ಗ್ರಿಕೋ–ರೋಮನ್ ಅಂಡರ್ 17 ವಿಶ್ವ ಚಾಂಪಿಯನ್ಶಿಪ್ನಲ್ಲಿ (U17 World Championships) ಭಾರತದ ಸೂರಜ್ ವಸಿಷ್ಠ್ (Suraj Vashisht) ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. 32 ವರ್ಷಗಳ ನಂತರ ಅಂಡರ್ 17 ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತ ಇದುವರೆಗೆ ಒಂದು ಬಾರಿಯೂ ಚಿನ್ನಕ್ಕೆ ಮುತ್ತಿಟ್ಟಿರಲಿಲ್ಲ. ಇದೀಗ ಇತಿಹಾಸ ನಿರ್ಮಿಸಿರುವ 16 ವರ್ಷದ ಸೂರಜ್ 55kg ವೈಟ್ ಕ್ಲಾಸ್ ವಿಭಾಗದಲ್ಲಿ ಯುರೋಪಿಯನ್ ಚಾಂಪಿಯನ್ ಫರಿಮಾ ಮುಸ್ತಫೆವ್ ಅವರನ್ನು 11-0 ಅಂತರದಿಂದ ಸೋಲಿಸಿ ವಿಶೇಷ ಸಾಧನೆ ಮಾಡಿ ಮೆರೆದಿದ್ದಾರೆ. ಇದಕ್ಕೂ ಮುನ್ನ 1990 ರಲ್ಲಿ ಪಪ್ಪೂ ಯಾದವ್ (Pappu Yadav) ಚಿನ್ನ ಗೆದ್ದಿದ್ದರು. ಈ ಹಿಂದೆ ಅನೇಕ ಭಾರತೀಯರು ಅಂಡರ್ 17 ವಿಶ್ವ ಚಾಂಪಿಯನ್ಶಿಪ್ನಲ್ಲಿ ಫೈನಲ್ ತಲುಪಿದ್ದರೂ ಚಿನ್ನ ಗೆಲ್ಲಲು ಸಾಧ್ಯವಾಗಿರಲಿಲ್ಲ.
ಮೂಲತಃ ಹರಿಯಾಣದ ರೋತಕ್ ಜಿಲ್ಲೆಯ ರಿತಾಲ್ ಊರಿನವರಾದ ಸೂರಜ್, ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಆರಂಭದಲ್ಲೇ ಎದುರಾಳಿಯನ್ನು ತನ್ನ ಹಿಡತಕ್ಕೆ ಪಡೆದುಕೊಂಡರು. ಮೊದಲ ಹಂತದಲ್ಲಿ ಉತ್ತಮ ಮುನ್ನಡೆ ಪಡೆದುಕೊಂಡ ಸೂರಜ್ ಎರಡನೇ ಹಂತದಲ್ಲೂ ಮೇಲುಗೈ ಸಾಧಿಸಿದರು.
SURAJ ?? is India’s first Greco-Roman U17 world champion in 32 years with his 55kg ? at #WrestleRome
India’s last champion at this level was Pappu YADAV in 1990 pic.twitter.com/kSwWnDPMId
— United World Wrestling (@wrestling) July 26, 2022
“ನನ್ನ ವೈಟ್ ಕ್ಲಾಸ್ನಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡಲು ಪ್ರಯತ್ನ ಪಡುತ್ತೇನೆ. ಹಾಗೆಯೆ ಸಿನಿಯರ್ ವಿಶ್ವ ಟೈಟನ್ ಗೆಲ್ಲುವ ಕನಸು ಕೂಡ ನನಗಿದೆ,” ಎಂದು ಸೂರಜ್ ಹೇಳಿದ್ದಾರೆ. ಗ್ರಿಕೋ–ರೋಮನ್ ವಿಶ್ವ ಚಾಂಪಿಯನ್ಶಿಪ್ನ ಹಿರಿಯರ ಕುಸ್ತಿ ವಿಭಾಗದಲ್ಲಿ ಭಾರತ ಇದುವರೆಗೆ ಚಿನ್ನದ ಪದಕ ಗೆದ್ದಿಲ್ಲ. ಈ ಸಾಧನೆ ಮಾಡಬೇಕು ಎಂಬುದು ಸೂರಜ್ ಕನಸು.