BWF World Championships: ಫೈನಲ್​ಗೆ ಲಗ್ಗೆಯಿಟ್ಟು ಐತಿಹಾಸಿಕ ಸಾಧನೆ ಮಾಡಿದ ಶ್ರೀಕಾಂತ್ ಕಿಡಂಬಿ

Kidambi Srikanth: ವಿಶ್ವಚಾಂಪಿಯನ್​​ಶಿಪ್​ನಲ್ಲಿ ಫೈನಲ್​ ಪ್ರವೇಶ ಪಡೆದುಕೊಂಡಿರುವ ಮೊದಲ ಪುರುಷರ ಆಟಗಾರನೆಂಬ ಕೀರ್ತಿಗೆ ಇದೀಗ ಶ್ರೀಕಾಂತ್​ ಭಾಜನರಾಗಿದ್ದು, ಫೈನಲ್​​​ನಲ್ಲಿ ಸೋಲು ಕಂಡರೂ ಕೂಡ ಬೆಳ್ಳಿ ಪದಕ ತಮ್ಮದಾಗಿಸಿಕೊಳ್ಳಲಿದ್ದಾರೆ.

BWF World Championships: ಫೈನಲ್​ಗೆ ಲಗ್ಗೆಯಿಟ್ಟು ಐತಿಹಾಸಿಕ ಸಾಧನೆ ಮಾಡಿದ ಶ್ರೀಕಾಂತ್ ಕಿಡಂಬಿ
kidambi srikanth
Follow us
TV9 Web
| Updated By: Vinay Bhat

Updated on: Dec 19, 2021 | 9:22 AM

ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​​​​​​ (BWF World Championships) ಸೆಮಿಫೈನಲ್​ನ ಪುರುಷರ ಸಿಂಗಲ್ಸ್​​​​ ಸ್ಪರ್ಧೆಯಲ್ಲಿ ಭಾರತದ ಆಟಗಾರ ಲಕ್ಷ್ಯಸೇನ್ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಕಿಡಂಬಿ ಶ್ರೀಕಾಂತ್ (Kidambi Srikanth)​ ಐತಿಹಾಸಿಕ ದಾಖಲೆ ಜೊತೆಗೆ ಫೈನಲ್​ಗೆ ಲಗ್ಗೆ ಹಾಕಿದ್ದಾರೆ. ಶ್ರೀಕಾಂತ್ ಹಾಗೂ ಲಕ್ಷ್ಯ ಸೇನ್ (Lakshya Sen) ನಡುವೆ ನಡೆದ ರೋಚಕ ಸೆಮಿ ಫೈನಲ್ (Semi Final) ಹಣಾಹಣಿಯಲ್ಲಿ ಮೊದಲ ಗೇಮ್ ಅನ್ನು ಲಕ್ಷ್ಯ ಸೇನ್ ಗೆದ್ದುಕೊಂಡರೆ ಎರಡನೇ ಗೇಮ್ ಶ್ರೀಕಾಂತ್ ಗೆದ್ದುಕೊಂಡರು. ಮೂರನೇ ಹಾಗೂ ನಿರ್ಣಾಯಕ ಗೇಮ್ ಅನ್ನು 20-17 ಅಂತರದಿಂದ ಗೆದ್ದುಕೊಂಡ  ಶ್ರೀಕಾಂತ್ ಫೈನಲ್ ಗೆ ಲಗ್ಗೆ ಇಟ್ಟರು.

ಶನಿವಾರ ನಡೆದ ಪುರುಷರ ಸಿಂಗಲ್ಸ್ ಸೆಮಿ ಫೈನಲ್ ನಲ್ಲಿ 20ರ ಹರೆಯದ ಕಿರಿಯ ಆಟಗಾರ ಸೇನ್ ಮೊದಲ ಗೇಮ್ ಅನ್ನು ಕೇವಲ 17 ನಿಮಿಷಗಳಲ್ಲಿ 21-17 ಅಂತರದಿಂದ ಗೆದ್ದುಕೊಂಡು ಶ್ರೀಕಾಂತ್ ಗೆ ಶಾಕ್ ನೀಡಿದರು. ಮೊದಲ ಗೇಮ್ ಸೋಲಿನ ಶಾಕ್ ನಿಂದ ಬೇಗನೆ ಚೇತರಿಸಿಕೊಂಡ ಮಾಜಿ ವಿಶ್ವ ನಂ.1 ಆಟಗಾರ ಶ್ರೀಕಾಂತ್ 2ನೇ ಗೇಮ್ ಅನ್ನು 21-14 ಅಂತರದಿಂದ ಗೆದ್ದುಕೊಂಡು ಪಂದ್ಯವನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ದರು.

ಮೂರನೇ ಗೇಮ್‌ನಲ್ಲಿ, ಮೊದಲ ಎಂಟು ಪಾಯಿಂಟ್‌ಗಳವರೆಗೆ ಹೋರಾಟ ನೇರ ನೇರವಾಗಿತ್ತು, ಲಕ್ಷ್ಯ 3 ಪಾಯಿಂಟ್‌ಗಳಿಂದ ಮುನ್ನಡೆ ಸಾಧಿಸಿದರು.ಅವರು ಪಂದ್ಯದ ಮಧ್ಯಂತರದಲ್ಲಿ 11-8 ರಿಂದ ಮುನ್ನಡೆ ಸಾಧಿಸಿದರು. 43-ಶಾಟ್‌ಗಳ ರ್ಯಾಲಿಯನ್ನು ಗೆಲ್ಲಲು ಲಕ್ಷ್ಯ ಉತ್ತಮವಾಗಿ ಆಡಿದರು. ವಿರಾಮದ ನಂತರ ಕಿಡಂಬಿ ಭರ್ಜರಿ ಕಮ್​ಬ್ಯಾಕ್ ಮಾಡಿದರು. ಮೂರನೇ ಗೇಮ್​ನಲ್ಲಿ ಮುನ್ನಡೆ ಸಾಧಿಸಲು ಅವರು ಬಹಳಷ್ಟು ಶ್ರಮವಹಿಸಿ ಅಂತಿಮವಾಗಿ 20-17 ಅಂತರದಿಂದ ಗೆದ್ದುಕೊಂಡರು.

ಈ ಮೂಲಕ ವಿಶ್ವಚಾಂಪಿಯನ್​​ಶಿಪ್​ನಲ್ಲಿ ಫೈನಲ್​ ಪ್ರವೇಶ ಪಡೆದುಕೊಂಡಿರುವ ಮೊದಲ ಪುರುಷರ ಆಟಗಾರನೆಂಬ ಕೀರ್ತಿಗೆ ಇದೀಗ ಶ್ರೀಕಾಂತ್​ ಭಾಜನರಾಗಿದ್ದು, ಫೈನಲ್​​​ನಲ್ಲಿ ಸೋಲು ಕಂಡರೂ ಕೂಡ ಬೆಳ್ಳಿ ಪದಕ ತಮ್ಮದಾಗಿಸಿಕೊಳ್ಳಲಿದ್ದಾರೆ. ಈ ಮೂಲಕ ಭಾರತದ ಬ್ಯಾಡ್ಮಿಂಟನ್​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಪುರುಷರ ವಿಭಾಗದಲ್ಲಿ ಬೆಳ್ಳಿ ಪದಕ ದೇಶಕ್ಕೆ ಸಿಗಲಿದೆ. ವಿಶೇಷವೆಂದರೆ 1983ರಲ್ಲಿ ಪ್ರಕಾಶ್ ಪಡುಕೋಣೆ ಮತ್ತು 2019ರಲ್ಲಿ ಸಾಯಿ ಪ್ರಣೀತ್ ಮಾತ್ರ ಈ ಟೂರ್ನಿಯಲ್ಲಿ ಕಂಚು ಗೆದ್ದ ಸಾಧನೆ ಮಾಡಿದ್ದಾರೆ.

India Tour of SA: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಯಾವಾಗ ಪ್ರಕಟ?: ಯಾರಿಗೆ ಚಾನ್ಸ್?

Akash Chopra: ಏಕದಿನ ಸರಣಿಗೆ ಈತನನ್ನು ಕೈಬಿಡಬಾರದು, ಅದು ಒಳ್ಳೆಯ ನಿರ್ಧಾರವಲ್ಲ ಎಂದ ಆಕಾಶ್ ಚೋಪ್ರಾ

(BWF World Championships Kidambi Srikanth become the first Indian to make the World Championship finals)

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ