ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ನಲ್ಲಿ (FIFA World Cup) ಅಚ್ಚರಿಯ ಫಲಿತಾಂಶಗಳು ಕಂಡುಬರುತ್ತಿದೆ. ಈಗಾಗಲೇ ಕ್ವಾರ್ಟರ್ಫೈನಲ್ನಲ್ಲಿ 5 ಬಾರಿಯ ವಿಶ್ವಚಾಂಪಿಯನ್ ಬ್ರೆಜಿಲ್ ಸೋಲುಂಡು ಟೂರ್ನಿಯಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ನೇತೃತ್ವದ ಬಲಿಷ್ಠ ಪೋರ್ಚುಗಲ್ ತಂಡ ಕೂಡ ಟೂರ್ನಿಯಿಂದ ಔಟಾಗಿದೆ. ಶನಿವಾರ ರಾತ್ರಿ ನಡೆದ ರೋಚಕ ಕ್ವಾರ್ಟರ್ ಫೈನಲ್ನ ಪಂದ್ಯದಲ್ಲಿ ಮುನ್ಪಡೆ ಆಟಗಾರ ಯೂಸೆಫ್ ಎನ್-ನೆಸೈರಿ ಸಿಡಿಸಿದ ಏಕೈಕ ಗೋಲಿನ ನೆರವಿನಿಂದ ಮೊರಾಕ್ಕೊ (Morocco vs Portugal) ತಂಡ ಫಿಫಾ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿತು. ಈ ಮೂಲಕ ಸೆಮೀಸ್ ತಲುಪಿದ ಮೊದಲ ಆಫ್ರಿಕನ್ ರಾಷ್ಟ್ರ ಎಂಬ ದಾಖಲೆಯನ್ನೂ ಬರೆಯಿತು. ಇದರೊಂದಿಗೆ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವಕಪ್ ಗೆಲ್ಲುವ ಕನಸು ಭಗ್ನಗೊಂಡಿತು.
ಕತಾರ್ನ ಅಲ್ ತುಮಾಮ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊರೊಕ್ಕೊ 1-0 ಗೋಲಿನ ಅಂತರದಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿತು. ಯೂಸುಫ್ ಅನ್ನಸ್ರಿ ಮೊರೊಕ್ಕೊ ಪರವಾಗಿ ಏಕೈಕ ಗೋಲು ದಾಖಲಿಸಿ ಐತಿಹಾಸಿಕ ಜಯಕ್ಕೆ ಕಾರಣರಾದರು. 42ನೇ ನಿಮಿಷದಲ್ಲಿ ಮೊರೊಕ್ಕೊ ಗೋಲು ದಾಖಲಿಸಿ ಸಂಭ್ರಮಿಸಿತು. ಕಳೆದ ಬಾರಿ ಕ್ವಾರ್ಟರ್ ಫೈನಲ್ನಲ್ಲಿ ಕೋಚ್ ಬೆಂಚು ಕಾಯಿಸಿದ್ದರಿಂದ ಅಸಮಾಧಾನದ ನಡುವೆಯೂ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವಕಪ್ ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಆಡಿದರೂ ಪಂದ್ಯವನ್ನು ಗೆಲ್ಲಿಸಲು ವಿಫಲರಾದರು.
ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಮೊರಾಕ್ಕೊ ಆಟಗಾರರು ಪೋರ್ಚುಗಲ್ ವಿರುದ್ಧವೂ ಅದೇ ಗುಣಮಟ್ಟ ಕಾಪಾಡಿಕೊಂಡು ಸಾಗಿದರು. ಪೋರ್ಚುಗೀಸ್ ಕೋಚ್ ಸ್ಯಾಂಟೋಸ್ರ ಎಲ್ಲ ತಂತ್ರಗಳನ್ನು ಮೀರಿದ ಮೊರಾಕ್ಕೊ 42 ನೇ ನಿಮಿಷದಲ್ಲಿ ಯೂಸೆಫ್ ಎನ್ ನೆಸ್ರೆ ಹೆಡರ್ ಮೂಲಕ ಗಳಿಸಿದ ಗೋಲಿನಿಂದ ಸೆಮಿಫೈನಲ್ ಟಿಕೆಟ್ ಪಡೆದುಕೊಂಡಿತು.
VIDEO: ಇಶಾನ್ ಕಿಶನ್ ದ್ವಿಶತಕವನ್ನು ಡ್ಯಾನ್ಸ್ ಮಾಡಿ ಸಂಭ್ರಮಿಸಿದ ವಿರಾಟ್ ಕೊಹ್ಲಿ
ಬೆಂಚ್ ಕಾದ ರೊನಾಲ್ಡೊ:
ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಈ ಪಂದ್ಯದಲ್ಲಿ ಕೂಡ ಹೊರಗಿಡಲಾಗಿತ್ತು. ಅವರ ಬದಲಿಗೆ ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ್ದ ಗೊನ್ಕಾಲೊ ರಾಮೋಸ್ ಆಡಿದರು. ಪೋರ್ಚುಗಲ್ ತಂಡದ ತರಬೇತುದಾರ ಸ್ಯಾಂಟೋಸ್ ತಂಡದಲ್ಲಿ ಒಂದು ಬದಲಾವಣೆ ಮಾಡಿದ್ದರು. ವಿಲಿಯಂ ಕಾರ್ವಾಲ್ಹೋ ಬದಲಿಗೆ ರುಬೆನ್ ನೆವೆಸ್ ಅವರನ್ನು ಕಣಕ್ಕಿಳಿಸಲಾಯಿತು. ತಂಡದ ಆಂತರಿಕ ಕಾರಣಗಳಿಂದಾಗಿ ರೊನಾಲ್ಡೊ ಆಟದ ಮೊದಲ 50 ನಿಮಿಷಗಳು ಬೆಂಚ್ ಕಾದರು. ಆಟದ 42ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಮೊರೊಕ್ಕೊ, ಪೋರ್ಚುಗಲ್ ಗೋಲು ಗಳಿಸಲು ಮಾಡಿದ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿತು. ಅಂತಿಮ ಕ್ಷಣದವರೆಗೂ ಪೋರ್ಚುಗಲ್ ಗೋಲು ಗಳಿಸಲು ಸಾಧ್ಯವಾಗಲೇ ಇಲ್ಲ. ರೊನಾಲ್ಡೊ ಫುಟ್ಬಾಲ್ ಕ್ರೀಡೆಯಲ್ಲಿ ಇತಿಹಾಸವೇ ನಿರ್ಮಿಸಿದ್ದರೂ ಒಂದೇ ಒಂದು ವಿಶ್ವಕಪ್ ಗೆದ್ದಿಲ್ಲ. ಪೋರ್ಚುಗಲ್ ತಂಡವನ್ನು ಪ್ರತಿನಿಧಿಸುವ ರೊನಾಲ್ಡೊ ತಂಡವನ್ನು ಕನಿಷ್ಠ ಫೈನಲ್ವರೆಗೂ ಕೊಂಡೊಯ್ದಿಲ್ಲ. ಮುಂದಿನ ವಿಶ್ವಕಪ್ ವೇಳೆಗೆ ರೊನಾಲ್ಡೊ 41 ವರ್ಷ ಪೂರೈಸಲಿದ್ದು, ವಿಶ್ವಕಪ್ ಗೆಲ್ಲುವ ಕನಸು ಈಡೇರುವ ಸಾಧ್ಯತೆ ತೀರಾ ಕಡಿಮೆಯಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ