್ ಬೌಲಿಂಗ್ ಅಲ್ಲವೇ ಅಲ್ಲ. ಇಂಥ ಕ್ವಾಲಿಟಿ ಆಕ್ರಮಣದ ವಿರುದ್ಧ ಅವರು ರನ್ ಗಳಿಸಬಲ್ಲರು ಎಂಬ ನಂಬಿಕೆ ನನಗಿಲ್ಲ. ಇಂಡಿಯಾವನ್ನು ಸೋಲಿಸುವುದು ಇಂಗ್ಲೆಂಡ್ಗೆ ಬಹಳ ಕಷ್ಟವಾಗಲಿದೆ. ಹಾಗೆಯೇ, ಆಶಸ್ ಸರಣಿಯಲ್ಲಿ ಅವರು 450-500 ರನ್ ಗಳಿಸದಿದ್ದರೆ ಅಲ್ಲೂ ಗೆಲುವು ಸಾಧ್ಯವಾಗುವುದಿಲ್ಲ,’ ಎಂದು ವಾನ್ ಹೇಳಿದ್ದಾರೆ.
ಇದನ್ನೂ ಓದಿ: WTC Final: ಭಾರತ ತಂಡದ ಕಾಲೆಳೆದ ಮಾಜಿ ಮೈಕೆಲ್ ವಾನರನನ್ನು ನೆಟ್ಟಿಗರು ಮಳೆ ನೀರಿನಲ್ಲಿ ಝಾಡಿಸಿ, ಜಾರಿಸಿದರು!