ಕೊಯ್ಲಿ ಹಚ್ಚಿದ ಧೋನಿ ನಿವೃತ್ತಿಯ ಕಾಡ್ಗಿಚ್ಚು?

ದೆಹಲಿ: ಗುರುವಾರ ಭಾರತ ಕ್ರಿಕೆಟ್​ ತಂಡದ ಕ್ಯಾಪ್ಟನ್​ ವಿರಾಟ್ ಕೊಯ್ಲಿ ಒಂದು ಸ್ಪೋಟಕ ಟ್ವೀಟ್ ನ್ನ ಮಾಡಿದ್ರು, ಆ ಟ್ವೀಟ್ ಧೋನಿ ಅಭಿಮಾನಿಗಳಿಗೆ ಇಡೀ ದಿನ ಆತಂಕದ ಜೊತೆಗೆ ತಲ್ಲಣ ಮೂಡಿಸಿತ್ತು. ಆ ಒಂದು ಟ್ವೀಟ್ ಧೋನಿ ತಮ್ಮ ಕ್ರಿಕೇಟಿಗ ಬದುಕನ್ನ ಮುಕ್ತಾಯ ಮಾಡ್ತಾರ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಿತು. ಅದೇ ಸಂಜೆ ಧೋನಿ ಸುದ್ದಿಗೋಷ್ಠಿ ಕರೆದಿದ್ರು. ವಿರಾಟ್ ಕೊಯ್ಲಿಯ ಆ ಟ್ವೀಟ್ ನೋಡಿದ ಮಂದಿ ಧೋನಿ ನಿವೃತ್ತಿ ಕೊಡೋಕೆ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ ಅನ್ನೋ ವಿಚಾರ […]

ಕೊಯ್ಲಿ ಹಚ್ಚಿದ ಧೋನಿ ನಿವೃತ್ತಿಯ ಕಾಡ್ಗಿಚ್ಚು?
ಸಾಧು ಶ್ರೀನಾಥ್​

Updated on: Sep 13, 2019 | 11:31 AM

ದೆಹಲಿ: ಗುರುವಾರ ಭಾರತ ಕ್ರಿಕೆಟ್​ ತಂಡದ ಕ್ಯಾಪ್ಟನ್​ ವಿರಾಟ್ ಕೊಯ್ಲಿ ಒಂದು ಸ್ಪೋಟಕ ಟ್ವೀಟ್ ನ್ನ ಮಾಡಿದ್ರು, ಆ ಟ್ವೀಟ್ ಧೋನಿ ಅಭಿಮಾನಿಗಳಿಗೆ ಇಡೀ ದಿನ ಆತಂಕದ ಜೊತೆಗೆ ತಲ್ಲಣ ಮೂಡಿಸಿತ್ತು. ಆ ಒಂದು ಟ್ವೀಟ್ ಧೋನಿ ತಮ್ಮ ಕ್ರಿಕೇಟಿಗ ಬದುಕನ್ನ ಮುಕ್ತಾಯ ಮಾಡ್ತಾರ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಿತು.

ಅದೇ ಸಂಜೆ ಧೋನಿ ಸುದ್ದಿಗೋಷ್ಠಿ ಕರೆದಿದ್ರು. ವಿರಾಟ್ ಕೊಯ್ಲಿಯ ಆ ಟ್ವೀಟ್ ನೋಡಿದ ಮಂದಿ ಧೋನಿ ನಿವೃತ್ತಿ ಕೊಡೋಕೆ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ ಅನ್ನೋ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಿತ್ತು ಆದರೆ ರಾತ್ರಿಯಾದರು ಧೋನಿ ನಿವೃತ್ತಿ ಘೋಷಿಸಲಿಲ್ಲಾ.

ಇಂತಹ ಅತಂಕಕ್ಕೆ ಎಡೆ ಮಾಡಿದ ಆ ಟ್ವೀಟ್ ನಲ್ಲಿ ಏನಿದೆ…?
ಈ ಪಂದ್ಯವನ್ನ ನಾನು ಯಾವತ್ತೂ ಮರೆಯೋದಿಲ್ಲ. ಅದು ವಿಶೇಷ ರಾತ್ರಿಯಾಗಿತ್ತು. ಅವತ್ತು ನನ್ನನ್ನು ಈ ಮನುಷ್ಯ ಪಿಚ್ ನಲ್ಲಿ ಫಿಟ್ನೆಸ್ ಟೆಸ್ಟ್ ಮಾಡಿಸಿದ ಹಾಗೆ ಧೋನಿ ಓಡಿಸಿದ್ರು.

ಇದು ಕೊಯ್ಲಿ 2016 ರಲ್ಲಿ ನಡೆದ T20 ಲೀಗ್ ಪಂದ್ಯ ದ ಅವಿಸ್ಮರಣೀಯ ಕ್ಷಣವನ್ನ ನೆನಪಿಸಿಕೊಂಡಿದ್ದಾರೆ. ಆದರೆ ಇದನ್ನು ಓದುಗರು ಬೇರೆಯೇ ರೀತಿಯ ವಿಮರ್ಶೆಯನ್ನು ಮಾಡಿಕೊಂಡಿದ್ದಾರೆ. ಈ ಸುದ್ದಿ ಎಲ್ಲಾ ಕಡೆ ಹಬ್ಬಿದಂತೆ ಬಿಸಿಸಿಐ ಹಾಗೂ ಧೋನಿ ಪತ್ನಿ ಸಾಕ್ಷಿ ಧೋನಿ ಮರು ಟ್ವೀಟ್ ಮಾಡಿ ಇದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.

ವಿರಾಟ್ ಕೊಯ್ಲಿ ಮಾಡಿದ ಆ ಒಂದು ಟ್ವೀಟ್ ನಿಂದ ಸೋಷಿಯಲ್ ಮೀಡಿಯಾದಲ್ಲಿ ಧೋನಿ ನಿವೃತ್ತಿಯ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಲು ದಾರಿ ಮಾಡಿಕೊಟ್ಟಿತು. ಸಾಕ್ಷಿ ಧೋನಿ, ಬಿಸಿಸಿಐ ಸ್ಪಷ್ಟಿಕರಣದ ನಂತರ ಧೋನಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

 

Published On - 11:29 am, Fri, 13 September 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us