Jasprit Bumrah: ಟಿ20 ವಿಶ್ವಕಪ್ಗೂ ಮುನ್ನ ಭಾರತಕ್ಕೆ ಶುಭಸುದ್ದಿ: ಕಮ್ಬ್ಯಾಕ್ ಮಾಡಲಿದ್ದಾರೆ ಇಬ್ಬರು ಸ್ಟಾರ್ ಪ್ಲೇಯರ್ಸ್
Harshal Patel: ಟೀಮ್ ಇಂಡಿಯಾಕ್ಕೆ ಇದೀಗ ಶುಭಸುದ್ದಿಯೊಂದು ಹೊರಬಿದ್ದಿದೆ. ಕಳೆದ ಕೆಲ ಸಮಯದಿಂದ ಇಂಜುರಿಯಿಂದಾಗ ಭಾರತ ತಂಡದಿಂದ ಹೊರಗುಳಿದಿದ್ದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಇದೀಗ ತಂಡಕ್ಕೆ ಕಮ್ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.
ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಮಹಾಟೂರ್ನಿಗೆ ದಿನಗಣನೆ ಶುರುವಾಗಿದೆ. ಮುಂದಿನ ತಿಂಗಳು ಅಕ್ಟೋಬರ್ 16ಕ್ಕೆ ಈ ಚುಟುಕು ವಿಶ್ವಕಪ್ಗೆ ಚಾಲನೆ ಸಿಗಲಿದ್ದು, ಎಲ್ಲ ತಂಡಗಳು ಭರ್ಜರಿ ಸಿದ್ಧತೆ ನಡೆಸುತ್ತಿದೆ. ಇತ್ತ ಭಾರತ ತಂಡ ಕೂಡ ಏಷ್ಯಾಕಪ್ನಿಂದ ಹೊರಬಿದ್ದ ಬಳಿಕ ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ. ಇದರ ನಡುವೆ ಟೀಮ್ ಇಂಡಿಯಾಕ್ಕೆ ಇದೀಗ ಶುಭಸುದ್ದಿಯೊಂದು ಹೊರಬಿದ್ದಿದೆ. ಕಳೆದ ಕೆಲ ಸಮಯದಿಂದ ಇಂಜುರಿಯಿಂದಾಗ ಭಾರತ ತಂಡದಿಂದ ಹೊರಗುಳಿದಿದ್ದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಹಾಗೂ ಹರ್ಷಲ್ ಪಟೇಲ್ (Harshal Patel) ಇದೀಗ ತಂಡಕ್ಕೆ ಕಮ್ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಈ ಬಗ್ಗೆ ಇನ್ಸೈಡ್ ಸ್ಪೋರ್ಟ್ಸ್ ವರದಿ ಮಾಡಿದ್ದು, ಹರ್ಷಲ್ ಹಾಗೂ ಬುಮ್ರಾ ಟಿ20 ವಿಶ್ವಕಪ್ಗೆ ಆಯ್ಕೆಯಾಗಲಿದ್ದಾರೆ ಎಂದು ಹೇಳಿದೆ.
ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನಿಂದಾಗಿ ಏಷ್ಯಾಕಪ್ ಸೇರಿದಂತೆ ಹಿಂದಿನ ಸರಣಿಗಳಿಗೆ ಆಯ್ಕೆಯಾಗಿರಲಿಲ್ಲ. ಇತ್ತ ಹರ್ಷಲ್ ಪಟೇಲ್ ಕೂಡ ಪಕ್ಕೆಲುಬು ಗಾಯಕ್ಕೆ ತುತ್ತಾಗಿದ್ದರು. ಹೀಗಾಗಿ ಇವರಿಬ್ಬರು ಟಿ20 ವಿಶ್ವಕಪ್ ವೇಳೆಗೆ ಗುಣಮುಖರಾಗುವುದು ಅನುಮಾನ ಎನ್ನಲಾಗಿತ್ತು. ಇದರ ನಡುವೆ ಬೆಂಗಳೂರಿನ ಎನ್ಸಿಎ ಯಲ್ಲಿ ಫಿಟ್ನೆಸ್ ಟೆಸ್ಟ್ ನಡೆಸಬೇಕೆಂದು ಬಿಸಿಸಿಐ ಇವರಿಗೆ ತಿಳಿಸಿದೆ. ಇದೀಗ ಗಾಯದಿಂದ ಗುಣಮುಖರಾಗಿ ಫಿಟ್ನೆಸ್ ಟೆಸ್ಟ್ನಲ್ಲಿ ಇವರಿಬ್ಬರೂ ಉತ್ತೀರ್ಣರಾಗಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಬುಮ್ರಾ–ಹರ್ಷಲ್ ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆಯಲಿದ್ದಾರಂತೆ.
ಟಿ20 ವಿಶ್ವಕಪ್ಗೂ ಮುನ್ನ ಭಾರತ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಸರಣಿ ಆಡಲಿದೆ. ಮೊದಲಿಗೆ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆಯೋಜಿಸಿದ್ದರೆ, ನಂತರ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟಿ20 ಮತ್ತು ಏಕದಿನ ಸರಣಿ ನಡೆಯಲಿದೆ. ಹರ್ಷಲ್ ಹಾಗೂ ಬುಮ್ರಾ ಈ ಸರಣಿಯ ಮೂಲಕವೇ ತಂಡಕ್ಕೆ ಕಮ್ಬ್ಯಾಕ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಟಿ20 ವಿಶ್ವಕಪ್ಗೆ ಭಾರತ ತಂಡ:
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇನ್ನಷ್ಟೆ ಟೀಮ್ ಇಂಡಿಯಾವನ್ನು ಟಿ20 ವಿಶ್ವಕಪ್ಗೆ ಹೆಸರಿಸಬೇಕಿದೆ. ಮೂಲಗಳ ಪ್ರಕಾರ ಸೆಪ್ಟಂಬರ್ 16 ರಂದು ಬಿಸಿಸಿಐ ಟಿ20 ವಿಶ್ವಕಪ್ಗೆ 16 ಮಂದಿ ಸದಸ್ಯರ ಭಾರತ ತಂಡವನ್ನು ಪ್ರಕಟ ಮಾಡಲಿದೆಯಂತೆ. ಇನ್ನು ರವೀಂದ್ರ ಜಡೇಜಾ ಅವರಿಗೆ ಮೊಣಕಾಲು ಶಸ್ತ್ರಚಿಕಿತ್ಸೆ ನಡೆಯುತ್ತಿದ್ದು ಇವರು ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ. ಇವೆಲ್ಲದರ ನಡುವೆ ಬಹುಕಾಲದ ಬಳಿಕ ಮೊಹಮ್ಮದ್ ಶಮಿ ಟೀಮ್ ಇಂಡಿಯಾ ಸೇರಿಕೊಳ್ಳುವ ಸಂಭವವಿದೆ ಎಂಬ ಮಾತುಕೂಡ ಕೇಳಿಬರುತ್ತಿದೆ.
ಟಿ20 ವಿಶ್ವಕಪ್ಗೆ ತಂಡವನ್ನು ಪ್ರಕಟ ಮಾಡಲು ಸೆಪ್ಟಂಬರ್ 16 ಕೊನೆಯ ದಿನಾಂಕವಾಗಿದೆ. ಇದಕ್ಕೂ ಮುನ್ನ ಬಿಸಿಸಿಐ ಅಧಿಕಾರಿಗಳು, ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಸಭೆ ಸೇರಿ ಚರ್ಚಿಸಬೇಕಿದೆ. ಈಗಾಗಲೇ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ತಮ್ಮ ಟೀಮ್ ಅನ್ನು ಹೆಸರಿಸಿದೆ.
Published On - 10:44 am, Sun, 11 September 22