ರಾಷ್ಟ್ರೀಯ ಮಟ್ಟದ ಖ್ಯಾತ ಶೂಟರ್ ನಮನ್ವೀರ್ ಸಿಂಗ್ ಬ್ರಾರ್ (Namanveer Singh Brar) ತಮ್ಮ ಮನೆಯಲ್ಲೇ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೊಹಾಲಿಯ ನಿವಾಸದಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ 28 ವರ್ಷದ ಶೂಟರ್ (Shooter)ಮೃತ ದೇಹ ಪತ್ತೆಯಾಗಿದ್ದು, ತಲೆಯಲ್ಲಿ ಬುಲೆಟ್ ನಿಂದಾದ ಗಾಯ ಕಂಡು ಬಂದಿದೆ ಎಂದು ಅಲ್ಲಿನ ಉಪ ಪೊಲೀಸ್ ಆಯುಕ್ತ ಗುರುಶೇರ್ ಸಿಂಗ್ ಸಂಧು ಮಾಹಿತಿ ನೀಡಿದ್ದಾರೆ.
ಸೋಮವಾರ (ಸೆ.13) ಈ ಘಟನೆ ನಡೆದಿದ್ದು, ಇದು ಆತ್ಮಹತ್ಯೆಯೋ ಅಥವಾ ಅಕಸ್ಮಾತಾಗಿ ನಡೆದ ಘಟನೆಯೋ ಎನ್ನುವ ಬಗ್ಗೆ ಇದುವರೆಗೂ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯ ಬಗ್ಗೆ ನಮನವೀರ್ ಸಿಂಗ್ ಬ್ರಾರ್ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೊಹಾಲಿಯ ಸೆಕ್ಟರ್ 71 ನಿವಾಸದಲ್ಲಿ ಅವರು ವಾಸವಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದರ ವರದಿಗಾಗಿ ಕಾಯಲಾಗುತ್ತಿದೆ. ವರದಿಯ ಬಳಿಕ ನಮಗೆ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಮೊಹಾಲಿ ಡಿಸಿಪಿ ಗುರ್ಶೀರ್ ಸಿಂಗ್ ಸಂಧು ಮಾಹಿತಿ ನೀಡಿದ್ದಾರೆ.
ದಕ್ಷಿಣ ಕೊರಿಯಾದಲ್ಲಿ ನಡೆದ ವಿವಿ ವಿಶ್ವಮಟ್ಟದ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದ ನಮನ್ ವೀರ್ ಈ ಬಾರಿ ಕಳೆದ ಮಾರ್ಚ್‌ನಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್ ಟೂರ್ನಿಯಲ್ಲಿ ಅರ್ಹತಾ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಅಲ್ಲದೇ ಹಲವು ರಾಷ್ಟ್ರೀಯ ಮಟ್ಟದ ಹಲವು ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದರು.
ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಅಲಿ ಟೂರ್ನಿಗೆ ಆಟಗಾರರ ಪಟ್ಟಿ ಬಿಡುಗಡೆ: ರಾಜ್ಯ ತಂಡದಲ್ಲಿ ರಾಹುಲ್, ಮಯಾಂಕ್
IPL 2021: ಈ ಬಾರಿ ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಆರ್ಸಿಬಿ: ರಿವೀಲ್ ಮಾಡಿತು ಫ್ರಾಂಚೈಸಿ
(National-level shooter Namanveer Singh Brar found dead in home with bullet wound in head)
Published On - 12:43 pm, Tue, 14 September 21