PKL 2021-22: ಮತ್ತೊಂದು ರೋಚಕ ಕದನಕ್ಕೆ ಸಾಕ್ಷಿಯಾದ ಪ್ರೊ ಕಬಡ್ಡಿ: ಶುಕ್ರವಾರದ ಪಂದ್ಯ ಹೇಗಿತ್ತು?, ಯಾರಿಗೆ ಜಯ?

Pro Kabaddi League 2021-22: ಬೆಂಗಾಲ್ ವಾರಿಯರ್ಸ್ ವಿರುದ್ಧ ಹರಿಯಾಣ ಸ್ಟೀಲರ್ಸ್ 41-37 ಅಂಕಗಳಿಂದ ರೋಚಕ ಗೆಲುವು ಪಡೆಯಿತು. ಜೈಪುರ್‌ 31-26 ಅಂತರದಿಂದ ಪುಣೇರಿಯನ್ನು ಕೆಡವಿತು

PKL 2021-22: ಮತ್ತೊಂದು ರೋಚಕ ಕದನಕ್ಕೆ ಸಾಕ್ಷಿಯಾದ ಪ್ರೊ ಕಬಡ್ಡಿ: ಶುಕ್ರವಾರದ ಪಂದ್ಯ ಹೇಗಿತ್ತು?, ಯಾರಿಗೆ ಜಯ?
Pro Kabaddi League
Follow us
TV9 Web
| Updated By: Vinay Bhat

Updated on: Jan 08, 2022 | 7:32 AM

ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ (Pro Kabaddi League) ದಿನದಿಂದ ದಿನಕ್ಕೆ ರೋಚಕತೆ ಸೃಷ್ಟಿಸುತ್ತಿದೆ. ಶುಕ್ರವಾರ ಅಂಕಪಟ್ಟಿಯಲ್ಲಿ ತಳದಲ್ಲಿರುವ ನಾಲ್ಕು ತಂಡಗಳ ಮಧ್ಯೆ ನಡೆದ ಪಂದ್ಯ ಕೂಡ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ಈ ಪಂದ್ಯದಲ್ಲಿ  ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಹರ್ಯಾಣ ಸ್ಟೀಲರ್ಸ್ ತಂಡಗಳು ವಿಜಯಶಾಲಿಗಳಾದರೆ ಪುಣೇರಿ ಪಲ್ಟಾನ್ ಮತ್ತು ಬೆಂಗಾಲ್ ವಾರಿಯರ್ಸ್ ತಂಡಗಳು ನಿರಾಸೆ ಅನುಭವಿಸಿದವು. ಜೈಪುರ್‌ 31-26 ಅಂತರದಿಂದ ಪುಣೇರಿಯನ್ನು ಕೆಡವಿತು (Jaipur Pink Panthers vs Puneri Paltan). ರೈಡರ್‌ ಅರ್ಜುನ್‌ ದೇಶ್ವಾಲ್‌ 11 ಅಂಕಗಳೊಂದಿಗೆ ಜೈಪುರ್‌ ತಂಡದ ಹೀರೋ ಎನಿಸಿದರು. ಇತ್ತ ಬೆಂಗಾಲ್ ವಾರಿಯರ್ಸ್ ವಿರುದ್ಧ ಹರಿಯಾಣ ಸ್ಟೀಲರ್ಸ್ (Bengal Warriors vs Haryana Steelers and) 41-37 ಅಂಕಗಳಿಂದ ರೋಚಕ ಗೆಲುವು ಪಡೆಯಿತು.

ಪ್ಯಾಂಥರ್ಸ್‌ ಏಳು ಟಚ್‌ ಪಾಯಿಂಟ್‌ಗಳೊಂದಿಗೆ ಅರ್ಜುನ್ ಒಟ್ಟು 11 ಪಾಯಿಂಟ್ ಗಳಿಸಿ ಮಿಂಚಿದರು. ಆಲ್‌ರೌಂಡರ್ ಸಾಹುಲ್ ಕುಮಾರ್ ಮತ್ತು ಡಿಫೆಂಡರ್ ಸಂದೀಪ್ ಧುಲ್ ತಲಾ 4 ಪಾಯಿಂಟ್ ಕಲೆ ಹಾಕಿದರೆ ದೀಪಕ್ ಹೂಡಾ 3 ಪಾಯಿಂಟ್ ಗಳಿಸಿದರು. ಪುಣೇರಿ ಪರವಾಗಿ ಅಸ್ಲಮ್ ಇನಾಮ್ದಾರ್ ಆಲ್​ರೌಂಡ್ ಪ್ರದರ್ಶನ ತೋರಿ 6 ಅಂಕ ಗಳಿಸಿದರು. ಸಬ್​ಸ್ಟಿಟ್ಯೂಟ್ ಆಗಿ ಬಂದ ನಿತಿನ್ ತೋಮರ್ 8 ರೇಡ್ ಮಾಡಿ 4 ಅಂಕ ಗಳಿಸಿದರು. ಆದರೆ, ಎರಡೂ ತಂಡಗಳ ಮಧ್ಯೆ ವ್ಯತ್ಯಾಸ ಇದ್ದದ್ದು ಅರ್ಜುನ್ ದೇಶವಾಲ್ ಅವರ ಅಮೋಘ ಆಟ.

ನಿನ್ನೆ ನಡೆದ ಮತ್ತೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಹರಿಯಾಣ ಸ್ಟೀಲರ್ಸ್ 41-37 ಅಂಕಗಳಿಂದ ರೋಚಕ ಗೆಲುವು ಪಡೆಯಿತು. ಕರ್ನಾಟಕದ ಬಿ.ಸಿ. ರಮೇಶ್ ಕೋಚ್ ಆಗಿರುವ ಬೆಂಗಾಲ್ ವಾರಿಯರ್ಸ್ ತಂಡ ಈ ಪಂದ್ಯದ ಮೊದಲಾರ್ಧದವರೆಗೂ ಹಿಡಿತ ಸಾಧಿಸಿತ್ತು. ಆದರೆ, ನಂತರದ ಸಮಯದಲ್ಲಿ ಸ್ಟೀಲರ್ಸ್ ತಂಡ ಭರ್ಜರಿ ಆಲ್​ರೌಂಡ್ ಪ್ರದರ್ಶನದ ಮೂಲಕ ವಾರಿಯರ್ಸ್ ತಂಡಕ್ಕೆ ಗೆಲುವಿನ ಅವಕಾಶ ನೀಡಲಿಲ್ಲ.

ಜಿದ್ದಾಜಿದ್ದಿಯ ಹೋರಾಟದಲ್ಲಿ ಆರಂಭದಲ್ಲಿ ಅಮೋಘ ಆಟವಾಡಿದ ಬೆಂಗಾಲ್ ಎದುರಾಳಿಗಳನ್ನು ಆಲ್‌ಔಟ್ ಮಾಡಿ ಮುನ್ನಡೆ ಸಾಧಿಸಿತ್ತು. ಆದರೆ ಮೀತು ಮತ್ತು ವಿಕಾಸ್ ಖಂಡೋಲ ಭರ್ಜರಿ ರೇಡಿಂಗ್ ಮೂಲಕ ಪಂದ್ಯಕ್ಕೆ ತಿರುವು ನೀಡಿದರು. ಮೀತು 10 ಟಚ್ ಪಾಯಿಂಟ್‌ಗಳೊಂದಿಗೆ ಮಿಂಚಿದರೆ ವಿಕಾಸ್ ಒಂದು ಬೋನಸ್ ಪಾಯಿಂಟ್‌ನೊಂದಿಗೆ 9 ಪಾಯಿಂಟ್ ಗಳಿಸಿದರು. 9 ಬೋನಸ್ ಪಾಯಿಂಟ್‌ ಸೇರಿದಂತೆ 14 ಪಾಯಿಂಟ್‌ಗಳನ್ನು ಕಲೆ ಹಾಕಿದ ಬೆಂಗಾಲ್ ವಾರಿಯರ್ಸ್ ನಾಯಕ ಮಣಿಂದರ್ ಸಿಂಗ್ ನಡೆಸಿದ ಹೋರಾಟಕ್ಕೆ ಮೊಹಮ್ಮದ್ ನಬಿಭಕ್ಷ್ ಆಲ್‌ರೌಂಡ್ ಆಟದ ಮೂಲಕ ಸಹಕಾರ ನೀಡಿದರು.

ತಲಾ ಮೂರು ಟಚ್‌ ಪಾಯಿಂಟ್‌, ಬೋನಸ್ ಪಾಯಿಂಟ್ ಮತ್ತು ಟ್ಯಾಕ್ಲಿಂಗ್ ಪಾಯಿಂಟ್‌ಗಳನ್ನು ಅವರು ಗಳಿಸಿದರು. ಮೊದಲಾರ್ಧದ ಮುಕ್ತಾಯಕ್ಕೆ 18-15ರ ಮುನ್ನಡೆ ಸಾಧಿಸಿದ್ದ ವಾರಿಯರ್ಸ್‌ ನಂತರ ಮುಗ್ಗರಿಸಿತು. ದ್ವಿತೀಯಾರ್ಧದ ಆರಂಭದಲ್ಲೇ ವಾರಿಯರ್ಸ್ ತಂಡವನ್ನು ಆಲ್‌ಔಟ್ ಮಾಡಿದ ಹರಿಯಾಣ ಸಮಬಲ ಸಾಧಿಸಿತು. ನಂತರ ಜಯದತ್ತ ಮುನ್ನಡೆಯಿತು.

ಪ್ರೊ ಕಬಡ್ಡಿ ಲೀಗ್ 2022 ಅಂಕಪಟ್ಟಿ:

  • ಬೆಂಗಳೂರು ಬುಲ್ಸ್: 28 ಅಂಕ
  • ದಬಂಗ್ ಡೆಲ್ಲಿ: 26 ಅಂಕ
  • ಪಟ್ನಾ ಪೈರೇಟ್ಸ್: 24 ಅಂಕ
  • ತಮಿಳ್ ತಲೈವಾಸ್: 22 ಅಂಕ
  • ಯು ಮುಂಬಾ: 20 ಅಂಕ
  • ಹರ್ಯಾಣ ಸ್ಟೀಲರ್ಸ್: 20 ಅಂಕ
  • ಜೈಪುರ್ ಪಿಂಕ್ ಪ್ಯಾಂಥರ್ಸ್: 18 ಅಂಕ
  • ಬೆಂಗಾಲ್ ವಾರಿಯರ್ಸ್: 17 ಅಂಕ
  • ಗುಜರಾತ್ ಜೈಂಟ್ಸ್: 14 ಅಂಕ
  • ಯು ಪಿ ಯೋದ್ಧಾ: 14 ಅಂಕ
  • ಪುಣೇರಿ ಪಲ್ಟನ್: 11 ಅಂಕ
  • ತೆಲುಗು ಟೈಟಾನ್ಸ್: 10 ಅಂಕ

6 ಪಂದ್ಯಗಳಲ್ಲಿ 73ಕ್ಕೂ ಹೆಚ್ಚು ಬ್ಯಾಟಿಂಗ್ ಸರಾಸರಿ; ಆದರೂ ಈ ಆಟಗಾರ್ತಿಗೆ ವಿಶ್ವಕಪ್ ತಂಡದಲಿಲ್ಲ ಸ್ಥಾನ

ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ