AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂತ್ ಮತ್ತು ಸಹಾ ಭಾರತದ ಅತ್ಯುತ್ತಮ ವಿಕೆಟ್​ಕೀಪರ್-ಬ್ಯಾಟ್ಸ್​ಮನ್​ಗಳು: ಗಂಗೂಲಿ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ದೇಶದಲ್ಲಿ ಈಗ ಲಭ್ಯರಿರುವ ವಿಕೆಟ್​​ಕೀಪರ್-ಬ್ಯಾಟ್ಸ್​ಮನ್​ಗಳ ಪೈಕಿ ರಿಷಭ್ ಪಂತ್ ಮತ್ತು ವೃದ್ಧಿಮಾನ ಸಹಾ ಅತ್ಯುತ್ತಮರು ಎಂದು ಹೇಳುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ.

ಪಂತ್ ಮತ್ತು ಸಹಾ ಭಾರತದ ಅತ್ಯುತ್ತಮ ವಿಕೆಟ್​ಕೀಪರ್-ಬ್ಯಾಟ್ಸ್​ಮನ್​ಗಳು: ಗಂಗೂಲಿ
ಸೌರವ್ ಗಂಗೂಲಿ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on:Nov 25, 2020 | 8:25 PM

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಅವರು ರಿಷಬ್ ಪಂತ್ ಮತ್ತು ವೃದ್ಧಿಮಾನ ಸಹಾ, ಪ್ರಸ್ತುತವಾಗಿ ಭಾರತದಲ್ಲಿ ಸದ್ಯಕ್ಕೆ ಲಭ್ಯರಿರುವ ಅತ್ಯುತ್ತಮ ವಿಕೆಟ್​ಕೀಪರ್ ಬ್ಯಾಟ್ಸ್​ಮನ್​ಗಳೆಂದು ಹೇಳುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ.

ಕನ್ನಡ

ರಿಷಭ್ ಪಂತ್

ಮಹೇಂದ್ರಸಿಂಗ್ ಧೋನಿ ಅವರ ನಿವೃತ್ತಿಯ ನಂತರ ಭಾರತ ಕೆಲವು ವಿಕೆಟ್​ಕೀಪರ್ ಬ್ಯಾಟ್ಸ್​ಮನ್​ಗಳನ್ನು ಪ್ರಯೋಗಿಸಿದೆ. ಪಂತ್ ಮತ್ತು ಸಹಾ ಅವರಲ್ಲದೆ, ಕೆಎಲ್ ರಾಹುಲ್, ಸಂಜು ಸ್ಯಾಮ್ಸನ್ ಅವರನ್ನು ಈ ಸ್ಪೆಷಲಿಸ್ಟ್ ಸ್ಥಾನಕ್ಕೆ ಬಳಸಿಕೊಂಡಿದೆ. ಸಹಾ ಟೆಸ್ಟ್​ ಕ್ರಿಕೆಟ್​ನಲ್ಲಿ ಅತ್ಯುತ್ತಮ ಪ್ರದರ್ಶನಗಳನ್ನು ನೀಡಿ ಸ್ಥಾನವನ್ನು ಭದ್ರಪಡಿಸಿಕೊಂಡರು. ಅವರು ಗಾಯಗೊಂಡಾಗ ಅವಕಾಶ ಗಿಟ್ಟಿಸಿದ ಯುವ ಆಟಗಾರ ಪಂತ್ ಕೆಲವು ಉತ್ಕೃಷ್ಟ ಬ್ಯಾಟಿಂಗ್ ಪ್ರದರ್ಶನಗಳ ಮೂಲಕ ಗಮನ ಸೆಳೆಯುವುದರ ಜೊತೆಗೆ ಸಹಾ ಮರಳಿ ಬರುವುದಕ್ಕೆ ದೊಡ್ಡ ಥ್ರೆಟ್ ಎನಿಸಿದರು. ಆದರೆ ಬ್ಯಾಟಿಂಗ್​ನಲ್ಲಿ ಅವರಿಂದ ಪ್ರದರ್ಶನಗಳು ಅಸ್ಥಿರಗೊಳ್ಳಲಾರಂಭಿಸಿದ ನಂತರ ಸಹಾಗೆ ಪುನಃ ಅವಕಾಶ ಸಿಕ್ಕಿತು.

ಈಗ ಪಂತ್ ಮತ್ತು ಸಹಾ ಇಬ್ಬರಿಗೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೇವಲ ಟೆಸ್ಟ್​ ಸ್ಕ್ಯಾಡ್​ನಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಪಂತ್ ಮತ್ತು ಸಹಾ ಭಾರತದ ಅತ್ಯುತ್ತಮ ವಿಕೆಟ್​ ಕೀಪರ್​ಗಳಾದರೆ ಅವರಿಗೆ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಯಾಕೆ ಅಡಿಸುತ್ತಿಲ್ಲ ಎಂಬ ಪ್ರಶ್ನೆಗೆ ಗಂಗೂಲಿ ಅವರಲ್ಲಿ ಸ್ಪಷ್ಟವಾದ ಉತ್ತರವಿಲ್ಲ. ಇಂದು ಪಿಟಿಐನೊಂದಿಗೆ ಮಾತಾಡಿದ ಭಾರತದ ಮಾಜಿ ನಾಯಕ ಗಂಗೂಲಿ, ಪಂತ್ ಅವರು ಐಪಿಎಲ್​ನಲ್ಲಿ ನೀಡಿದ ಕಳಪೆ ಪ್ರದರ್ಶನಗಳ ಬಗ್ಗೆಯೂ ಸಮಂಜಸ ಉತ್ತರ ನೀಡಲಿಲ್ಲ.

ಕನ್ನಡ

ವೃದ್ಧಿಮಾನ್ ಸಹಾ

‘‘ಅವನ ಬ್ಯಾಟಿಂಗ್ ಬಗ್ಗೆ ಯೋಚನೆ ಬೇಡ, ಅವನ ಮತ್ತೆ ಬ್ಯಾಟ್​ ಮೊದಲಿನಂತೆ ಬೀಸಲಾರಂಭಿಸುತ್ತದೆ. ಅವನಿನ್ನೂ ಯುವಕ ಮತ್ತು ಪ್ರಚಂಡ ಪ್ರತಿಭಾವಂತ. ಅವನಿಗೆ ಬೇಕಿರುವುದು ನಮ್ಮ ಮಾರ್ಗದರ್ಶನ, ಅವನ ಫಾರ್ಮ್ ಸುಧಾರಿಸಲಿದೆ,’’ ಎಂದು ಗಂಗೂಲಿ ಹೇಳಿದರು.

ಆದರೆ, ಪಂತ್​ ಅವರನ್ನು ಸೀಮಿತ ಪಂದ್ಯಗಳಿಗೆ ಡ್ರಾಪ್ ಮಾಡಿರುವುದರಿಂದ ಮತ್ತು ಸಹಾ ಅವರಿಗಿಂತ ಉತ್ತಮ ವಿಕೆಟ್​ಕೀಪರ್ ಆಗಿರುವುದರಿಂದ ಪಂತ್​ಗೆ ಟೆಸ್ಟ್​ಗಳಲ್ಲಿ ಆಡುವ ಅವಕಾಶ ಸಿಗುತ್ತದೆಯೇ ಎಂದು ಕೇಳಿದಾಗ ಗಂಗೂಲಿ ಡಿಪ್ಲೊಮ್ಯಾಟಿಕ್ ಉತ್ತರ ನೀಡಲು ಪ್ರಯತ್ನಿಸಿದರು.

‘‘ಇಬ್ಬರನ್ನೂ ಖಂಡಿತವಾಗಿಯೂ ಆಡಿಸಲಾಗದು, ಯಾರು ಉತ್ತಮ ಫಾರ್ಮ್​ನಲ್ಲಿದ್ದಾರೋ ಅವರು ಆಡುವ ಇಲೆವೆನ್​ನಲ್ಲಿ ಸ್ಥಾನ ಗಿಟ್ಟಿಸುತ್ತಾರೆ,’’ ಅಂತ ಗಂಗೂಲಿ ಹೇಳಿದರು.

Published On - 7:47 pm, Wed, 25 November 20

ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್