World Cadet Wrestling Championship: ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಪ್ರಿಯಾ ಮಲಿಕ್
ಪ್ರಿಯಾ ಮಲಿಕ್ ಅವರು ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದು ಭಾರತಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಭಾರತದ ಕುಸ್ತಿ ಪಟು ಪ್ರಿಯಾ ಮಲಿಕ್ (Priya Malik) ಅವರು ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ (World Cadet Wrestling Championship) ಚಿನ್ನದ ಪದಕ ಗೆದ್ದಿದ್ದಾರೆ. ಮಹಿಳೆಯರ 73 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ಪ್ರಿಯಾ ಮಲಿಕ್, ಅಧಿಕಾರಯುತ ಪ್ರದರ್ಶನ ನೀಡುವ ಮೂಲಕ ಬೆಲರೂಸ್‌ನ ಸೆನಿಯಾ ಪಟಾಪೊವಿಚ್ ಅವರನ್ನು 5-0 ಅಂತರದಲ್ಲಿ ಮಣಿಸಿ ಪದಕ ಮುಡಿಗೇರಿಸಿಕೊಂಡರು.
ಇತ್ತ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಮೀರಾ ಬಾಯ್ ಚಾನು ಶನಿವಾರ ವೆಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿದ್ದರು. ಇದಾದ ಮರುದಿನವೇ ಪ್ರಿಯಾ ಮಲಿಕ್ ಅವರು ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದು ಭಾರತಕ್ಕೆ ಹೆಮ್ಮೆಯ ಸಂಗತಿಯಾಗಿದೆ.
Girl Power bringing laurels to India!
Heartiest congratulations to #PriyaMalik on winning?at World Cadet Wrestling Championship in Budapest, Hungary.
Proud to see our girls keeping ?? flying high on the world stage.
— Smriti Z Irani (@smritiirani) July 25, 2021
ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪ್ರಿಯಾ ಮಲಿಕ್ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದು, ಸ್ವರ್ಣ ಪದಕಗಳ ಬೇಟೆಯಾಡುತ್ತಾ ಬಂದಿದ್ದಾರೆ. 2019ರ ಖೇಲೋ ಇಂಡಿಯಾ ಕ್ರೀಡಾ ಕೂಟದಲ್ಲೂ ಪ್ರಿಯಾ ಚಿನ್ನ ಗೆದ್ದಿದ್ದರು.
ಬಳಿಕ ದಿಲ್ಲಿಯಲ್ಲಿ ನಡೆ 17ನೇ ಶಾಲಾ ಕ್ರೀಡಾಕೂಟದಲ್ಲೂ ಸ್ವರ್ಣಕ್ಕೆ ಕೊರಳೊಡ್ಡಿದ್ದರು. 2020ರಲ್ಲಿ ನಡೆ ಹಲವು ಕೂಟಗಳಲ್ಲೂ ಪ್ರಿಯಾ ಚಿನ್ನ ಗೆದ್ದಿದ್ದಾರೆ. ಇದೀಗ ವಿಶ್ವ ಕೆಡೆಟ್ ಕುಸ್ತಿ ಚಾಂಪಿಯನ್‌ಷಿಪ್ ಕೂಟದಲ್ಲಿ ಸ್ವರ್ಣ ಗೆದ್ದ ಮೊದಲ ಭಾರತೀಯ ಕುಸ್ತಿಪಟು ಎನಿಸಿಕೊಂಡಿದ್ದಾರೆ.
ವಿಶ್ವ ಕೆಡೆಟ್ ವ್ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಿಯಾ ಮಲಿಕ್ ಅವರು ಮಹಿಳೆಯರ 73 ಕೆಜಿ ತೂಕ ವಿಭಾಗದ ಫೈನಲ್‌ನಲ್ಲಿ 5-0 ಅಂತರದಿಂದ ಬೆಲಾರಸ್ ಕುಸ್ತಿಪಟು ಕ್ಸೆನಿಯಾ ಪಟಪೋವಿಚ್ ಸೋಲಿಸುವ ಮೂಲ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.
Tokyo Olympics: ಜಿಮ್ನಾಸ್ಟಿಕ್ನಲ್ಲೂ ಭಾರತಕ್ಕೆ ಕೈತಪ್ಪಿದ ಪದಕ: ಫೈನಲ್ ಪ್ರವೇಶಿಸಲು ಪ್ರಣತಿ ವಿಫಲ
Tokyo Olympics: ಭಾರತ ಭರ್ಜರಿ ಪ್ರದರ್ಶನ: ಪಿವಿ ಸಿಂಧೂ ಬಳಿಕ ಮೇರಿ ಕೋಮ್, ಮನಿಕಾಗೆ ಗೆಲುವು
(Priya Malik Clinches Gold For India at World Cadet Wrestling Championship in Hungary)
Published On - 3:21 pm, Sun, 25 July 21