INDL vs SAL: ಸ್ಟುವರ್ಟ್ ಬಿನ್ನಿ, ಯೂಸುಫ್ ಪಠಾಣ್ ಸ್ಫೋಟಕ ಆಟ: ಇಂಡಿಯಾ ಲೆಜೆಂಡ್ಸ್​ಗೆ 61 ರನ್​ಗಳ ಜಯ

ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದ ಭಾರತ (India Legends vs South Africa Legends) ಸ್ಫೋಟಕ ಆಟವಾಡಿತು. ಸ್ಟುವರ್ಟ್ ಬಿನ್ನಿ (Stuart Binny) ಹಾಗೂ ಯೂಸುಫ್ ಪಠಾಣ್ ಮನಬಂದಂತೆ ಬ್ಯಾಟ್ ಬೀಸಿದರೆ, ಬೌಲಿಂಗ್​ನಲ್ಲಿ ರಾಹುಲ್ ಶರ್ಮಾ ಮಿಂಚಿದರು.

INDL vs SAL: ಸ್ಟುವರ್ಟ್ ಬಿನ್ನಿ, ಯೂಸುಫ್ ಪಠಾಣ್ ಸ್ಫೋಟಕ ಆಟ: ಇಂಡಿಯಾ ಲೆಜೆಂಡ್ಸ್​ಗೆ 61 ರನ್​ಗಳ ಜಯ
INDL vs SAL
Follow us
TV9 Web
| Updated By: Vinay Bhat

Updated on:Sep 11, 2022 | 9:45 AM

ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನ (Road Safety World Series) ಎರಡನೇ ಆವೃತ್ತಿಗೆ ಚಾಲನೆ ಸಿಕ್ಕಿದ್ದು ಮೊದಲ ಪಂದ್ಯದಲ್ಲೇ ಇಂಡಿಯಾ ಲೆಜೆಂಡ್ಸ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಅದ್ಭುತ ಆರಂಭವನ್ನು ಪಡೆದುಕೊಂಡಿದೆ. ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ನೇತೃತ್ವದ ಭಾರತ (India Legends vs South Africa Legends) ಸ್ಫೋಟಕ ಆಟವಾಡಿತು. ಸ್ಟುವರ್ಟ್ ಬಿನ್ನಿ (Stuart Binny) ಹಾಗೂ ಯೂಸುಫ್ ಪಠಾಣ್ ಮನಬಂದಂತೆ ಬ್ಯಾಟ್ ಬೀಸಿದರೆ, ಬೌಲಿಂಗ್​ನಲ್ಲಿ ರಾಹುಲ್ ಶರ್ಮಾ ಮಿಂಚಿದರು. ಪರಿಣಾಮ ಭಾರತ ಲೆಜೆಂಡ್ಸ್ ತಂಡ 61 ರನ್‌ಗಳ ದೊಡ್ಡ ಅಂತರದಿಂದ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಸಾಧಾರಣ ಆರಂಭ ಪಡೆದುಕೊಂಡಿತು. ನಾಯಕ ಸಚಿನ್ ತೆಂಡೂಲ್ಕರ್ 15 ಎಸೆತಗಳಲ್ಲಿ 16 ರನ್ ಗಳಿಸಿ ಔಟಾದರು. ನಮನ್ ಓಜಾ 18 ಎಸೆತಗಳಲ್ಲಿ 21 ರನ್​ಗೆ ಬ್ಯಾಟ್ ಕೆಳಗಿಟ್ಟರು. ಈ ಸಂದರ್ಭ ಜೊತೆಯಾದ ಸುರೇಶ್ ರೈನಾ ಹಾಗೂ ಸ್ಟುವರ್ಟ್ ಬಿನ್ನಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ ಬಿನ್ನಿ ಫೋರ್ಸಿಕ್ಸರ್​ಗಳ ಮಳೆ ಸುರಿಸಿದರೆ ರೈನಾ ಇವರಿಗೆ ಉತ್ತಮ ಸಾಥ್ ನೀಡಿದರು.

ರೈನಾ 22 ಎಸೆತಗಳಲ್ಲಿ 4 ಫೋರ್, 1 ಸಿಕ್ಸರ್​ನೊಂದಿಗೆ 33 ರನ್ ಗಳಿಸಿ ಔಟಾದರೆ, ಯುವರಾಜ್ ಸಿಂಗ್ 6 ರನ್​ಗೆ ನಿರ್ಗಮಿಸಿದರು. ಕೊನೆಯ ಹಂತದಲ್ಲಿ ಬಿನ್ನಿ ಹಾಗೂ ಯೂಸುಫ್ ಪಠಾಣ್ ಎದುರಾಳಿ ಬೌಲರ್​ಗಳ ಬೆರಿಳಿಸಿದರು. ಪಠಾಣ್ ಕೇವಲ 15 ಎಸೆತಗಳಲ್ಲಿ 1 ಫೋರ್, 4 ಸಿಕ್ಸರ್ ಬಾರಿಸಿ ಅಜೇಯ 35 ರನ್ ಚಚ್ಚಿದರೆ, ಬಿನ್ನಿ ಕೇವಲ 42 ಎಸೆತಗಳಲ್ಲಿ 5 ಫೋರ್, 6 ಸಿಕ್ಸರ್​ನೊಂದಿಗೆ ಅಜೇಯ 82 ರನ್ ಬಾರಿಸಿದರು. ಭಾರತ ಲೆಜೆಂಡ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 217 ರನ್ ಕಲೆಹಾಕಿತು. . ಆಫ್ರಿಕಾ ಲೆಜೆಂಡ್ಸ್ ಪರ ಜೆ ವಂಡರ್​ವಾತ್ 2 ವಿಕೆಟ್ ಪಡೆದರು.

ಇದನ್ನೂ ಓದಿ
Image
Asia Cup Final: ಇಂದು ಏಷ್ಯಾಕಪ್ 2022 ಫೈನಲ್: ಪ್ರಶಸ್ತಿಗಾಗಿ ಶ್ರೀಲಂಕಾ-ಪಾಕಿಸ್ತಾನ ಸೆಣೆಸಾಟ
Image
ENG vs SA: 36 ರನ್​ಗಳಿಗೆ 6 ವಿಕೆಟ್ ಪತನ; ಇಂಗ್ಲೆಂಡ್ ಮಾರಕ ಬೌಲಿಂಗ್, 118 ರನ್​ಗಳಿಗೆ ಆಫ್ರಿಕಾ ಆಲೌಟ್
Image
Asia Cup 2022: ಏಷ್ಯಾಕಪ್ ಫೈನಲ್​ನಲ್ಲಿ ಕೊಹ್ಲಿ- ರಿಜ್ವಾನ್, ಭುವಿ- ನವಾಜ್ ನಡುವೆ ಜಿದ್ದಾಜಿದ್ದಿನ ಹೋರಾಟ..!
Image
ENG vs SA: ರಾಷ್ಟ್ರಗೀತೆಯಲ್ಲಿ ಬದಲಾವಣೆ; ಒಂದು ನಿಮಿಷದ ಮೌನಾಚರಣೆ ಬಳಿಕ 3 ದಿನಗಳ ಟೆಸ್ಟ್ ಆರಂಭ

ಕಠಿಣ ಟಾರ್ಗೆಟ್ ಬೆನ್ನಟ್ಟಿದ ಆಫ್ರಿಕಾ ಲೆಜೆಂಡ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಿತಾದರೂ ನಂತರ ಅದನ್ನು ಮುಂದುವರಿಸಿಕೊಂಡು ಹೋಗುವಲ್ಲಿ ವಿಫಲವಾಯಿತು. ನಾಯಕ ಜಾಂಡಿ ರೋಡ್ಸ್ 38 ರನ್‌ಗಳಿಸಿ ತಂಡದ ಪರವಾಗಿ ಅಧಿಕ ರನ್‌ಗಳಿಸಿದ ಆಟಗಾರ ಎನಿಸಿದರು. ಉಳಿದಂತೆ ಯಾವ ಆಟಗಾರರಿಂದಲೂ ಹೆಚ್ಚಿನ ಪ್ರತಿರೋಧ ಬಾರಲಿಲ್ಲ. ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ 156 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಈ ಮೂಲಕ 61 ರನ್‌ಗಳ ಅಂತರದಿಂದ ಸೋಲು ಅನುಭವಿಸಿತು. ಭಾರತ ಪರ ರಾಹುಲ್ ಶರ್ಮಾ 3 ವಿಕೆಟ್ ಕಿತ್ತರೆ, ಮುನಾಫ್ ಪಟೆಲ್ ಹಾಗೂ ಪ್ರಗ್ಯಾನ್ ಓಜಾ ತಲಾ 2 ವಿಕೆಟ್ ಪಡೆದರು.

Published On - 9:45 am, Sun, 11 September 22

ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಮೂಕ ಪ್ರಾಣಿಯ ಕೆಚ್ಚಲು ಕೊಯ್ಯುವುದು ತಾಯಿಗೆ ದ್ರೋಗ ಬಗೆದಂತೆ: ತನ್ವೀರ್ ಸೇಟ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ಆರತಿ ಉಕ್ಕಡಕ್ಕೆ ಭೇಟಿ ನೀಡಿದ ದರ್ಶನ್; ಅಹಲ್ಯ ದೇವಿಗೆ ವಿಶೇಷ ಪೂಜೆ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ನವಿ ಮುಂಬೈನಲ್ಲಿ ಏಷ್ಯಾದ 2ನೇ ದೊಡ್ಡ ಇಸ್ಕಾನ್ ದೇವಾಲಯ ಉದ್ಘಾಟಿಸಿದ ಮೋದಿ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ದೇವರಾಜ ಮಾರ್ಕೆಟ್ ಡೆಮಾಲಿಶ್ ಮಾಡಲು ನ್ಯಾಯಾಲಯ ಆದೇಶಿಸಿದೆ: ಮಹದೇವಪ್ಪ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?
ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?
Video: ಆಟೋ ಚಾಲಕನನ್ನು ಥಳಿಸಿದ ಮಹಿಳೆ
Video: ಆಟೋ ಚಾಲಕನನ್ನು ಥಳಿಸಿದ ಮಹಿಳೆ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ