BBL: ಬರೋಬ್ಬರಿ 55 ಸಿಕ್ಸ್: ಇಲ್ಲಿದೆ ಲಿಯಾಮ್ ಲಿವಿಂಗ್‌ಸ್ಟೋನ್ ಸಿಡಿಲಬ್ಬರದ ಝಲಕ್
BBL 2022: ಪ್ರಸ್ತುತ ಟಿ20 ಲೀಗ್ನ ಸಿಕ್ಸರ್ ಕಿಂಗ್ ಎನಿಸಿಕೊಂಡಿರುವ ಇಂಗ್ಲೆಂಡ್ನ ಸ್ಪೋಟಕ ಬ್ಯಾಟ್ಸ್ಮನ್ ಲಿಯಾಮ್ ಲಿವಿಂಗ್‌ಸ್ಟೋನ್ ಈ ಬಾರಿ ಕೂಡ ಬಿಗ್ ಬ್ಯಾಷ್ ಲೀಗ್ ಆಡಲಿದ್ದಾರೆ.
ಆಸ್ಟ್ರೇಲಿಯಾದ ಪ್ರತಿಷ್ಠಿತ ಟಿ20 ಟೂರ್ನಿ ಬಿಗ್ ಬ್ಯಾಷ್ ಲೀಗ್ (BBL 2022) ಸಿದ್ಧತೆಗಳು ಶುರುವಾಗಿದೆ. ಈಗಾಗಲೇ ಆಟಗಾರರ ಡ್ರಾಫ್ಟ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಅದರಂತೆ 8 ತಂಡಗಳು ಬಲಿಷ್ಠ ಪಡೆಯನ್ನೇ ರೂಪಿಸಿಕೊಳ್ಳಲು ಮುಂದಾಗಿದೆ. ಇದರ ನಡುವೆ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ ಈ ಬಾರಿ ಕೂಡ ಬಿಗ್ ಬ್ಯಾಷ್ ಲೀಗ್ನಿಂದ ಹೊರಗುಳಿಯಲಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಇದಾಗ್ಯೂ ಬಿಬಿಎಲ್ನಲ್ಲಿ ಈ ಸಲ ಕೂಡ ಸ್ಟಾರ್ ಆಟಗಾರರ ದಂಡೇ ಕಾಣಿಸಿಕೊಳ್ಳಲಿದೆ ಎಂದು ಬಿಗ್ ಬ್ಯಾಷ್ ಆಯೋಜಕರು ತಿಳಿಸಿದ್ದಾರೆ.
ಅದರಲ್ಲೂ ಪ್ರಸ್ತುತ ಟಿ20 ಲೀಗ್ನ ಸಿಕ್ಸರ್ ಕಿಂಗ್ ಎನಿಸಿಕೊಂಡಿರುವ ಇಂಗ್ಲೆಂಡ್ನ ಸ್ಪೋಟಕ ಬ್ಯಾಟ್ಸ್ಮನ್ ಲಿಯಾಮ್ ಲಿವಿಂಗ್‌ಸ್ಟೋನ್ ಈ ಬಾರಿ ಕೂಡ ಬಿಗ್ ಬ್ಯಾಷ್ ಲೀಗ್ ಆಡಲಿದ್ದಾರೆ. ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಅಮೋಘ ಪ್ರದರ್ಶನ ನೀಡಿದ್ದ ಲಿವಿಂಗ್‌ಸ್ಟೋನ್ ಈ ಹಿಂದೆ ಬಿಬಿಎಲ್ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅಬ್ಬರಿಸುವ ಮೂಲಕ ಎಲ್ಲರನ್ನು ರಂಜಿಸಿದ್ದರು. ಇದೀಗ ಬಿಗ್ ಬ್ಯಾಷ್ ಲೀಗ್ನಲ್ಲಿನ ಲಿಯಾಮ್ ಲಿವಿಂಗ್‌ಸ್ಟೋನ್ ಅವರ ಸಿಡಿಲಬ್ಬರದ ಝಲಕ್ಅನ್ನು ಬಿಬಿಎಲ್ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
28 ವರ್ಷದ ಸ್ಫೋಟಕ ಆಲ್‌ರೌಂಡರ್ ಲಿವಿಂಗ್‌ಸ್ಟೋನ್ ಈ ಹಿಂದೆ ಪರ್ತ್ ಸ್ಕಾಚರ್ಸ್ ಪರ ಆಡಿದ್ದರು. ಈ ವೇಳೆ 28 ಇನ್ನಿಂಗ್ಸ್‌ಗಳಲ್ಲಿ 30.39 ಸರಾಸರಿಯಲ್ಲಿ 7 ಅರ್ಧಶತಕಗಳೊಂದಿಗೆ 851 ರನ್ ಬಾರಿಸಿದ್ದಾರೆ. ವಿಶೇಷ ಎಂದರೆ ಲಿವಿಂಗ್‌ಸ್ಟೋನ್ ಬ್ಯಾಟ್ನಿಂದ ಈ ವೇಳೆ ಸಿಡಿದಿರುವುದು ಬರೋಬ್ಬರಿ 55 ಸಿಕ್ಸ್ ಹಾಗೂ 52 ಬೌಂಡರಿಗಳು. ಹೀಗಾಗಿಯೇ ಇದೀಗ ಲಿವಿಂಗ್‌ಸ್ಟೋನ್ ಅವರ ಸಿಡಿಲಬ್ಬರದ ಸಿಕ್ಸ್ಗಳ ವಿಡಿಯೋವನ್ನು ಬಿಬಿಎಲ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಇನ್ನು 12ನೇ ಸೀಸನ್ ಬಿಬಿಎಲ್ಗಾಗಿ ದ್ರಾಫ್ಟ್ ಮಾಡಲಾದ 70 ಆಟಗಾರರಲ್ಲಿ ಲಿವಿಂಗ್‌ಸ್ಟೋನ್ ಹೆಸರು ಕೂಡ ಇದೆ. ಹೀಗಾಗಿ ಮುಂದಿನ ಬಿಬಿಎಲ್ನಲ್ಲೂ ಲಿಯಾಮ್ ಲಿವಿಂಗ್‌ಸ್ಟೋನ್ ಬ್ಯಾಟ್ನಿಂದ ರಾಕೆಟ್ ಸಿಕ್ಸ್ಗಳನ್ನು ಎದುರು ನೋಡಬಹುದು.
Liam Livingstone doesn’t hit sixes. He hits HUGE sixes. ?#BBL12Draft pic.twitter.com/QutUmR05cc
— KFC Big Bash League (@BBL) July 27, 2022
ಬಿಬಿಎಲ್ 2022-2023 ತಂಡಗಳು:
- ಅಡಿಲೇಡ್ ಸ್ಟ್ರೈಕರ್ಸ್
- ಬ್ರಿಸ್ಬೇನ್ ಹೀಟ್
- ಹೋಬರ್ಟ್ ಹರಿಕೇನ್
- ಮೆಲ್ಬೋರ್ನ್ ರೆನೆಗೇಡ್ಸ್
- ಮೆಲ್ಬೋರ್ನ್ ಸ್ಟಾರ್ಸ್
- ಪರ್ತ್ ಸ್ಕಾರ್ಚರ್ಸ್
- ಸಿಡ್ನಿ ಸಿಕ್ಸರ್ಸ್
- ಸಿಡ್ನಿ ಥಂಡರ್