ಒಲಿಂಪಿಕ್ಸ್ ಕ್ರೀಡಾಕೂಟದ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಬಾರಿ ಭಾರತಕ್ಕೆ ಚಿನ್ನದ ಪದಕ ಸಿಕ್ಕಿದೆ. ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ ಆಟಗಾರ ನೀರಜ್ ಚೋಪ್ರಾ ಚಿನ್ನದ ಪದಕ ಪಡೆಯುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿದ್ದು, ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ. ರೈತರ ಕುಟುಂಬದಲ್ಲಿ ಜನಿಸಿದ ಹರಿಯಾಣದ ಪಾಣಿಪತ್ನವರಾದ ನೀರಜ್ ಚೋಪ್ರಾ ಬಾಲ್ಯದಲ್ಲಿ ತಮ್ಮ ದೇಹದ ಬೊಜ್ಜನ್ನು ಇಳಿಸಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದರು. ಬಳಿಕ ಜಾವೆಲಿನ್ ಎಸೆತದಲ್ಲಿ ಹಿಡಿತ ಸಾಧಿಸಿ ಇದೀಗ ಇಡೀ ವಿಶ್ವದ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
23 ವರ್ಷದ ನೀರಜ್ ಚೋಪ್ರಾ ಈಗಾಗಲೇ ಭಾರತೀಯ ಸೇನೆಯಲ್ಲಿ ನಿಯೋಜಿತ ಕಿರಿಯ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಕೊರಳೊಡ್ಡುತ್ತಿದ್ದಂತೆ ಅವರ ಕುರಿತಾದ ಹೊಸ ಹೊಸ ವಿಷಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡತೊಡಗಿವೆ. ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ರಸ್ತೆ ಬದಿಯಲ್ಲಿ ಗೆಳೆಯರೊಂದಿಗೆ ಡ್ಯಾನ್ಸ್ ಮಾಡಿದ ಹಳೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ.
Neeraj Chopra can shake a leg too besides throwing Javelin to #Olympics #Gold limits ??#NeerajChopra #goldmedal #NeerajGoldChopra pic.twitter.com/7ii3oqAUiQ
— Rosy (@rose_k01) August 7, 2021
ಭಾರತದ ಕ್ರೀಡಾ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿರುವ ನೀರಜ್ ಚೋಪ್ರಾ ಅವರ ಕುರಿತಾದ ಮಾಹಿತಿಗಳನ್ನು ಲಕ್ಷಾಂತರ ಜನರು ಹುಡುಕಾಡುತ್ತಿದ್ದಾರೆ. ಈ ನಡುವೆ ಅವರ ಗೆಳೆಯರೊಬ್ಬರು ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ನೀರಜ್ ಚೋಪ್ರಾರ ಡ್ಯಾನ್ಸಿಂಗ್ ವಿಡಿಯೋ ಭಾರೀ ವೈರಲ್ ಆಗಿದ್ದು, ಕೆಲವೇ ಗಂಟೆಗಳಲ್ಲಿ 75 ಸಾವಿರಕ್ಕೂ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟಿದೆ.
A heart throb of millions already! He is gonna go places.
— Apeksha (@akuleh31) August 7, 2021
ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋ ವಿಭಾಗದಲ್ಲಿ ನೀರಜ್ ಚೋಪ್ರಾ ತಮ್ಮ ಮೊದಲ ಪ್ರಯತ್ನದಲ್ಲೇ ದಾಖಲೆಯ 87.58 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಚಾಂಪಿಯನ್ ಎನಿಸಿಕೊಂಡಿದ್ದಾರೆ. ಈ ಮೂಲಕ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಅವರಿಗೆ ಈಗಾಗಲೇ ಹಲವು ಗಣ್ಯರು ಹಾಗೂ ಸರ್ಕಾರಗಳು ಲಕ್ಷಾಂತರ ರೂ. ಹಣದ ಬಹುಮಾನ ಹಾಗೂ ಉಡುಗೊರೆಗಳನ್ನು ನೀಡಿದ್ದಾರೆ.
ಇದನ್ನೂ ಓದಿ: Success Story: 3 ಲಕ್ಷ ರೂ.ನಲ್ಲಿ ಶುರುವಾದ ಟೀ ಶಾಪ್ನ ಆದಾಯವೀಗ ವರ್ಷಕ್ಕೆ 100 ಕೋಟಿ!
Viral Video: ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲೇ ಯೋಗಾಸನ ಮಾಡಿದ ಯುವತಿ; ಶಾಕಿಂಗ್ ವಿಡಿಯೋ ಇಲ್ಲಿದೆ
Neeraj Chopra: ಚಿನ್ನ ಗೆದ್ದ ನೀರಜ್ ಮೇಲೆ ಹಣದ ಹೊಳೆ! ಬಂಗಾರದ ಮನುಷ್ಯನಿಗೆ ಸಿಕ್ಕ ಒಟ್ಟು ಬಹುಮಾನದ ಹಣವೆಷ್ಟು?
(Neeraj Chopra Olympics Gold Medalist Neeraj Chopra Old Dancing Video Goes Viral after Historic Win)