ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಸತತ 2ನೇ ಬಾರಿ ಏಷ್ಯನ್ ಗೇಮ್ಸ್ನಲ್ಲಿ ಸ್ವರ್ಣ ಪದಕಕ್ಕೆ ಕೊರೊಳೊಡ್ಡಿದ್ದಾರೆ. ಈ ಹಿಂದೆ 2018 ರ ಏಷ್ಯನ್ ಗೇಮ್ಸ್ನಲ್ಲಿ ನೀರಜ್ ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದರು. ಇದೀಗ ಮತ್ತೊಮ್ಮೆ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದಾರೆ.
NEVER EVER DOUBT THE CHAMPION
NEERAJ CHOPRA 88.88M#AsianGames #NeerajChopra pic.twitter.com/vwFz8IXMD9— Manish🇮🇳 (@manibhaii16) October 4, 2023
ಬುಧವಾರ ನಡೆದ ಏಷ್ಯನ್ ಗೇಮ್ಸ್ ಜಾವೆಲಿನ್ ಫೈನಲ್ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಬರೋಬ್ಬರಿ 88.88 ಮೀಟರ್ ದೂರಕ್ಕೆ ಭರ್ಜಿ ಎಸೆಯುವ ಮೂಲಕ ಮೊದಲ ಸ್ಥಾನ ಅಲಂಕರಿಸಿದರು. ವಿಶೇಷ ಎಂದರೆ ಭಾರತದವರೇ ಆದ ಕಿಶೋರ್ ಜೆನ್ನಾ 87.54 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ದ್ವಿತೀಯ ಸ್ಥಾನ ಪಡೆದರು. ಈ ಮೂಲಕ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಹಾಗೂ ಕಿಶೋರ್ ಜೆನ್ನಾ ಭಾರತಕ್ಕೆ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ತಂದುಕೊಟ್ಟಿದ್ದಾರೆ.
Neeraj Chopra says he wants to take team photo with the mens relay team, takes a great catch to not let the flag drop to the floor, and then joins the runners in a huddle.
Moment of the day. #AsianGames2023 pic.twitter.com/wC83MRvyYP
— Dipankar Lahiri (@soiledshoes) October 4, 2023
ಇತ್ತೀಚೆಗಷ್ಟೇ ನಡೆದ ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿದ್ದರು. ಇದರ ಬೆನ್ನಲ್ಲೇ ನಡೆದ ಡೈಮಂಡ್ ಲೀಗ್ನಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಇದೀಗ ಏಷ್ಯನ್ ಗೇಮ್ಸ್ ಮೂಲಕ ಮತ್ತೊಮ್ಮೆ ಬಂಗಾರಕ್ಕೆ ಪದಕಕ್ಕೆ ಕೊರೊಳೊಡ್ಡಿರುವುದು ವಿಶೇಷ.
ರಿಲೇನಲ್ಲೂ ಚಿನ್ನ ಓಟ:
ಪುರುಷರ 4×400 ಮೀ ರಿಲೇಯಲ್ಲಿ ಭಾರತೀಯರು ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಅಮೋಜ್ ಜೇಕಬ್, ಮುಹಮ್ಮದ್ ಅನಸ್ ಯಾಹಿಯಾ, ರಾಜೇಶ್ ರಮೇಶ್ ಮತ್ತು ಮುಹಮ್ಮದ್ ಅಜ್ಮಲ್ ಅವರನ್ನೊಳಗೊಂಡ ಭಾರತ ತಂಡವು 3:01.58 ನಿಮಿಷದಲ್ಲಿ ಗುರಿ ಮುಟ್ಟುವ ಮೂಲಕ ಬಂಗಾರದ ಪದಕ ಗೆದ್ದುಕೊಂಡರು.
THATS HOW WE WON THE 400m RELAY
Fantastic Performance #AsianGames2022 pic.twitter.com/aFhSLtJFVP
— IndiaSportsHub (@IndiaSportsHub) October 4, 2023
ರಿಲೇನಲ್ಲೂ ಚಿನ್ನ ಓಟ:
ಪುರುಷರ 4×400 ಮೀ ರಿಲೇಯಲ್ಲಿ ಭಾರತೀಯರು ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಅಮೋಜ್ ಜೇಕಬ್, ಮುಹಮ್ಮದ್ ಅನಸ್ ಯಾಹಿಯಾ, ರಾಜೇಶ್ ರಮೇಶ್ ಮತ್ತು ಮುಹಮ್ಮದ್ ಅಜ್ಮಲ್ ಅವರನ್ನೊಳಗೊಂಡ ಭಾರತ ತಂಡವು 3:01.58 ನಿಮಿಷದಲ್ಲಿ ಗುರಿ ಮುಟ್ಟುವ ಮೂಲಕ ಬಂಗಾರದ ಪದಕ ಗೆದ್ದುಕೊಂಡರು.
Published On - 6:30 pm, Wed, 4 October 23