Manish Pandey IPL 2021 SRH Team Player: ಐಪಿಎಲ್​ನಲ್ಲಿ ಭಾರತದ ಪರ ಮೊಟ್ಟಮೊದಲ ಶತಕ ಬಾರಿಸಿದ ಮನೀಷ್​ ಪಾಂಡೆ ಮೇಲೆ ಎಸ್​ಆರ್​ಹೆಚ್​ಗೆ ಅಪಾರ ವಿಶ್ವಾಸ!

ಒಂದು ದಿನ ಪಂದ್ಯಗಳಿಗೆ ಪಾಂಡೆಯನ್ನು 2015 ರಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಮರು ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಸಿಬಿ ಒಂದು ದಿನದ ಪಂದ್ಯಗಳ ಸರಣಿಯಲ್ಲಿ ಅವರು ಶತಕ ಬಾರಿಸಿ ಬಾರತಕ್ಕೆ ಗೆಲುವು ದೊರಕಿಸಿದ್ದರು.

Manish Pandey IPL 2021 SRH Team Player: ಐಪಿಎಲ್​ನಲ್ಲಿ ಭಾರತದ ಪರ ಮೊಟ್ಟಮೊದಲ ಶತಕ ಬಾರಿಸಿದ ಮನೀಷ್​ ಪಾಂಡೆ ಮೇಲೆ ಎಸ್​ಆರ್​ಹೆಚ್​ಗೆ ಅಪಾರ ವಿಶ್ವಾಸ!
ಮನೀಶ್ ಪಾಂಡೆ
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: ಆಯೇಷಾ ಬಾನು

Updated on: Apr 11, 2021 | 2:47 PM

ಇಂಡಿಯನ್ ಪ್ರಿಮೀಯರ್ ಲೀಗ್​ನಲ್ಲಿ ಭಾರತೀಯ ಆಟಗಾರರ ಪೈಕಿ ಮೊಟ್ಟ ಮೊದಲ ಶತಕ ಬಾರಿಸಿದ್ದು ಯಾರು ಅಂತ ನಿಮಗೆ ಗೊತ್ತಿರಬಹುದು. ಕನ್ನಡಿಗನೊಬ್ಬ ಮಾಡಿರುವ ಸಾಧನೆ ಅದು ಹಾಗೂ ಮತ್ತಷ್ಟು ಸ್ವಾರಸ್ಯಕರ ಅಂಶವೆಂದರೆ ಆ ಆಟಗಾರನ ಸಾಧನೆ ಕನ್ನಡದ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡುವಾಗ ಬಂದಿದ್ದು. ಹೌದು ನಿಮ್ಮ ಊಹೆ ಸರಿ, 2009ರ ಐಪಿಎಲ್ ಸೀಸನ್​ನಲ್ಲಿ ಆರ್​ಸಿಬಿ ಪರ ಆಡಿದ ಕರ್ನಾಟಕದ ಮನೀಷ್ ಪಾಂಡೆ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಆಡಿದ ಪಂದ್ಯದಲ್ಲಿ ಶತಕ ಬಾರಿಸಿದರು. ಅತ್ಯಂತ ಪ್ರತಿಭಾನ್ವಿತ ಬ್ಯಾಟ್ಸ್​ಮನ್ ಪಾಂಡೆ ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾದಾಗಿನಿಂದ ಬೇರೆ ಬೇರೆ ತಂಡಗಳಿಗೆ ಆಡುತ್ತಿದ್ದಾರೆ. ಮೊದಲ ಮೂರು ಸೀಸನ್​ಗಳಿಗೆ ಅವರು ಆರ್​ಸಿಬಿ ಪರ ಆಡಿದರು. 2011ರಲ್ಲಿ ಪಾಂಡೆಯನ್ನು ಪುಣೆ ವಾರಿಯರ್ಸ್ ತಂಡ ಖರೀದಿಸಿತು. ಆ ತಂಡಕ್ಕೆ ಎರಡು ಸೀಸನ್ ಆಡಿದ ಬಳಿಕ 2014ರಲ್ಲಿ ನಡೆದ ಹರಾಜಿನಲ್ಲಿ ಪಾಂಡೆಯನ್ನು ಕೊಲ್ಕತ್ತಾ ನೈಟ್​ ರೈಡರ್ಸ್ ತಂಡ ಖರೀದಿಸಿತು. ಆ ತಂಡಕ್ಕೆ ನಾಲ್ಕು ಸೀಸನ್ ಆಡಿದ ನಂತರ 2018ರಲ್ಲಿ ಅವರನ್ನು ಸನ್​ರೈಸರ್ಸ್ ಹೈದರಾಬಾದ್ ತಂಡ ರೂ.11 ಕೋಟಿಗಳ ಭಾರಿ ಮೊತ್ತಕ್ಕೆ ಖರೀದಿಸಿತು. ಆ ಸಾಲಿನ ಅತ್ಯಂತ ದುಬಾರಿ ಖರೀದಿ ಆದಾಗಿತ್ತು.

ಇತ್ತೀಚಿಗೆ ಐಪಿಎಲ್ 2021 ಸೀಸನ್ ಬಗ್ಗೆ ಟಿವಿ9 ನಡೆಸಿದ ಚರ್ಚೆಯಲ್ಲಿ ಭಾಗವಹಿಸಿದ್ದ ಖ್ಯಾತ ಪತ್ರಕರ್ತ ಜೋಸೆಫ್ ಹೂವರ್ ಅವರು ಮನೀಷ್ ಪಾಂಡೆ ಅಪಾರ ಪ್ರತಿಭಾವಂತನಾಗಿದ್ದರೂ ಬಿಸಿಸಿಐ ಅದನ್ನು ಗುರುತಿಸಲಿಲ್ಲ, ಒಂದೆರಡು ಪಂದ್ಯಗಳಲ್ಲಿ ವಿಫಲರಾದ ತಕ್ಷಣ ಅವರನ್ನು ತಂಡದಿಂದ ಕೈಬಿಡಲಾಗುತ್ತದೆ, ಅದು ಅವರ ಆತ್ಮವಿಶ್ವಾಸದ ಮೇಲೆ ಪರಿಣಾಮವನ್ನುಂಟು ಮಾಡುತ್ತಿದೆ ಎಂದು ಹೇಳಿದ್ದರು.

ಒಂದು ದಿನ ಪಂದ್ಯಗಳಿಗೆ ಪಾಂಡೆಯನ್ನು 2015 ರಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಮರು ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಸಿಬಿ ಒಂದು ದಿನದ ಪಂದ್ಯಗಳ ಸರಣಿಯಲ್ಲಿ ಅವರು ಶತಕ ಬಾರಿಸಿ ಬಾರತಕ್ಕೆ ಗೆಲುವು ದೊರಕಿಸಿದ್ದರು. ಬ್ಯಾಟಿಂಗ್​ನಲ್ಲಿ ತೋರಿದ ಪ್ರಭುದ್ಧತೆಯೇ ಹೈದರಾಬಾದ್ ತಂಡ ಅವರನ್ನು ಭಾರಿ ಮೊತ್ತ ತೆತ್ತು ಖರೀದಿಸುವಂತೆ ಪ್ರೇರೇಪಿಸಿತು. ಅಷ್ಟೇ ಅಲ್ಲ 2019ರ ಸೀಸನ್​ಗೆ ಅವರನ್ನು ರಿಟೇನ್ ಮಾಡಿಕೊಳ್ಳುವ ಮೂಲಕ ಅವರ ಮೇಲೆ ತಾನಿಟ್ಟಿರುವ ವಿಶ್ವಾಸವನ್ನು ಸ್ಪಷ್ಟಪಡಿಸಿತು. ಆ ಸೀಸನ್​ನಲ್ಲಿ 12 ಪಂದ್ಯಗಳನ್ನಾಡಿದ ಪಾಂಡೆ 344 ರನ್ ಕಲೆ ಹಾಕಿದರು.

Manish Pandey

ಮನೀಶ್ ಪಾಂಡೆ

ಪಾಂಡೆ ಅವರನ್ನು ಬಿಸಿಸಿಐ ಸಂಪೂರ್ಣವಾಗಿ ಕಡೆಗಣಸಿದೆ ಅಂತೇನೂ ಇಲ್ಲ. ಐಪಿಎಲ್ 2020 ಸೀಸನಲ್ಲಿ ಅವರು 16 ಪಂದ್ಯಗಳಿಂದ 425 ಬಾರಿಸಿದಾಗ ಆಸ್ಟ್ರೇಲಿಯಾ ಪ್ರವಾಸಕ್ಕೆ ಟಿ20 ಪಂದ್ಯಗಳ ಸರಣಿಗೆ ಆಯ್ಕೆ ಮಾಡಲಾಯಿತು. ಮೊದಲ ಪಂದ್ಯದಲ್ಲಿ ಪಾಂಡೆ ಸಂಜು ಸ್ಯಾಮ್ಸನ್ ನಂತರ ಬ್ಯಾಟಿಂಗ್ ಮಾಡಲು ಬಂದರು. 8 ಎಸೆತಗಳನ್ನಾಡಿ ಅವರು ಗಳಿಸಿದ್ದು 2ರನ್ ಮಾತ್ರ. ದುರದೃಷ್ಟದ ಸಂಗತಿಯೆಂದರೆ, ಮುಂದಿನ ಪಂದ್ಯಕ್ಕೆ ಅವರನ್ನು ಡ್ರಾಪ್ ಮಾಡಲಾಯಿತು. ಹೂವರ್ ಹೇಳಿದ್ದು ಅದೇ, ಪಾಂಡೆಗೆ ಫೇರ್ ರನ್ ನೀಡದೆ, ತಂಡದಿಂದ ಕೈಬಿಡಲಾಗುತ್ತಿದೆ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಹೈದರಾಬಾದ ತಂಡಕ್ಕೆ ಆಡುವಾಗ ತೋರುವ ಪ್ರದರ್ಶನಗಳಿಗಿಂತಲೂ ಅವರು ಭಾರತಕ್ಕೆ ಆಡುವಾಗಿನ ಪ್ರದರ್ಶನಗಳು ಚೆನ್ನಾಗಿರುತ್ತವೆ. ಕ್ರಿಕೆಟ್ ಪರಿಣಿತರ ಪ್ರಕಾರ, 31 ವರ್ಷ ವಯಸ್ಸಿನ ಪಾಂಡೆ ಹೈದರಾಬಾದ್​ ತಂಡದಲ್ಲಿ ಸೀನಿಯರ್ ಆಗಿರುವುದರಿಂದ ಒತ್ತಡದಲ್ಲಿ ಆಡುತ್ತಾರೆ, ಆದರೆ ಟೀಮ್ ಇಂಡಿಯಾದಲ್ಲಿ ಅವರು ಸೀನಿಯರ್​ ಅಲ್ಲ, ಆ ಹಿನ್ನೆಲೆಯಲ್ಲಿ ಅವರ ಮೇಲೆ ಒತ್ತಡ ಇರೋದಿಲ್ಲ. ಹಾಗಾಗಿ ರಾಷ್ಟ್ರೀಯ ತಂಡಕ್ಕೆ ಆಡುವಾಗ ಅವರ ಪ್ರದರ್ಶನಗಳು ಉತ್ತಮವಾಗಿರುತ್ತವೆ.

ರಾಷ್ಟ್ರೀಯ ತಂಡಕ್ಕೆ ಮರಳಬೇಕಾದರೆ ಮತ್ತು ಅಕ್ಟೋಬರ್-ನವೆಂಬರ್​ನಲ್ಲಿ ನಡೆಯುವ ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ಭಾಗವಾಗಬೇಕಾದರೆ, ಪಾಂಡೆ ಐಪಿಎಲ್​ನಲ್ಲಿ ಸತತವಾಗಿ ಉತ್ತಮ ಪ್ರದರ್ಶನಗಳನ್ನು ನೀಡಲೇಬೇಕು. ಯಾಕೆಂದರೆ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಲು ಸ್ಪರ್ಧೆ ಹೆಚ್ಚಾಗುತ್ತಿದೆ. ಸೂರ್ಯಕುಮಾರ ಯಾದವ್, ಇಶಾನ್ ಕಿಷನ್, ಸಂಜು ಸ್ಯಾಮ್ಸನ್ ಮೊದಲಾದವರೆಲ್ಲ ಮಧ್ಯಮ ಕ್ರಮಾಂಕದ ಸ್ಲಾಟ್​ಗಾಗಿ ಕಾಯುತ್ತಿದ್ದಾರೆ. ಯಾದವ್ ಮತ್ತು ಕಿಷನ್ ತಮಗೆ ದೊರೆತ ಅವಕಾಶಗಳಲ್ಲಿ ಮಿಂಚಿದ್ದಾರೆ.

ಪಾಂಡೆ ಭಾರತದ ಅತ್ಯುತ್ತಮ ಫೀಲ್ಡರ್​ಗಳಲ್ಲಿ ಒಬ್ಬರು ಎನ್ನುವುದು ನಿರ್ವಿವಾದಿತ. ಆದರೆ, ಟೀಮಿಗೆ ಆಯ್ಕೆಯಾಗುತ್ತಿರುವ ಯುವ ಆಟಗಾರರು ಸಹ ಉತ್ತಮ ಫೀಲ್ಡರ್​ಗಳಾಗಿದ್ದಾರೆ. ಹಾಗಾಗಿ, ಪಾಂಡೆ ಬ್ಯಾಟಿಂಗ್ ಮಾತ್ರವಲ್ಲದೆ ಫೀಲ್ಡಿಂಗ್​ನಲ್ಲೂ ಪಾರಮ್ಯ ಮೆರೆಯಬೇಕು.

ಐಪಿಎಲ್​ನಲ್ಲಿ ಇದುವರೆಗೆ 146 ಪಂದ್ಯಗಳನ್ನಾಡಿರುವ ಪಾಂಡೆ 29.71 ಸರಾಸರಿ ಮತ್ತು 121.6 ಸ್ಟ್ರೈಕ್​ರೇಟ್​ನೊಂದಿಗೆ 3,268 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು 18 ಅರ್ಧ ಶತಕಗಳು ಅವರ ಬ್ಯಾಟ್​ನಿಂದ ಸಿಡಿದಿವೆ. ಹೈದರಾಬಾದ ತಂಡಕ್ಕೆ ಈಗಲೂ ಅವರ ಮೇಲೆ ಆಷ್ಟೇ ವಿಶ್ವಾಸವಿದೆ. ಅದನ್ನು ಉಳಿಸಿಕೊಂಡು ಪಾಂಡೆ ಟನ್​ಗಟ್ಟಲೆ ರನ್ ಗಳಿಸಬೇಕಿದೆ.

ಇದನ್ನೂ ಓದಿ: IPL 2021: ಐಪಿಎಲ್ 14ನೇ ಆವೃತ್ತಿಯ ಕೆಲವು ಪಂದ್ಯಗಳಿಗೆ ಅಲಭ್ಯರಾಗಲಿರುವ ಆಟಗಾರರು ಇವರೇ!

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ