AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Formula 4 India: ಭಾರತೀಯ ಫಾರ್ಮುಲಾ ರೇಸಿಂಗ್​ಗೆ ಚಾಲನೆ: 4 ನಗರಗಳಲ್ಲಿ ನಡೆಯಲಿದೆ ಸ್ಪರ್ಧೆ

ಭಾರತೀಯ ಫಾರ್ಮುಲಾ ರೇಸ್ ರಾಯಬಾರಿಗಳಾಗಿ ಮಾಜಿ ಫಾರ್ಮುಲಾ ಒನ್ ರೇಸ್ ಚಾಲಕ ನರೇನ್ ಕಾರ್ತಿಕೇಯನ್ ಹಾಗೂ 1983 ವಿಶ್ವಕಪ್ ವಿಜೇತ ಟೀಮ್ ಇಂಡಿಯಾ ನಾಯಕ ಕಪಿಲ್ ದೇವ್ ಅವರನ್ನು ನೇಮಿಸಲಾಗಿದೆ.

Formula 4 India: ಭಾರತೀಯ ಫಾರ್ಮುಲಾ ರೇಸಿಂಗ್​ಗೆ ಚಾಲನೆ: 4 ನಗರಗಳಲ್ಲಿ ನಡೆಯಲಿದೆ ಸ್ಪರ್ಧೆ
Formula 4 India
TV9 Web
| Edited By: |

Updated on: Aug 22, 2021 | 6:24 PM

Share

ಅಂತರರಾಷ್ಟ್ರೀಯ ಫಾರ್ಮುಲಾ ಕಾರು ರೇಸಿಂಗ್ ಕ್ರೇಜ್ ಭಾರತದಲ್ಲೂ ಶುರುವಾಗಿದೆ. ಇದರ ಮೊದಲ ಹೆಜ್ಜೆ ಎಂಬಂತೆ ಹೈದರಾಬಾದ್ ನಗರದಲ್ಲಿ ದೇಶದ ಮೊಟ್ಟಮೊದಲ ಫಾರ್ಮುಲಾ 4 ಭಾರತೀಯ ಚಾಂಪಿಯನ್‌ಶಿಪ್ ಮತ್ತು ಫಾರ್ಮುಲಾ ಭಾರತೀಯ ಪ್ರಾದೇಶಿಕ ಚಾಂಪಿಯನ್‌ಶಿಪ್‌ಗೆ ಚಾಲನೆ ನೀಡಲಾಗಿದೆ. ಭಾನುವಾರ ಎಫ್‌ಐಎ ಗ್ರೇಡ್ ಸ್ಟ್ರೀಟ್ ಸರ್ಕ್ಯೂಟ್​ನಲ್ಲಿ ಅದ್ಧೂರಿಯಾಗಿ ರೇಸಿಂಗ್ ಚಾಂಪಿಯನ್​ಶಿಪ್​ಗೆ ಚಾಲನೆ ನೀಡಲಾಯಿತು. ಅದರಂತೆ ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ನಾಲ್ಕು ನಗರಗಳಾದ ಹೊಸದಿಲ್ಲಿ, ಚೆನ್ನೈ, ಕೊಯಮತ್ತೂರು ಮತ್ತು ಹೈದರಾಬಾದ್‌ನಲ್ಲಿ ರೇಸಿಂಗ್ ಚಾಂಪಿಯನ್​ಶಿಪ್​ ನಡೆಯಲಿದೆ.

ಎಫ್ 3 ಸ್ಟ್ರೀಟ್ ಸರ್ಕ್ಯೂಟ್ ರೇಸ್​ಗೆ ಹೈದರಾಬಾದ್ ನಗರ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಫ್ಲ್ಯಾಗ್ ತೋರಿಸುವ ಮೂಲಕ ಚಾಲನೆ ನೀಡಿದರು. ಈ ರೇಸಿಂಗ್​ನಲ್ಲಿ ಭಾರತೀಯ ವಿಜೇತರಿಗೆ ಎಫ್‌ಐಎ ಸೂಪರ್ ಲೈಸೆನ್ಸ್ ಪಾಯಿಂಟ್‌ಗಳನ್ನು ನೀಡಲಾಗುತ್ತದೆ. ಇದರಿಂದ ಅಂತಾರಾಷ್ಟ್ರೀಯ ಮಟ್ಟದ ಫಾರ್ಮುಲಾ ಸಿರೀಸ್​ನಲ್ಲಿ ಪಾಲ್ಗೊಳ್ಳಲು ಭಾರತೀಯ ರೇಸರ್​ಗಳಿಗೆ ಅನುಕೂಲವಾಗಲಿದೆ.

ನಗರದ ಐಕಾನ್ ಕೇಬಲ್ ಸೇತುವೆಯಿಂದ ಆರಂಭವಾದ ರೇಸ್ ಅನ್ನು ಆರಂಭಿಕ ಸ್ಥಾನದಲ್ಲೇ ಮುಕ್ತಾಯಗೊಳಿಸಲಾಯಿತು. ಕಾರುಗಳ ವೇಗ ಮತ್ತು ಮಿಂಚಿನಂತಹ ಪೈಪೋಟಿ ಕಂಡು ವೀಕ್ಷಕರು ಕೂಡ ಪುಳಕಿತರಾದರು. ಇದರೊಂದಿಗೆ ಹೈದರಾಬಾದ್​ನಲ್ಲಿ ಫಾರ್ಮುಲಾ ಭಾರತೀಯ ಪ್ರಾದೇಶಿಕ ಚಾಂಪಿಯನ್‌ಶಿಪ್ ಮತ್ತು ಫಾರ್ಮುಲಾ 4 ಭಾರತೀಯ ಚಾಂಪಿಯನ್‌ಶಿಪ್‌ ಮೋಟಾರ್ ಸ್ಪೋಟ್ಸ್​ ಮತ್ತೆ ಜೀವ ಪಡೆದುಕೊಂಡಂತಾಗಿದೆ.

ಈ ಬಗ್ಗೆ ಮಾತನಾಡಿದ ರೇಸಿಂಗ್ ಪ್ರೊಮೊಷನ್ ಅಧ್ಯಕ್ಷ ಅಖಿಲೇಶ್ ರೆಡ್ಡಿ, “ಮೊನಾಕೊ ಒಂದು ಸಾರ್ವಭೌಮ ನಗರ. ಈ ರಾಜ್ಯವೇ ಎಫ್ 1 ಚಾಲಕರನ್ನು ಪರಿಚಯಿಸಿದೆ. ನಾವು ನೂರು ಕೋಟಿ ಜನಸಂಖ್ಯೆಯನ್ನು ಹೊಂದಿದ್ದೇವೆ. ಇಲ್ಲಿನ ಪ್ರತಿಭಾವಂತ ರೇಸಿಂಗ್ ಚಾಲಕರಿಗೆ ಅವಕಾಶ ನೀಡಲು ಇದೀಗ ನಾವು ವೇದಿಕೆಯನ್ನು ರೂಪಿಸಿದ್ದೇವೆ. ವಿಶ್ವದ ಅತ್ಯುತ್ತಮ ರೇಸರ್​ಗಳೊಂದಿಗೆ ಸ್ಪರ್ಧಿಸಲು ಮತ್ತು F1 ಮೋಟಾರ್ ಸ್ಪೋರ್ಟ್ಸ್‌ನ ಉತ್ತುಂಗಕ್ಕೇರಲು ಇದು ಅತ್ಯುತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು. ಈ ಮೂಲಕ ಭಾರತದಿಂದಲೂ ಮುಂದಿನ ದಿನಗಳಲ್ಲಿ ಎಫ್​1 ರೇಸರ್​ಗಳು ಮೂಡಿ ಬರಲಿ ಎಂದು ಆಶಿಸಿದರು.

“ನಾವು ಮೋಟಾರ್‌ಸ್ಪೋರ್ಟ್‌ಗಳ ದೀರ್ಘಾವಧಿಯ ಅಭಿವೃದ್ಧಿಗೆ ಹೂಡಿಕೆ ಮಾಡಲು ಮತ್ತು ಭಾರತದಲ್ಲಿ ಮಹತ್ವಾಕಾಂಕ್ಷಿ ರೇಸಿಂಗ್ ಚಾಲಕರಿಗೆ ವೇದಿಕೆಯನ್ನು ರೂಪಿಸಲು ಬದ್ಧರಾಗಿದ್ದೇವೆ. ರೇಸಿಂಗ್‌ನ ಮೊದಲ ಸೀಸನ್ ಫೆಬ್ರವರಿ-ಮಾರ್ಚ್ 22 ರಂದು ಹೊಸದಿಲ್ಲಿ, ಚೆನ್ನೈ, ಕೊಯಮತ್ತೂರು ಮತ್ತು ಹೈದರಾಬಾದ್​ನಲ್ಲಿ ನಡೆಯಲಿದ್ದು, ಇದು ಜಾಗತಿಕ ರೇಸಿಂಗ್ ಪ್ರತಿಭೆಗಳನ್ನು ಆಕರ್ಷಿಸಲಿದೆ ಎಂದು ಅಖಿಲೇಶ್ ರೆಡ್ಡಿ ಹೇಳಿದರು.

ಇನ್ನು ಇದೇ ವೇಳೆ ಮಾತನಾಡಿದ ಆರ್‌ಪಿಪಿಎಲ್‌ನ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ನವಜೀತ್ ಗಡೋಕೆ ಅವರು “ನಮ್ಮ ಹೂಡಿಕೆಯು ಭಾರತೀಯ ಮೋಟಾರ್‌ಸ್ಪೋರ್ಟ್‌ಗಳಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ. ಮೋಟಾರ್ ಸ್ಪೋರ್ಟ್ಸ್‌ಗಾಗಿ ವಿಶ್ವ ದರ್ಜೆಯ ವ್ಯವಸ್ಥೆಯನ್ನು ನಿರ್ಮಿಸುವುದು ಹಾಗೂ ಭಾರತದಲ್ಲಿ ಈ ಸ್ಪೋರ್ಟ್ಸ್​ ಅನ್ನು ಹೆಚ್ಚು ಪ್ರಚಲಿತಕ್ಕೆ ತರುವುದು ಇದರ ಉದ್ದೇಶವಾಗಿದೆ  ಎಂದು ತಿಳಿಸಿದರು.

ಇನ್ನು ಭಾರತೀಯ ಫಾರ್ಮುಲಾ ರೇಸ್ ರಾಯಬಾರಿಗಳಾಗಿ ಮಾಜಿ ಫಾರ್ಮುಲಾ ಒನ್ ರೇಸ್ ಚಾಲಕ ನರೇನ್ ಕಾರ್ತಿಕೇಯನ್ ಹಾಗೂ 1983 ವಿಶ್ವಕಪ್ ವಿಜೇತ ಟೀಮ್ ಇಂಡಿಯಾ ನಾಯಕ ಕಪಿಲ್ ದೇವ್ ಅವರನ್ನು ನೇಮಿಸಲಾಗಿದೆ.

ಇದನ್ನೂ ಓದಿ:Afghanistan Crisis: ತಾಲಿಬಾನ್ ಗ್ಯಾಂಗ್​ ಜೊತೆ ಕಾಣಿಸಿಕೊಂಡ ಅಫ್ಘಾನಿಸ್ತಾನ್ ಕ್ರಿಕೆಟಿಗ 

ಇದನ್ನೂ ಓದಿ: 17 ವರ್ಷದ ಹುಡುಗಿಗೆ 35 ವರ್ಷದವನ ಜೊತೆ ಲವ್ವಿ-ಡವ್ವಿ: ಲಾಡ್ಜ್​ನಲ್ಲಿ ಇಬ್ಬರನ್ನು ನೋಡಿ ಬೆಚ್ಚಿಬಿದ್ದ ಸಿಬ್ಬಂದಿ

ಇದನ್ನೂ ಓದಿ: Tim David: Rcb ತಂಡ ಸಿಂಗಾಪೂರ್ ಕ್ರಿಕೆಟಿಗನನ್ನು ಆಯ್ಕೆ ಮಾಡಿದ್ದು ಯಾಕೆ? ಇಲ್ಲಿದೆ ಉತ್ತರ

(Formula Regional Indian Championship Launched in Hyderabad)