AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Football Team: ಭಾರತ ಫುಟ್ಬಾಲ್ ತಂಡಕ್ಕೆ ನೂತನ ಕೋಚ್ ನೇಮಕ

Indian Football Team: ಸ್ಪೇನ್‌ನ ಮನೋಲೋ ಮಾರ್ಕ್ವೆಜ್ ಅವರನ್ನು ಭಾರತೀಯ ಪುರುಷರ ಫುಟ್ಬಾಲ್ ತಂಡದ ನೂತನ ಕೋಚ್ ಆಗಿ ನೇಮಿಸಲಾಗಿದೆ. ಪ್ರಸ್ತುತ ಅವರು ಇಂಡಿಯನ್ ಸೂಪರ್ ಲೀಗ್​ನಲ್ಲಿ ಆಡುತ್ತಿರುವ ಎಫ್‌ಸಿ ಗೋವಾ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಭಾರತ ಫುಟ್ಬಾಲ್ ತಂಡದ ಸಾರಥಿಯಾಗಲಿದ್ದಾರೆ.

Indian Football Team: ಭಾರತ ಫುಟ್ಬಾಲ್ ತಂಡಕ್ಕೆ ನೂತನ ಕೋಚ್ ನೇಮಕ
ಭಾರತ ಫುಟ್ಬಾಲ್ ತಂಡ
ಪೃಥ್ವಿಶಂಕರ
|

Updated on: Jul 20, 2024 | 10:40 PM

Share

ಸ್ಪೇನ್‌ನ ಮನೋಲೋ ಮಾರ್ಕ್ವೆಜ್ ಅವರನ್ನು ಭಾರತೀಯ ಪುರುಷರ ಫುಟ್ಬಾಲ್ ತಂಡದ ನೂತನ ಕೋಚ್ ಆಗಿ ನೇಮಿಸಲಾಗಿದೆ. ಪ್ರಸ್ತುತ ಅವರು ಇಂಡಿಯನ್ ಸೂಪರ್ ಲೀಗ್​ನಲ್ಲಿ ಆಡುತ್ತಿರುವ ಎಫ್‌ಸಿ ಗೋವಾ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಭಾರತ ಫುಟ್ಬಾಲ್ ತಂಡದ ಸಾರಥಿಯಾಗಲಿದ್ದಾರೆ. ಇಂದು ನಡೆದ ಫುಟ್ಬಾಲ್ ಫೆಡರೇಶನ್‌ನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮನೋಲೋ ಮಾರ್ಕ್ವೆಜ್ ಒಪ್ಪಂದದ ಪ್ರಕಾರ 2024- 25 ರ ಆವೃತ್ತಿಯಲ್ಲಿ ಎಫ್‌ಸಿ ಗೋವಾ ತಂಡದಲ್ಲೂ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದು, ಇತ್ತ ಭಾರತ ಫುಟ್ಬಾಲ್ ತಂಡಕ್ಕೂ ತರಬೇತಿ ನೀಡಲಿದ್ದಾರೆ. ಎಫ್‌ಸಿ ಗೋವಾ ತಂಡದೊಂದಿಗಿನ ಒಪ್ಪಂದ ಮುಗಿದ ಬಳಿಕ ಅವರು ಪೂರ್ಣ ಪ್ರಮಾಣದಲ್ಲಿ ಭಾರತ ತಂಡಕ್ಕೆ ತರಬೇತುದಾರರಾಗಲಿದ್ದಾರೆ.

ವಾಸ್ತವವಾಗಿ ಎಐಎಫ್‌ಎಫ್ ಕಳೆದ ತಿಂಗಳಷ್ಟೇ ಮಾಜಿ ಕೋಚ್ ಇಗೊರ್ ಸ್ಟಿಮಾಚ್ ಅವರನ್ನು ಈ ಹುದ್ದೆಯಿಂದ ತೆಗೆದುಹಾಕಿತ್ತು. ಸ್ಟಿಮಾಚ್ ಅವರ ನೇತೃತ್ವದಲ್ಲಿ ಭಾರತ ಫುಟ್ಬಾಲ್ ತಂಡ ವಿಶ್ವಕಪ್ ಅರ್ಹತಾ ಸುತ್ತಿನ ಮೂರನೇ ಸುತ್ತನ್ನು ತಲುಪಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸ್ಟಿಮಾಚ್ ಅವರನ್ನು ಈ ಹುದ್ದೆಯಿಂದ ಕೆಳಗಿಳಿಸಿ, ಮುಖ್ಯ ಕೋಚ್​ಗಾಗಿಹುಡುಕಾಟ ನಡೆಸಿತ್ತು. ಇದೀಗ ಕಳೆದ ನಾಲ್ಕು ವರ್ಷಗಳಿಂದ ಭಾರತದ ಅಗ್ರ ಲೀಗ್ ಐಎಸ್‌ಎಲ್‌ನಲ್ಲಿ ತರಬೇತಿ ನೀಡುತ್ತಿರುವ ಮಾರ್ಕ್ವೆಜ್‌ ಅವರನ್ನು ಈ ಸ್ಥಾನಕ್ಕೆ ತಂದುಕೂರಿಸಿದೆ.

ಫೆಡರೇಶನ್ ಹೇಳಿದ್ದೇನು?

ಫೆಡರೇಶನ್ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ, ತಕ್ಷಣವೇ ಜಾರಿಗೆ ಬರುವಂತೆ 55 ವರ್ಷದ ಮಾರ್ಕ್ವೆಜ್ ಭಾರತ ಫುಟ್ಬಾಲ್ ತಂಡದ ಮುಖ್ಯ ಕೋಚ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಅವರನ್ನು ಸ್ವಾಗತಿಸಲು ನಾವು ಸಂತೋಷಪಡುತ್ತೇವೆ. ನಾವು ಅವರ ಜೊತೆ ಬಹಳ ದಿನಗಳಿಂದ ಕೆಲಸ ಮಾಡಲು ಬಯಸಿದ್ದೆವು ಎಂದು ತಿಳಿಸಿದೆ. ಸದ್ಯಕ್ಕೆ ಮಾರ್ಕ್ವೆಜ್ ಅವರ ಅಧಿಕಾರಾವಧಿಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ನೀಡಲ್ಲವಾದರೂ, ಮುಂದಿನ 3 ವರ್ಷಗಳವರೆಗೆ ಅವರು ತಂಡಕ್ಕೆ ತರಬೇತಿ ನೀಡುವ ಸಾಧ್ಯತೆಗಳಿವೆ.

ಸಂತಸ ವ್ಯಕ್ತಪಡಿಸಿದ ಮಾರ್ಕ್ವೆಜ್

ಭಾರತ ರಾಷ್ಟ್ರೀಯ ಫುಟ್ಬಾಲ್ ತಂಡದ ಕೋಚ್ ಆಗಿ ನೇಮಕಗೊಂಡ ನಂತರ ಹರ್ಷವ್ಯಕ್ತಪಡಿಸಿರುವ ಮನೋಲೊ ಮಾರ್ಕ್ವೆಜ್, ‘ಇದು ನನಗೆ ಗೌರವವಾಗಿದೆ. ನಾನು ಭಾರತವನ್ನು ನನ್ನ ಎರಡನೇ ಮನೆ ಎಂದು ಪರಿಗಣಿಸುತ್ತೇನೆ. ನಾನು ಎಫ್‌ಸಿ ಗೋವಾ ಕ್ಲಬ್‌ನ ಮುಖ್ಯ ಕೋಚ್ ಆಗಿದ್ದರೂ ನನಗೆ ವಿನಾಯಿತಿ ನೀಡಿದ್ದಕ್ಕಾಗಿ ನಾನು ಎಫ್‌ಸಿ ಗೋವಾ ಕ್ಲಬ್‌ಗೆ ಕೃತಜ್ಞನಾಗಿದ್ದೇನೆ ಎಂದಿದ್ದಾರೆ.

ಮಾರ್ಕ್ವೆಜ್ ಅವರ ವೃತ್ತಿಜೀವನ ಹೇಗಿತ್ತು?

ಮಾರ್ಕ್ವೆಜ್ 2020 ರಿಂದ ಇಂಡಿಯನ್ ಸೂಪರ್​ ಲೀಗ್​ನ ಭಾಗವಾಗಿದ್ದಾರೆ. ಈ ಸಮಯದಲ್ಲಿ ಅವರು ಎರಡು ವಿಭಿನ್ನ ಕ್ಲಬ್‌ಗಳೊಂದಿಗೆ ಕೆಲಸ ಮಾಡಿದ್ದಾರೆ. 2020 ರಲ್ಲಿ ಹೈದರಾಬಾದ್ ಎಫ್‌ಸಿಯ ತರಬೇತುದಾರರಾಗಿ ಆಯ್ಕೆಯಾದ ಅವರು 2023 ರವರೆಗೆ ಈ ತಂಡದ ಭಾಗವಾಗಿದ್ದರು. ಅವರ ಅವಧಿಯಲ್ಲಿ, ಹೈದರಾಬಾದ್ ಸತತ ಎರಡು ಬಾರಿ ಈ ಲೀಗ್​ನ ಲೀಗ್ ಶೀಲ್ಡ್ ರೇಸ್‌ನಲ್ಲಿ ರನ್ನರ್ ಅಪ್ ಆದರೆ, ಒಮ್ಮೆ ಚಾಂಪಿಯನ್‌ ಆಗಿಯೂ ಹೊರಹೊಮ್ಮಿತ್ತು. ಇದಾದ ನಂತರ 2023ರಲ್ಲಿ ಅವರು ಎಪ್​ಸಿ ಗೋವಾ ತಂಡವನ್ನು ಸೇರಿದರು. ಇದಕ್ಕೂ ಮೊದಲು, ಅವರು ಸ್ಪೇನ್‌ನ ಲಾ ಲಿಗಾದಲ್ಲಿ ಲಾಸ್ ಪಾಲ್ಮಾಸ್ ಕ್ಲಬ್‌ನ ವ್ಯವಸ್ಥಾಪಕರಾಗಿಯೂ ಕೆಲಸ ಮಾಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ