Paralympics 2024: ‘ಪದಕಗಳ ಬಣ್ಣದ ಬಗ್ಗೆ ಚಿಂತಿಸಬೇಡಿ’; ಪದಕ ಗೆದ್ದ ತಂಗವೇಲು, ಶರದ್, ಸುಂದರ್, ಅಜಿತ್ ಜೊತೆ ಮೋದಿ ಮಾತು

|

Updated on: Sep 04, 2024 | 11:06 PM

Paralympics 2024: ನಿಮ್ಮ ಪ್ರದರ್ಶನವು ದೇಶದ ಯುವಕರನ್ನು ಪ್ರೇರೇಪಿಸಿದೆ. ಅಲ್ಲದೆ ಭಾರತದಲ್ಲಿ ವಿವಿಧ ಕ್ರೀಡೆಗಳು ಜನಪ್ರಿಯವಾಗುತ್ತಿರುವುದಕ್ಕೆ ನಿಮ್ಮ ಕೊಡುಗೆಯೇ ಕಾರಣ. ನೀವು ನಿಮ್ಮ ಪದಕಗಳ ಬಣ್ಣದ ಬಗ್ಗೆ ಚಿಂತಿಸದೆ ತಮ್ಮ ವಿಜಯವನ್ನು ಆಚರಿಸಿ. ಏಕೆಂದರೆ ನೀವೆಲ್ಲರೂ ದೇಶಕ್ಕೆ ಹೆಮ್ಮೆ ತಂದಿದ್ದೀರಿ ಎಂದು ಪ್ರಧಾನ ಮೋದಿ ಹೇಳಿದ್ದಾರೆ. ಇದಲ್ಲದೆ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆ ಎಕ್ಸ್​ನಲ್ಲೂ ಪ್ರತಿಯೊಬ್ಬ ಪದಕ ವಿಜೇತರ ಬಗ್ಗೆಯೂ ಮೋದಿ ಬರೆದುಕೊಂಡಿದ್ದಾರೆ.

Paralympics 2024: ‘ಪದಕಗಳ ಬಣ್ಣದ ಬಗ್ಗೆ ಚಿಂತಿಸಬೇಡಿ’; ಪದಕ ಗೆದ್ದ ತಂಗವೇಲು, ಶರದ್, ಸುಂದರ್, ಅಜಿತ್ ಜೊತೆ ಮೋದಿ ಮಾತು
ಪ್ಯಾರಾಲಿಂಪಿಕ್ಸ್‌ ಪದಕ ವಿಜೇತರು, ಪ್ರಧಾನಿ ಮೋದಿ
Follow us on

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಪ್ಯಾರಾ ಅಥ್ಲೀಟ್‌ಗಳಾದ ಮರಿಯಪ್ಪನ್ ತಂಗವೇಲು, ಶರದ್ ಕುಮಾರ್, ಸುಂದರ್ ಸಿಂಗ್ ಗುರ್ಜರ್ ಮತ್ತು ಅಜಿತ್ ಸಿಂಗ್ ಅವರಿಗೆ ಕರೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಪದಕದ ಸಾಧನೆಗಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಮಂಗಳವಾರ ನಡೆದ ಪುರುಷರ ಹೈಜಂಪ್ ಟಿ63 ವಿಭಾಗದಲ್ಲಿ ಶರದ್ ಕುಮಾರ್ ಮತ್ತು ಮರಿಯಪ್ಪನ್ ತಂಗವೇಲು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದರೆ, ಪುರುಷರ ಜಾವೆಲಿನ್ ಥ್ರೋ F46 ಈವೆಂಟ್‌ನಲ್ಲಿ ಅಜಿತ್ ಸಿಂಗ್ ಬೆಳ್ಳಿ ಪದಕ, ಸುಂದರ್ ಸಿಂಗ್ ಗುರ್ಜರ್ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದರು.

ಪದಕಗಳ ಬಣ್ಣದ ಬಗ್ಗೆ ಚಿಂತಿಸಬೇಡಿ

ಈ ವೇಳೆ ನಾಲ್ವರು ಪದಕ ವಿಜೇತರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ನಿಮ್ಮ ಪ್ರದರ್ಶನವು ದೇಶದ ಯುವಕರನ್ನು ಪ್ರೇರೇಪಿಸಿದೆ. ಅಲ್ಲದೆ ಭಾರತದಲ್ಲಿ ವಿವಿಧ ಕ್ರೀಡೆಗಳು ಜನಪ್ರಿಯವಾಗುತ್ತಿರುವುದಕ್ಕೆ ನಿಮ್ಮ ಕೊಡುಗೆಯೇ ಕಾರಣ. ನೀವು ನಿಮ್ಮ ಪದಕಗಳ ಬಣ್ಣದ ಬಗ್ಗೆ ಚಿಂತಿಸದೆ ತಮ್ಮ ವಿಜಯವನ್ನು ಆಚರಿಸಿ. ಏಕೆಂದರೆ ನೀವೆಲ್ಲರೂ ದೇಶಕ್ಕೆ ಹೆಮ್ಮೆ ತಂದಿದ್ದೀರಿ ಎಂದು ಪ್ರಧಾನ ಮೋದಿ ಹೇಳಿದ್ದಾರೆ. ಇದಲ್ಲದೆ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆ ಎಕ್ಸ್​ನಲ್ಲೂ ಪ್ರತಿಯೊಬ್ಬ ಪದಕ ವಿಜೇತರ ಬಗ್ಗೆಯೂ ಮೋದಿ ಬರೆದುಕೊಂಡಿದ್ದಾರೆ.

ಸತತ 2ನೇ ಪದಕ

ಪುರುಷರ ಹೈಜಂಪ್ ಟಿ63 ವಿಭಾಗದ ಫೈನಲ್​ನಲ್ಲಿ 1.88 ಮೀಟರ್ ಎತ್ತರ ಜಿಗಿದ್ದು, ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡ ಶರದ್ ಕುಮಾರ್ ಅವರಿಗೆ ಇದು ಅವರ ಎರಡನೇ ಪ್ಯಾರಾಲಿಂಪಿಕ್ ಪದಕವಾಗಿತ್ತು. ಶರದ್ ಕುಮಾರ್ ಈ ಹಿಂದೆಯೋ ಅಂದರೆ 2020ರ ಟೋಕಿಯೊ ಒಲಿಂಪಿಕ್ಸ್​ನಲ್ಲೂ 1.83 ಮೀಟರ್ ಎತ್ತರ ಜಿಗಿದ್ದು, ಕಂಚಿನ ಪದಕವನ್ನು ಗೆದ್ದಿದ್ದರು.

ಸತತ ಮೂರನೇ ಪದಕ

ಇನ್ನು ಇದೇ ಈವೆಂಟ್‌ನಲ್ಲಿ ಕಂಚಿನ ಪದಕ ಗೆದ್ದ ಮರಿಯಪ್ಪನ್ ತಂಗವೇಲು ಸತತ ಮೂರು ಕ್ರೀಡಾಕೂಟಗಳಲ್ಲಿ ಪದಕ ಗೆದ್ದ ಭಾರತದ ಮೊದಲ ಪ್ಯಾರಾ ಅಥ್ಲೀಟ್ ಎಂಬ ಐತಿಹಾಸಿಕ ಸಾಧನೆಯನ್ನೂ ಮಾಡಿದರು. 2016 ರಿಯೊ ಒಲಿಂಪಿಕ್ಸ್​ನಲ್ಲಿ 1.89 ಮೀಟರ್ ಜಿಗಿತದೊಂದಿಗೆ ಚಿನ್ನದ ಪದಕ ಗೆದ್ದಿದ್ದ ತಂಗವೇಲು, 2020 ರ ಟೋಕಿಯೊ ಒಲಿಂಪಿಕ್ಸ್​ನಲ್ಲಿ 1.86 ಮೀಟರ್ ಎತ್ತರ ಜಿಗಿದ್ದು ಬೆಳ್ಳಿ ಪದಕವನ್ನು ಗೆದ್ದಿದ್ದರು.

ಪ್ಯಾರಾಲಿಂಪಿಕ್ಸ್ 2024 ರಲ್ಲಿ ಪುರುಷರ ಹೈ ಜಂಪ್ T63 ನಲ್ಲಿ ಶರದ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದಾರೆ. ಅವರ ಸ್ಥಿರತೆ ಮತ್ತು ಶ್ರೇಷ್ಠತೆಗಾಗಿ ಅವರನ್ನು ಪ್ರಶಂಸಿಸಲಾಗುತ್ತದೆ. ಅವರಿಗೆ ಅಭಿನಂದನೆಗಳು. ಅವರು ಇಡೀ ದೇಶಕ್ಕೆ ಸ್ಫೂರ್ತಿಯಾಗಿದ್ದಾರೆ ಎಂದು ಪ್ರಧಾನಿ ಮೋದಿ Instagram ನಲ್ಲಿ ಬರೆದುಕೊಂಡಿದ್ದಾರೆ.

ಇದಲ್ಲದೆ, ಪುರುಷರ ಹೈಜಂಪ್ ಟಿ63 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿರುವ ಮರಿಯಪ್ಪನ್ ತಂಗವೇಲು ಅವರಿಗೆ ಅಭಿನಂದನೆಗಳು. ಪ್ಯಾರಾಲಿಂಪಿಕ್ಸ್‌ನಲ್ಲಿ ಸತತ ಮೂರು ಆವೃತ್ತಿಗಳಲ್ಲಿ ಪದಕ ಗೆದ್ದಿರುವುದು ಶ್ಲಾಘನೀಯ. ಅವರ ಕೌಶಲ್ಯ, ಸ್ಥಿರತೆ ಮತ್ತು ನಿರ್ಣಯವು ಅಸಾಧಾರಣವಾಗಿದೆ ಎಂದು ಮೋದಿ ಮತ್ತೊಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಸುಂದರ್ ಸಿಂಗ್ ಗುರ್ಜರ್ ಅವರ ಅದ್ಭುತ ಪ್ರದರ್ಶನ. ಪ್ಯಾರಾಲಿಂಪಿಕ್ಸ್ 2024 ರಲ್ಲಿ ಪುರುಷರ ಜಾವೆಲಿನ್ ಥ್ರೋ F46 ಈವೆಂಟ್‌ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಅವರ ಸಮರ್ಪಣೆ ಮತ್ತು ಉತ್ಸಾಹ ಅದ್ಭುತವಾಗಿದೆ. ಈ ಸಾಧನೆಗೆ ಅಭಿನಂದನೆಗಳು ಎಂದು ಪ್ರಧಾನಿ ಬರೆದಿದ್ದಾರೆ.

ಅಜಿತ್ ಸಿಂಗ್ ಅವರ ಅಭೂತಪೂರ್ವ ಸಾಧನೆ. ಅವರು ಪ್ಯಾರಾಲಿಂಪಿಕ್ಸ್ 2024 ರಲ್ಲಿ ಪುರುಷರ ಜಾವೆಲಿನ್ ಥ್ರೋ F46 ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಕ್ರೀಡೆಯಲ್ಲಿ ಅವರ ಬದ್ಧತೆ ಮತ್ತು ದೃಢತೆ ಭಾರತಕ್ಕೆ ಹೆಮ್ಮೆ ತಂದಿದೆ ಎಂದು ಮೋದಿ ಬರೆದುಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:02 pm, Wed, 4 September 24