ಕಾಂಗರೂಗಳಿಗೆ ಶುರುವಾಗಿದೆ ಬೂಮ್ರಾ ಭಯ..

ಕಾಂಗರೂಗಳಿಗೆ ಶುರುವಾಗಿದೆ ಬೂಮ್ರಾ ಭಯ..

ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಗೆ ಹನ್ನರೆಡು ದಿನ ಬಾಕಿಯಿದೆ. ಆದ್ರೆ ಆಗಲೇ ಕಾಂಗರೂಗಳಿಗೆ ಟೀಮ್ ಇಂಡಿಯಾದ ವೇಗಿಯೊಬ್ಬನ ಬಗ್ಗೆ ಭಯ ಶುರುವಾಗಿದೆ. ಹಾಗದ್ರೆ ಕಾಂಗರೂಗಳ ನಿದ್ದೆಗೆಡಿಸಿರೋ ಆ ಘಾತಕ ವೇಗಿ ಯಾರು ಗೊತ್ತಾ? ಯುಎಇನಲ್ಲಿ ಐಪಿಎಲ್ ಮುಗಿಸಿ ಕಾಂಗರೂಗಳ ನಾಡಿನಲ್ಲಿ ಬೀಡು ಬಿಟ್ಟಿರೋ ಟೀಮ್ ಇಂಡಿಯಾ ಆಟಗಾರರು, ಸಿಡ್ನಿಯಲ್ಲಿ ಆಗಲೇ ಅಭ್ಯಾಸ ಆರಂಭಿಸಿದ್ದಾರೆ. ಕೊಹ್ಲಿ ಪಡೆ ಸಮರಾಭ್ಯಾಸ ಶುರುಮಾಡುತ್ತಿದ್ದಂತೆ, ಆಸಿಸ್ ಆಟಗಾರರಿಗೆ ಟೀಮ್ ಇಂಡಿಯಾದ ಅದೊಬ್ಬ ಆಟಗಾರನ ಬಗ್ಗೆ ಭಯ ಶುರುವಾಗಿದೆ. ಆತ […]

Ayesha Banu

|

Nov 16, 2020 | 7:17 AM

ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಗೆ ಹನ್ನರೆಡು ದಿನ ಬಾಕಿಯಿದೆ. ಆದ್ರೆ ಆಗಲೇ ಕಾಂಗರೂಗಳಿಗೆ ಟೀಮ್ ಇಂಡಿಯಾದ ವೇಗಿಯೊಬ್ಬನ ಬಗ್ಗೆ ಭಯ ಶುರುವಾಗಿದೆ. ಹಾಗದ್ರೆ ಕಾಂಗರೂಗಳ ನಿದ್ದೆಗೆಡಿಸಿರೋ ಆ ಘಾತಕ ವೇಗಿ ಯಾರು ಗೊತ್ತಾ?

ಯುಎಇನಲ್ಲಿ ಐಪಿಎಲ್ ಮುಗಿಸಿ ಕಾಂಗರೂಗಳ ನಾಡಿನಲ್ಲಿ ಬೀಡು ಬಿಟ್ಟಿರೋ ಟೀಮ್ ಇಂಡಿಯಾ ಆಟಗಾರರು, ಸಿಡ್ನಿಯಲ್ಲಿ ಆಗಲೇ ಅಭ್ಯಾಸ ಆರಂಭಿಸಿದ್ದಾರೆ. ಕೊಹ್ಲಿ ಪಡೆ ಸಮರಾಭ್ಯಾಸ ಶುರುಮಾಡುತ್ತಿದ್ದಂತೆ, ಆಸಿಸ್ ಆಟಗಾರರಿಗೆ ಟೀಮ್ ಇಂಡಿಯಾದ ಅದೊಬ್ಬ ಆಟಗಾರನ ಬಗ್ಗೆ ಭಯ ಶುರುವಾಗಿದೆ. ಆತ ಬೇರಾರೂ ಅಲ್ಲ. ಯಾರ್ಕರ್ ಕಿಂಗ್ ಜಸ್ಪ್ರೀತ್ ಬೂಮ್ರಾ.

ನಿಜ.. ಸರಣಿ ಆರಂಭಕ್ಕೂ ಮುನ್ನವೇ ಕಾಂಗರೂಗಳಿಗೆ ಜಸ್ಪ್ರೀತ್ ಬೂಮ್ರಾ ಭಯ ಶುರುವಾಗಿದೆ. ಯಾಕಂದ್ರೆ ಸರಣಿಗೂ ಮುನ್ನವೇ ಆಸಿಸ್ ತಂಡದ ಮಾಜಿ ವೇಗಿ ಜೇಸನ್ ಗಿಲೆಸ್ಪಿ, ಆಸಿಸ್ ಆಟಗಾರರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಮೂರು ಫಾರ್ಮೆಟ್​ನಲ್ಲೂ ಬೂಮ್ರಾ ಡೇಂಜರ್! ಆಸಿಸ್ ಆಟಗಾರರಿಗೆ ಅರ್ಥವಾಗೋ ರೀತಿಯಲ್ಲೇ ಬೂಮ್ರಾ ಗುಣಗಾನ ಮಾಡಿರೋ ಗಿಲೆಸ್ಪಿ, ಬೂಮ್ರಾ ಟೆಸ್ಟ್, ಏಕದಿನ ಮತ್ತು ಟಿಟ್ವೆಂಟಿ ಕ್ರಿಕೆಟ್​ನಲ್ಲಿ ಡೇಂಜರಸ್ ಬೌಲರ್ ಎಂದಿದ್ದಾರೆ. ಅಲ್ಲಿಗೆ ಆಸ್ಟ್ರೇಲಿಯಾ ಕ್ರಿಕೆಟಿಗರು, ಮೂರು ಫಾರ್ಮೆಟ್​ನಲ್ಲೂ ಬೂಮ್ರಾ ಬೌಲಿಂಗ್​ನಲ್ಲಿ ಎಚ್ಚರಿಕೆಯಿಂದ ಆಡ್ಬೇಕು ಅನ್ನೋದು ಗಿಲೆಸ್ಪಿ ಮಾತಿನ ಮರ್ಮವಾಗಿದೆ.

ಬೂಮ್ರಾ ಕಿಂಗ್ ‘‘ ಟೀಮ್ ಇಂಡಿಯಾದ ಹಿಂದಿನ ಎಲ್ಲಾ ವೇಗಿಗಳನ್ನು ನಾನು ಗೌರವಿಸುತ್ತೇನೆ. ಆದರೆ ಬಹಳ ವರ್ಷಗಳ ಬಳಿಕ ಭಾರತ ತಂಡದಲ್ಲಿ ಅತ್ಯುತ್ತಮ ವೇಗದ ಬೌಲಿಂಗ್ ಪಡೆ ಹೊಂದಿರುವುದನ್ನು ನಾವು ಒಪ್ಪಿಕೊಳ್ಳಬೇಕಿದೆ. ಈಗಾಗಲೇ ಅತ್ಯುತ್ತಮ ಮಟ್ಟದಲ್ಲಿರೋ ಬುಮ್ರಾ, ತಮ್ಮ ಕೆರಿಯರ್ ಮುಕ್ತಾಯಗೊಳಿಸುವಾಗ ಸೂಪರ್ ಸ್ಟಾರ್ ಆಗಲಿದ್ದಾರೆ. ಮೂರು ಮಾದರಿಯ ಕ್ರಿಕೆಟ್​ನಲ್ಲಿ ಶ್ರೇಷ್ಠ ಬೌಲರ್ ಆಗಿ ಗುರುತಿಸಿಕೊಳ್ಳಲಿದ್ದಾರೆ.’’ -ಜೇಸನ್ ಗಿಲೆಸ್ಪಿ, ಆಸ್ಟ್ರೇಲಿಯಾ ಮಾಜಿ ವೇಗಿ

ನೋಡಿದ್ರಲ್ಲ ಜೇಸನ್ ಗಿಲೆಸ್ಪಿ ಹೇಳಿದ ಮಾತುಗಳನ್ನ… ಇದರಲ್ಲಿ ಬೂಮ್ರಾ ಬಗ್ಗೆ ಗಿಲೆಸ್ಪಿ ವಾಸ್ತವವನ್ನೇ ಹೇಳಿದ್ದಾರೆ. ಆದ್ರೆ ಗಿಲೆಸ್ಪಿ ಮಾತಿನ ಮರ್ಮ, ಆಸ್ಟ್ರೇಲಿಯಾ ಆಟಗಾರರಿಗೆ ಬಿಸಿ ಮುಟ್ಟಿಸೋದಾಗಿದೆ. ಯಾಕಂದ್ರೆ ಆಸ್ಟ್ರೇಲಿಯಾ ವಿರುದ್ಧ ಮೂರು ಫಾರ್ಮೆಟ್​ನಲ್ಲೂ ಬೂಮ್ರಾ ಶಾಂದಾರ್ ಸ್ಪೆಲ್ ಮಾಡಿ ಮಿಂಚಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಬೂಮ್ರಾ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ 21 ವಿಕೆಟ್ ಪಡೆದಿರೋ ಬೂಮ್ರಾ, ಆಸ್ಟ್ರೇಲಿಯಾ ವಿರುದ್ಧದ 14 ಏಕದಿನ ಪಂದ್ಯಗಳಲ್ಲಿ 18 ವಿಕೆಟ್ ಪಡೆದಿದ್ದಾರೆ. ಇನ್ನು ಕಾಂಗರೂಗಳ ವಿರುದ್ಧದ 11 ಟಿಟ್ವೆಂಟಿ ಪಂದ್ಯಗಳಲ್ಲಿ 15 ವಿಕೆಟ್ ಪಡೆದಿದ್ದಾರೆ.

ಬೂಮ್ರಾ ಆಸ್ಟ್ರೇಲಿಯಾ ವಿರುದ್ಧ ಮಾಡಿದ ಇದೇ ಸಾಧನೆಯನ್ನ ಪರಿಗಣಿಸಿಯೇ, ಗಿಲೆಸ್ಪಿ ಆಸಿಸ್ ಕ್ರಿಕೆಟಿಗರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದು. ಇನ್ನು ಬೂಮ್ರಾ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್, ಟಿಟ್ವೆಂಟಿ ಮತ್ತು ಏಕದಿನ ಸರಣಿ ತಂಡದಲ್ಲಿರೋದ್ರಿಂದ, ಕಾಂಗರೂಗಳಿಗೆ ಬೂಮ್ರಾ ಬಗ್ಗೆ ಟೆನ್ಶನ್ ಶುರುವಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada