ರಶ್ಮಿಕಾ-ವಿಜಯ್ ದೇವರಕೊಂಡ ಮದುವೆಗೆ ವಿದೇಶಿ ಸಂಸ್ಥೆಯ ಭದ್ರತೆ
Vijay Deverakonda and Rashmik Mandanna: ವಿಜಯ್ ಮತ್ತು ರಶ್ಮಿಕಾರ ವಿವಾಹ ಫೆಬ್ರವರಿ 26ರಂದು ನಡೆಯಲಿದೆ. ಮದುವೆಯನ್ನು ಬಹಳ ಗುಟ್ಟಾಗಿ ಮಾಡಿಕೊಳ್ಳಲು ಈ ಜೋಡಿ ಇಚ್ಛಿಸಿತ್ತು. ಹಾಗಾಗಿ ಮದುವೆಯ ಸ್ಥಳ, ದಿನಾಂಕಗಳನ್ನು ಗುಟ್ಟಾಗಿ ಇರಿಸಿತ್ತು. ಆದರೆ ಇವರ ಮದುವೆಯ ಬಗ್ಗೆ ದಿನಕ್ಕೊಂದು ವಿಷಯಗಳು ಲೀಕ್ ಆಗುತ್ತಲೇ ಇವೆ. ಭದ್ರತೆಯ ಬಗ್ಗೆ ಜೋಡಿಗೆ ಆತಂಕ ಎದುರಾಗಿದ್ದು, ಇದೇ ಕಾರಣಕ್ಕೆ ವಿದೇಶದಿಂದ ಭದ್ರತಾ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ.

ದಕ್ಷಿಣ ಭಾರತದ ಚಿತ್ರರಂಗದ ಕ್ಯೂಟ್ ಜೋಡಿ ಎಂದೇ ಖ್ಯಾತಿ ಪಡೆದಿರುವ ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ ಅವರುಗಳು ಮದುವೆ ಆಗುತ್ತಿದ್ದಾರೆ. ಫೆಬ್ರವರಿ 26ರಂದು ನಡೆಯಲಿದೆ. ಮದುವೆಯನ್ನು ಬಹಳ ಗುಟ್ಟಾಗಿ ಮಾಡಿಕೊಳ್ಳಲು ಈ ಜೋಡಿ ಇಚ್ಛಿಸಿತ್ತು. ಹಾಗಾಗಿ ಮದುವೆಯ ಸ್ಥಳ, ದಿನಾಂಕಗಳನ್ನು ಗುಟ್ಟಾಗಿ ಇರಿಸಿತ್ತು. ಆದರೆ ಇವರ ಮದುವೆಯ ಬಗ್ಗೆ ದಿನಕ್ಕೊಂದು ವಿಷಯಗಳು ಲೀಕ್ ಆಗುತ್ತಲೇ ಇವೆ. ಇದೀಗ ಮದುವೆ ದಿನ ಭದ್ರತೆ ಸಮಸ್ಯೆ ಆಗಬಹುದೆಂಬ ಭೀತಿಯಲ್ಲಿ ರಶ್ಮಿಕಾ ಮತ್ತು ವಿಜಯ್ ಇದ್ದು, ಇದೇ ಕಾರಣಕ್ಕೆ ವಿದೇಶದಿಂದ ಭದ್ರತಾ ಸಿಬ್ಬಂದಿಯನ್ನು ವಿಶೇಷ ಭದ್ರತೆಗಾಗಿ ಕರೆಸಿಕೊಂಡಿದೆ ಈ ಜೋಡಿ.
ತಮ್ಮ ಖಾಸಗಿ ಜೀವನದ ಬಗ್ಗೆ ಸದಾ ಮೌನವಾಗಿರುತ್ತಿದ್ದ ಈ ಜೋಡಿ, ಮದುವೆಯ ವಿಚಾರದಲ್ಲೂ ಅಷ್ಟೇ ಗೌಪ್ಯತೆ ಬಯಸಿತ್ತು. ಆದರೆ ಇತ್ತೀಚೆಗೆ ಇವರ ಮದುವೆಯ ಆಮಂತ್ರಣ ಪತ್ರಿಕೆ ಎನ್ನಲಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದರಲ್ಲಿ ಮದುವೆಯ ದಿನಾಂಕ, ಸಮಯ ಮತ್ತು ಸ್ಥಳದ ಮಾಹಿತಿ ಸೋರಿಕೆಯಾಗಿದ್ದರಿಂದ ಕಳವಳಗೊಂಡಿರುವ ತಾರಾ ಜೋಡಿ, ಈಗ ವಿದೇಶಿ ಭದ್ರತಾ ಸಂಸ್ಥೆಯೊಂದನ್ನು ನೇಮಿಸಿಕೊಂಡಿದೆ. ರಾಜಸ್ಥಾನದ ಉದಯಪುರದಲ್ಲಿ ನಡೆಯಲಿರುವ ಈ ಮದುವೆಗೆ ಯಾವುದೇ ಅಡೆತಡೆ ಉಂಟಾಗಬಾರದು, ಅಭಿಮಾನಿಗಳಿಂದ ತೊಂದರೆ ಆಗಬಾರದು ಎಂಬುದು ಇವರ ಉದ್ದೇಶ.
ವರದಿಗಳ ಪ್ರಕಾರ, ಮದುವೆಯ ಆವರಣದಲ್ಲಿ ಯಾರೂ ಮೊಬೈಲ್ ಫೋನ್ ಬಳಸುವಂತಿಲ್ಲ ಎಂಬ ‘ನೋ ಫೋನ್ ಪಾಲಿಸಿ’ಯನ್ನು ಜಾರಿಗೆ ತರಲಾಗಿದೆ. ಕೇವಲ ಆಯ್ದ ಆಪ್ತರು ಮತ್ತು ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿದ್ದು, ಮದುವೆಯ ಕೆಲಸ ಕಾರ್ಯಗಳಲ್ಲಿ ತೊಡಗಿರುವ ಸಿಬ್ಬಂದಿಗಳೊಂದಿಗೆ ಗೌಪ್ಯತೆಯ ಒಪ್ಪಂದಕ್ಕೆ (NDA) ಸಹಿ ಹಾಕಿಸಿಕೊಳ್ಳಲಾಗಿದೆ. ಸ್ಥಳೀಯ ಪೊಲೀಸರ ಜೊತೆಗೆ ವಿದೇಶಿ ಭದ್ರತಾ ಸಿಬ್ಬಂದಿಗಳು ಕಣ್ಗಾವಲು ಇರಿಸಲಿದ್ದಾರೆ.
ಇದನ್ನೂ ಓದಿ:ವಿಜಯ್ ರಾಘವೇಂದ್ರ ಮತ್ತು ಅನುಶ್ರೀ ಕಾಮಿಡಿ ಪ್ರಮೋಷನ್: ವಿಡಿಯೋ
ಫೆಬ್ರವರಿ 26 ರಂದು ಉದಯಪುರದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಶಾಸ್ತ್ರಗಳು ನೆರವೇರಲಿದ್ದು, ಬಳಿಕ ಮಾರ್ಚ್ 4 ರಂದು ಹೈದರಾಬಾದ್ ತಾಜ್ ಕೃಷ್ಣನಲ್ಲಿ ಚಿತ್ರರಂಗದ ಗಣ್ಯರಿಗಾಗಿ ಮತ್ತು ಸ್ನೇಹಿತರಿಗಾಗಿ ಅದ್ದೂರಿ ರಿಸೆಪ್ಷನ್ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ತೆಲುಗು ಚಿತ್ರರಂಗದ ಗಣ್ಯರ ಜೊತೆಗೆ ಬಾಲಿವುಡ್ನ ಚಿತ್ರರಂಗದವರು ಮತ್ತು ಆಂಧ್ರ, ತೆಲಂಗಾಣದ ರಾಜಕಾರಣಿಗಳು ಸಹ ಭಾಗಿ ಆಗಲಿದ್ದಾರೆ. ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳ ಮೂಲಕ ಅಭಿಮಾನಿಗಳ ಮನಗೆದ್ದ ಈ ಜೋಡಿ, ಈಗ ನಿಜ ಜೀವನದಲ್ಲೂ ಒಂದಾಗುತ್ತಿರುವುದು ಸಹಜವಾಗಿಯೇ ಅಭಿಮಾನಿಗಳಿಗೆ ಖುಷಿ ತಂದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




