KPL ಬೆಟ್ಟಿಂಗ್: KSCA ಸದಸ್ಯ ಶಿಂಧೆ ಅರೆಸ್ಟ್, ಡಿ.7ರವರೆಗೆ ಪೊಲೀಸ್ ಕಸ್ಟಡಿಗೆ
ಬೆಂಗಳೂರು: ಕೆಪಿಎಲ್ ಕ್ರಿಕೆಟ್‌ನಲ್ಲಿ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ನಗರದ ಸಿಸಿಬಿ ಪೊಲೀಸರು KSCA ಸದಸ್ಯ, ಮಾಜಿ ರಣಜಿ ಆಟಗಾರ ಸುಧೀಂದ್ರ ಶಿಂಧೆಯನ್ನು ಅರೆಸ್ಟ್ ಮಾಡಿದ್ದಾರೆ. ಸುಧೀಂದ್ರ ಶಿಂಧೆ, ಬೆಳಗಾವಿ ಪ್ಯಾಂಥರ್ಸ್ ತಂಡದ ನಿರ್ದೇಶಕ ಮತ್ತು ಕೋಚ್ ಆಗಿದ್ದ. ಈತ ತಂಡದ ಮಾಲೀಕ ಅಲಿ ಜತೆ ಶಾಮೀಲಾಗಿ ಮ್ಯಾಚ್ಫಿಕ್ಸಿಂಗ್ನಲ್ಲಿ ಭಾಗಿಯಾಗಿದ್ದ ಎಂಬ ಗುರುತರ ಆರೋಪ ಕೇಳಿಬಂದಿದೆ. 2 ದಿನದ ಹಿಂದೆ ಇಂದಿರಾ ನಗರದಲ್ಲಿರುವ ಸುಧೀಂದ್ರ ಶಿಂಧೆ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಶಿಂಧೆ […]
ಬೆಂಗಳೂರು: ಕೆಪಿಎಲ್ ಕ್ರಿಕೆಟ್‌ನಲ್ಲಿ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ನಗರದ ಸಿಸಿಬಿ ಪೊಲೀಸರು KSCA ಸದಸ್ಯ, ಮಾಜಿ ರಣಜಿ ಆಟಗಾರ ಸುಧೀಂದ್ರ ಶಿಂಧೆಯನ್ನು ಅರೆಸ್ಟ್ ಮಾಡಿದ್ದಾರೆ.
ಸುಧೀಂದ್ರ ಶಿಂಧೆ, ಬೆಳಗಾವಿ ಪ್ಯಾಂಥರ್ಸ್ ತಂಡದ ನಿರ್ದೇಶಕ ಮತ್ತು ಕೋಚ್ ಆಗಿದ್ದ. ಈತ ತಂಡದ ಮಾಲೀಕ ಅಲಿ ಜತೆ ಶಾಮೀಲಾಗಿ ಮ್ಯಾಚ್ಫಿಕ್ಸಿಂಗ್ನಲ್ಲಿ ಭಾಗಿಯಾಗಿದ್ದ ಎಂಬ ಗುರುತರ ಆರೋಪ ಕೇಳಿಬಂದಿದೆ.
2 ದಿನದ ಹಿಂದೆ ಇಂದಿರಾ ನಗರದಲ್ಲಿರುವ ಸುಧೀಂದ್ರ ಶಿಂಧೆ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಶಿಂಧೆ ಮನೆ ಮೇಲೆ ಸಿಸಿಬಿ ದಾಳಿ ನಡೆಸಿತ್ತು. ನಿನ್ನೆ ಸುಧೀಂದ್ರ ಸಿಸಿಬಿ ಎದುರು ವಿಚಾರಣೆಗೆ ಸಹ ಹಾಜರಾಗಿದ್ದ. ಈ ವೇಳೆ ಪೊಲೀಸರ ಪ್ರಶ್ನೆಗೆ ಶಿಂಧೆ ಉತ್ತರ ನೀಡದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಸಿಸಿಬಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಡಿಸೆಂಬರ್ 7ರವರೆಗೆ ಪೊಲೀಸ್ ಕಸ್ಟಡಿಗೆ: ಮಧ್ಯಾಹ್ನದ ಬಳಿಕ ಸಿಸಿಬಿ ಪೊಲೀಸರು ಆರೋಪಿಯನ್ನು 1ನೇ ಎಸಿಎಂಎಂ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಕೋರ್ಟ್ ಅವರಣದಲ್ಲಿ ಆರೋಪಿಯು ಕಣ್ಣೀರು ಹಾಕಿದ್ದು ಕಂಡುಬಂತು. ಆರೋಪಿಯನ್ನು ಡಿಸೆಂಬರ್ 7ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದರು.
Published On - 9:27 am, Wed, 4 December 19