Neeraj Chopra: ಡೈಮಂಡ್ ಲೀಗ್​ನಲ್ಲಿ ಇತಿಹಾಸ ನಿರ್ಮಿಸಿದ ಗೋಲ್ಡನ್ ಬಾಯ್: ನೀರಜ್ ಚೋಪ್ರಾ ಐತಿಹಾಸಿಕ ಸಾಧನೆ

Diamond League: ನೀರಜ್ ಚೋಪ್ರಾ ಅವರು ಜ್ಯೂರಿಚ್​ನಲ್ಲಿ ನಡೆದ ಡೈಮಂಡ್‌ ಲೀಗ್‌ (Diamond League) ಫೈನಲ್ಸ್‌ನಲ್ಲಿ ಭಾಗಿಯಾಗಿ ಪ್ರಶಸ್ತಿ ಗೆದ್ದಿರುವ ಮೊದಲ ಭಾರತೀಯ ಆಟಗಾರ ಎಂಬ ದಾಖಲೆ ನಿರ್ಮಸಿದ್ದಾರೆ.

Neeraj Chopra: ಡೈಮಂಡ್ ಲೀಗ್​ನಲ್ಲಿ ಇತಿಹಾಸ ನಿರ್ಮಿಸಿದ ಗೋಲ್ಡನ್ ಬಾಯ್: ನೀರಜ್ ಚೋಪ್ರಾ ಐತಿಹಾಸಿಕ ಸಾಧನೆ
ನೀರಜ್ ಚೋಪ್ರಾ
Edited By:

Updated on: Sep 09, 2022 | 10:29 AM

ಇತ್ತೀಚೆಗಷ್ಟೆ ಬರ್ಮಿಂಗ್​ಹ್ಯಾಮ್​ನಲ್ಲಿ ಮುಕ್ತಾಯಗೊಂಡ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ (Commonwealth Games) ಭಾರತದ ಚಿನ್ನದ ದೊರೆ ನೀರಜ್​ ಚೋಪ್ರಾ (Neeraj Chopra) ಇಂಜುರಿಯ ಕಾರಣದಿಂದ ಹೊರಗುಳಿಬೇಕಾಯಿತು. ಆದರೆ, ಇದೀಗ ಫಿನಿಕ್ಸ್​ನಂತೆ ಎದ್ದು ಬಂದಿರುವ ನೀರಜ್ ಇತಿಹಾಸ ನಿರ್ಮಿಸಿದ್ದಾರೆ. ಚೋಪ್ರಾ ಅವರು ಜ್ಯೂರಿಚ್​ನಲ್ಲಿ ನಡೆದ ಡೈಮಂಡ್‌ ಲೀಗ್‌ (Diamond League) ಫೈನಲ್ಸ್‌ನಲ್ಲಿ ಭಾಗಿಯಾಗಿ ಪ್ರಶಸ್ತಿ ಗೆದ್ದಿರುವ ಮೊದಲ ಭಾರತೀಯ ಆಟಗಾರ ಎಂಬ ದಾಖಲೆ ನಿರ್ಮಸಿದ್ದಾರೆ.

ಇಂಜುರಿ ಹಾಗೂ ವಿಶ್ರಾಂತಿ ಬಳಿಕ ಲುಸಾನ್ನೆ ಡೈಮಂಡ್ ಲೀಗ್​​ನಲ್ಲಿ 89.08 ಮೀಟರ್‌ ದೂರದ ಐತಿಹಾಸಿಕ ಸಾಧನೆಗೈದು ನೀರಜ್‌ ಚೋಪ್ರಾ ಜ್ಯೂರಿಚ್‌ ಡೈಮಂಡ್‌ ಲೀಗ್‌ ಫೈನಲ್​ಗೆ ಅರ್ಹತೆ ಸಂಪಾದಿಸಿದ್ದರು. ಇದೀಗ ಫೈನಲ್​ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಚೋಪ್ರಾ ಅವರು ಫೌಲ್‌ನೊಂದಿಗೆ ಆಟ ಪ್ರಾರಂಭಿಸಿದ್ದರು. ಆದರೆ ತಮ್ಮ ಎರಡನೇ ಪ್ರಯತ್ನದಲ್ಲಿ 88.44 ಮೀ ದೂರ ಜಾವೆಲಿನ್ ಎಸೆದು ಅಗ್ರಸ್ಥಾನಕ್ಕೆ ಜಿಗಿದರು. ಇದು ಅವರ ವೃತ್ತಿಜೀವನದ ಅತ್ಯಂತ ದೊಡ್ಡ ಗೆಲುವುಗಳಲ್ಲಿ ಒಂದಾಗಿದೆ.

ತಮ್ಮ ಮುಂದಿನ ನಾಲ್ಕು ಎಸೆತಗಳಲ್ಲಿ 88.00ಮೀ, 86.11ಮೀ, 87.00ಮೀ ಮತ್ತು 83.60ಮೀ ಎಸೆದು ಗೋಲ್ಡನ್ ಬಾಯ್ ಚಾಂಪಿಯನ್​ ಆಗಿ ಹೊರ ಹೊಮ್ಮಿದರು. ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ಅವರು ತಮ್ಮ ನಾಲ್ಕನೇ ಪ್ರಯತ್ನದಲ್ಲಿ 86.94 ಮೀ ಎಸೆತದೊಂದಿಗೆ ಎರಡನೇ ಸ್ಥಾನ ಪಡೆದರು. ಜರ್ಮನಿಯ ಜೂಲಿಯನ್ ವೆಬರ್ ಅತ್ಯುತ್ತಮ 83.73 ಮೀಟರ್‌ಗಳೊಂದಿಗೆ ಮೂರನೇ ಸ್ಥಾನ ತಮ್ಮದಾಗಿಸಿದರು.

ಇದನ್ನೂ ಓದಿ
IND vs AFG: ಕೊಹ್ಲಿಯ ಶತಕ, ಭುವಿಯ ಮಾರಕ ದಾಳಿ; ಗೆಲುವಿನೊಂದಿಗೆ ಏಷ್ಯಾಕಪ್ ಪಯಣ ಮುಗಿಸಿದ ಭಾರತ
Asia Cup 2022: ‘ನಿನ್ನೆ ಮಾತನಾಡಿದಾಗಲೇ ಅಂದುಕೊಂಡಿದ್ದೆ’; ಕೊಹ್ಲಿಯ ಶತಕದ ಸುಳಿವು ಡಿವಿಲಿಯರ್ಸ್​ಗೆ ಮುಂಚಿಯೇ ಸಿಕ್ಕಿತ್ತಾ?
Asia Cup 2022: ಅರ್ಧದಷ್ಟು ಅಫ್ಘಾನ್ ತಂಡವನ್ನು ಏಕಾಂಗಿಯಾಗಿ ಪೆವಿಲಿಯನ್​ಗಟ್ಟಿದ ಭುವನೇಶ್ವರ್..!
Asia Cup 2022: ಕೊಹ್ಲಿಯ ಅಬ್ಬರದ ಶತಕಕ್ಕೆ ಸೋಶಿಯಲ್ ಮೀಡಿಯಾ ರಿಯಾಕ್ಷನ್ ಹೇಗಿದೆ ಗೊತ್ತಾ? ನೀವೇ ನೋಡಿ

 

ಯುಎಸ್‌ಎ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ವೇಳೆ ಗಾಯಾಳಾಗಿದ್ದ ನೀರಜ್‌ ಚೋಪ್ರಾ, ಅನಂತರದ ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌ ಟೂರ್ನಿಯನ್ನು ತಪ್ಪಿಸಿಕೊಳ್ಳಬೇಕಾಯಿತು. ಆದರೆ ಲುಸಾನ್ನೆಯಲ್ಲಿ ಭರ್ಜರಿ ಕಮ್​ಬ್ಯಾಕ್ ಮಾಡಿ ಇದೀಗ ಜ್ಯೂರಿಚ್​ನಲ್ಲೂ ದಾಖಲೆ ನಿರ್ಮಿಸಿದ್ದಾರೆ. ನೀರಜ್‌ 2017 ಮತ್ತು 2018ರ ಡೈಮಂಡ್‌ ಲೀಗ್‌ ಫೈನಲ್ಸ್‌ಗೂ ಆಯ್ಕೆಯಾಗಿದ್ದರು. ಅಲ್ಲಿ ಕ್ರಮವಾಗಿ 7ನೇ ಹಾಗೂ 4ನೇ ಸ್ಥಾನಿಯಾಗಿದ್ದರು.

Published On - 7:28 am, Fri, 9 September 22