India vs West Indies ODI: ಸರಣಿ ಕ್ಲೀನ್​ಸ್ವೀಪ್: ಭಾರತದ ಆಲ್ರೌಂಡ್ ಆಟಕ್ಕೆ ಧೂಳಿಪಟವಾದ ವೆಸ್ಟ್ ಇಂಡೀಸ್

Shubhman Gill: ಶುಭ್ಮನ್ ಗಿಲ್, ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್​ನಲ್ಲಿ ಮಿಂಚಿದರೆ, ಬೌಲಿಂಗ್​ನಲ್ಲಿ ಯುಜ್ವೇಂದ್ರ ಚಹಲ್ (Yuzvendra Chahal), ಸಿರಾಜ್ ಹಾಗೂ ಶಾರ್ದೂಲ್ ಮಾರಕ ದಾಳಿ ಸಂಘಟಿಸಿದರು.

India vs West Indies ODI: ಸರಣಿ ಕ್ಲೀನ್​ಸ್ವೀಪ್: ಭಾರತದ ಆಲ್ರೌಂಡ್ ಆಟಕ್ಕೆ ಧೂಳಿಪಟವಾದ ವೆಸ್ಟ್ ಇಂಡೀಸ್
IND vs WI 3rd ODI
TV9kannada Web Team

| Edited By: Vinay Bhat

Jul 28, 2022 | 7:34 AM

ಟ್ರಿನಿಡಾಡ್​ನ ಕ್ವೀನ್ಸ್ ಪಾರ್ಕ್​ ಓವಲ್ ಮೈದಾನದಲ್ಲಿ ನಡೆದ ವೆಸ್ಟ್​ ಇಂಡೀಸ್ ವಿರುದ್ಧದ ಅಂತಿಮ ತೃತೀಯ ಏಕದಿನ ಪಂದ್ಯದಲ್ಲೂ ಭಾರತ (India vs West Indies) ಭರ್ಜರಿ ಪ್ರದರ್ಶನ ತೋರಿ ಗೆದ್ದು ಬೀಗಿದೆ. ಬ್ಯಾಟಿಂಗ್ ಬೌಲಿಂಗ್​ನಲ್ಲಿ ಮಿಂಚಿದ ಟೀಮ್ ಇಂಡಿಯಾ ಡಕ್ವರ್ತ್ ಲುಯಿಸ್ ನಿಯಮದ ಅನ್ವಯ ಬರೋಬ್ಬರಿ 119 ರನ್​ಗಳ ಅಮೋಘ ಜಯ ಸಾಧಿಸಿದೆ. ಈ ಮೂಲಕ ಮೂರೂ ಏಕದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಧವನ್ ಪಡೆ ಸರಣಿಯನ್ನು ಕ್ಲೀನ್​ಸ್ವೀಪ್ ಮಾಡಿದ ಸಾಧನೆ ಗೈದಿದೆ. ಶುಭ್ಮನ್ ಗಿಲ್ (Shubhman Gill), ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್​ನಲ್ಲಿ ಮಿಂಚಿದರೆ, ಬೌಲಿಂಗ್​ನಲ್ಲಿ ಯುಜ್ವೇಂದ್ರ ಚಹಲ್ (Yuzvendra Chahal), ಸಿರಾಜ್ ಹಾಗೂ ಶಾರ್ದೂಲ್ ಮಾರಕ ದಾಳಿ ಸಂಘಟಿಸಿದರು. ಪಂದ್ಯದ ನಡುವೆ ಮಳೆಯರಾಯನ ಆಗಮನವಾದ ಕಾರಣ ಓವರ್ ಕಡಿತಗೊಳಿಸಿ ಆಡಿಸಲಾಯಿತು.

ಮೊದಲು ಬ್ಯಾಟ್ ಮಾಡಿದ ಭಾರತ ಸ್ಫೋಟಕ ಆಟ ಪ್ರದರ್ಶಿಸಿತು. ಓಪನರ್​ಗಳಾದ ನಾಯಕ ಶಿಖರ್ ಧವನ್ ಹಾಗೂ ಶುಭ್ಮನ್ ಗಿಲ್ ಬೊಂಬಾಟ್ ಬ್ಯಾಟಿಂಗ್ ನಡೆಸಿದರು. ಮೊದಲ ವಿಕೆಟ್​ಗೆ ಈ ಜೋಡಿ 113 ರನ್​​ಗಳ ಜೊತೆಯಾಟ ಆಡಿತು. ಧವನ್ 74 ಎಸೆತಗಳಲ್ಲಿ 7 ಫೋರ್ ಬಾರಿಸಿ 58 ರನ್ ಗಳಿಸಿದರು. ನಂತರ ಎರಡನೇ ವಿಕೆಟ್​ಗೆ ಶ್ರೇಯಸ್ ಅಯ್ಯರ್ ಜೊತೆಯಾದ ಗಿಲ್ ಮತ್ತೊಂದು ಅಮೋಘ ಇನ್ನಿಂಗ್ಸ್​ ಕಟ್ಟಿದರು.

ಹೀಗಿರುವಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಕೆಲ ಸಮಯ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಮಳೆ ನಿಂತ ನಂತರ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತಕ್ಕೆ 36 ಓವರ್ ನಿಗದಿ ಪಡಿಸಲಾಯಿತು. ಬ್ಯಾಟಿಂಗ್ ಮುಂದುವರೆಸಿದ ಟೀಮ್ ಇಂಡಿಯಾ ಮತ್ತೊಮ್ಮೆ ಆರ್ಭಟಿಸಿತು. ಗಿಲ್ಅಯ್ಯರ್ 86 ರನ್​ಗಳ ಜೊತೆಯಾಟ ಆಡಿದರು. ಅಯ್ಯರ್ 34 ಎಸೆತಗಳಲ್ಲಿ 44 ರನ್ ಸಿಡಿಸಿದರು. ಸೂರ್ಯಕುಮಾರ್ ಮತ್ತೊಮ್ಮೆ ವೈಫಲ್ಯ ಅನುಭವಿಸಿ 8 ರನ್​ಗೆ ಔಟಾದರು.

ಸಂಜು ಸ್ಯಾಮ್ಸನ್ ಅಜೇಯ 6 ರನ್ ಗಳಿಸಿದರು. ಆರ್ಭಟಿಸಿದ ಗಿಲ್ ಶತಕದ ಅಂಚಿನಲ್ಲಿ ಅಜೇಯರಾಗಿ ಉಳಿದರು. 98 ಎಸೆತಗಳಲ್ಲಿ 7 ಫೋರ್, 2 ಸಿಕ್ಸರ್ ಸಿಡಿಸಿ ಅಜೇಯ 98 ರನ್ ಚಚ್ಚಿದರು. ಅಂತಿಮವಾಗಿ ಭಾರತ 36 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 225 ರನ್ ಕಲೆಹಾಕಿತು. ವೆಸ್ಟ್ ಇಂಡೀಸ್ ಪರ ಹೇಡನ್ ವಾಲ್ಶ್ 2 ವಿಕೆಟ್ ಪಡೆದರು.

ಇದನ್ನೂ ಓದಿ

ಡಕ್ವರ್ತ್ ಲೂಯಿಸ್ ನಿಯಮದಡಿಯಲ್ಲಿ ವಿಂಡೀಸ್ ಗೆಲುವಿಗೆ 35 ಓವರ್‌ಗಳಲ್ಲಿ 257 ರನ್ ಗುರಿ ಮರುನಿಗದಿಪಡಿಸಲಾಯಿತು. ಆದರೆ, ಭಾರತದ ಬೌಲಿಂಗ್ ದಾಳಿಗೆ ಕೆರಿಬಿಯನ್ ಬ್ಯಾಟರ್​ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ತಂಡದ ಪರ ಬ್ರಾಂಡನ್ ಕಿಂಗ್ ಮತ್ತು ನಾಯಕ ನಿಕೋಲಸ್ ಪೂರನ್ ತಲಾ 42 ರನ್ ಗಳಿಸಿದ್ದೇ ಹೆಚ್ಚು. ವೆಸ್ಟ್ ಇಂಡೀಸ್ 26 ಓವರ್​ಗಳಲ್ಲೇ 137 ರನ್​ಗೆ ಸರ್ವಪತನ ಕಂಡಿತು. ಭಾರತ ಪರ ಯುಜ್ವೇಂದ್ರ ಚಹಲ್ 4 ವಿಕೆಟ್ ಕಿತ್ತು ಮಿಂಚಿದರೆ, ಸಿರಾಜ್, ಶಾರ್ದೂಲ್ ತಲಾ 2 ಹಾಗೂ ಅಕ್ಷರ್, ಪ್ರಸಿದ್ಧ್ ತಲಾ 1 ವಿಕೆಟ್ ಪಡೆದರು. ಸರಣಿಯಿದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ಶುಭ್ಮನ್ ಗಿಲ್ ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada