ಆರ್ಥರ್ ಆ್ಯಶ್ ಸ್ಟೇಡಿಯಂನಲ್ಲಿ ನಡೆದ ಪ್ರತಿಷ್ಟಿತ ಯುಎಸ್ ಓಪನ್ (US Open) ಟೆನ್ನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ್ತಿ ಪೊಲೆಂಡ್‌ನ ಇಗಾ ಸ್ವಿಯಾಟೆಕ್ (Iga Swiatek) ಗೆದ್ದಿದ್ದಾರೆ. ಇದು ಅವರ ಚೊಚ್ಚಲ ಯುಎಸ್ ಕಿರೀಟವಾಗಿದ್ದು, ಮೂರನೇ ಗ್ರ್ಯಾಂಡ್‍ಸ್ಲಾಂ ಪ್ರಶಸ್ತಿಯಾಗಿದೆ. ಪೋಲೆಂಡ್‌ನ ಇಗಾ ಸ್ವಿಯಾಟೆಕ್, ಟ್ಯುನೇಷಿಯಾದ ಒನ್ಸ್ ಜಬುರ್ ಎದುರು 6-2, 7-6(5) ನೇರ ಸೆಟ್‌ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಯುಎಸ್ ಓಪನ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ಪಂದ್ಯದ ಮೊದಲ ಸೆಟ್‌ನಲ್ಲಿ ಎದುರಾಳಿ ಆಟಗಾರ್ತಿಯ ವಿರುದ್ಧ ಸಂಪೂರ್ಣ ಹಿಡಿತ ಸಾಧಿಸಿದ ಇಗಾ 6-2ಅಂತರದಲ್ಲಿ ಹಿಡಿತ ಸಾಧಿಸಿದರು. ನಂತರ ಎರಡನೇ ಸೆಟ್‌ನಲ್ಲಿ ಟ್ಯುನಿಷಿಯಾ ಆಟಗಾರ್ತಿ ಕೊಂಚ ಪೈಪೋಟಿ ನೀಡಿದರೂ ಸಂಪೂರ್ಣ ಯಶಸ್ಸು ಸಾಧಿಸಲು ಆಗಲಿಲ್ಲ. ಅಂತಿಮವಾಗಿ ಯುಎಸ್ ಓಪನ್ ಗೆಲ್ಲುವ ಅಪರೂಪದ ಅವಕಾಶವನ್ನು ಆಫ್ರಿಕಾ ಆಟಗಾರ್ತಿ ಒನ್ಸ್ ಜಬುರ್ ಕಳೆದುಕೊಂಡರು.
Queen of Queens.@iga_swiatek is the #USOpen champion! ? pic.twitter.com/SLgI8rOsW1
— US Open Tennis (@usopen) September 10, 2022
ಯುಎಸ್ ಓಪನ್ ಟೆನಿಸ್ ಗ್ರ್ಯಾನ್ ಸ್ಲಾಂ ಜಯಿಸಿದ ಬಳಿಕ ಮಾತನಾಡಿದ ಇಗಾ, ನನಗೆ ಈ ರೀತಿ ಸಮಚಿತ್ತದಿಂದ ಹಾಗೂ ಗುರಿಯತ್ತ ಗಮನ ಹರಿಸಿದ್ದರಿಂದ ಇದು ಸಾಕಾರವಾಗಿದೆ ಎಂದು ಹೇಳಿದ್ದಾರೆ. ಇದು ನ್ಯೂಯಾರ್ಕ್ ನಗರ, ಇಂದೊಂದು ರೀತಿ ಕ್ರೇಜಿ ಅನುಭವ. ಈ ಗೆಲುವನ್ನು ಹೆಮ್ಮೆಯಿಂದ ಸ್ವೀಕರಿಸುತ್ತಿದ್ದೇನೆ ಎಂದು ಪೋಲೆಂಡ್ ಆಟಗಾರ್ತಿ ಹೇಳಿದ್ದಾರೆ.
21 ವರ್ಷದ ಸ್ವಿಯಾಟೆಕ್ 2020 ಮತ್ತು 2022 ರಲ್ಲಿ ಫ್ರೆಂಚ್ ಓಪನ್ ಗೆದ್ದು, ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ಮೊದಲ ಪೋಲಿಷ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮುನ್ನ ಅರಿನಾ ಸಬಾಲೆಂಕಾ ವಿರುದ್ಧ 3-6, 6-1, 6-4 ಸೆಟ್‍ಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿದ್ದರು. ಒನ್ಸ್ ಜಬುರ್ ಅವರು ಫ್ರಾನ್ಸ್‌ನ ಕೆರೊಲಿನ್ ಕರೊನೈಲ್ ಗೆರಿಕಾ ವಿರುದ್ಧ 6-1, 6-3 ನೇರ ಸೆಟ್‍ಗಳ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ಮುನ್ನಡೆದಿದ್ದರು.
Published On - 11:29 am, Sun, 11 September 22