AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paralympics 2024: ಕಂಚಿನ ಪದಕ ಗೆದ್ದರೂ ಮೋದಿಯಿಂದ ಬೈಸಿಕೊಂಡ ರಾಕೇಶ್..! ಯಾಕೆ ಗೊತ್ತಾ? ವಿಡಿಯೋ ನೋಡಿ

Paralympics 2024: ಪ್ಯಾರಾಲಿಂಪಿಕ್ಸ್​ನ ಮಿಶ್ರ ಟೀಮ್ ಕಾಂಪೌಂಡ್ ಓಪನ್ ಆರ್ಚರಿ ಸ್ಪರ್ಧೆಯಲ್ಲಿ ಭಾರತದ ಬಿಲ್ಲುಗಾರರಾದ ಶೀತಲ್ ದೇವಿ ಮತ್ತು ರಾಕೇಶ್ ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ. ಈ ಜೋಡಿ, ಇಟಲಿಯ ಮ್ಯಾಟಿಯೊ ಬೊನಾಸಿನಾ ಮತ್ತು ಎಲಿಯೊನೊರಾ ಸರ್ಟಿ ಅವರನ್ನು 156.155 ರಿಂದ ಸೋಲಿಸುವ ಮೂಲಕ ಪದಕ ಗೆದ್ದುಕೊಂಡಿತು. ಪದಕ ಗೆದ್ದ ನಂತರ ರಾಕೇಶ್ ಕುಮಾರ್​ಗೆ ಪ್ರಧಾನಿ ನರೇಂದ್ರ ಮೋದಿ ಪದಕ ಗೆದ್ದಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು.

Paralympics 2024: ಕಂಚಿನ ಪದಕ ಗೆದ್ದರೂ ಮೋದಿಯಿಂದ ಬೈಸಿಕೊಂಡ ರಾಕೇಶ್..! ಯಾಕೆ ಗೊತ್ತಾ? ವಿಡಿಯೋ ನೋಡಿ
ರಾಕೇಶ್ ಕುಮಾರ್, ಪ್ರಧಾನಿ ಮೋದಿ
ಪೃಥ್ವಿಶಂಕರ
|

Updated on:Sep 04, 2024 | 9:33 PM

Share

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅದ್ಭುತ ಪ್ರದರ್ಶನ ಮುಂದುವರಿದಿದೆ. ಪ್ಯಾರಾಲಿಂಪಿಕ್ ಸ್ಪರ್ಧೆಯ ಏಳನೇ ದಿನವೂ ಭಾರತ ಪದಕದ ಖಾತೆ ತೆರೆದಿದೆ. ಇದರೊಂದಿಗೆ ಪದಕಗಳ ವಿಷಯದಲ್ಲಿ ಭಾರತ 20ರ ಗಡಿ ದಾಟಿದ್ದು, 21ನೇ ಪದಕದ ರೂಪದಲ್ಲಿ ಸಚಿನ್ ಖಿಲಾರಿ ಅವರು ಶಾಟ್‌ಪುಟ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಈ ನಡುವೆ ಮಿಶ್ರ ಟೀಮ್ ಕಾಂಪೌಂಡ್ ಓಪನ್ ಆರ್ಚರಿ ಸ್ಪರ್ಧೆಯಲ್ಲಿ ಪದಕ ಗೆದ್ದಿದ್ದ ರಾಕೇಶ್ ಕುಮಾರ್​ಗೆ ಅಭಿನಂದನೆ ಸಲ್ಲಿಸಲು ಕರೆ ಮಾಡಿದ್ದ ಪ್ರಧಾನಿ ಮೋದಿ ಅವರು, ಕಂಚಿನ ಪದಕ ವಿಜೇತ ರಾಕೇಶ್​ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಪ್ಯಾರಾಲಿಂಪಿಕ್ಸ್​ನ ಮಿಶ್ರ ಟೀಮ್ ಕಾಂಪೌಂಡ್ ಓಪನ್ ಆರ್ಚರಿ ಸ್ಪರ್ಧೆಯಲ್ಲಿ ಭಾರತದ ಬಿಲ್ಲುಗಾರರಾದ ಶೀತಲ್ ದೇವಿ ಮತ್ತು ರಾಕೇಶ್ ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ. ಈ ಜೋಡಿ, ಇಟಲಿಯ ಮ್ಯಾಟಿಯೊ ಬೊನಾಸಿನಾ ಮತ್ತು ಎಲಿಯೊನೊರಾ ಸರ್ಟಿ ಅವರನ್ನು 156.155 ರಿಂದ ಸೋಲಿಸುವ ಮೂಲಕ ಪದಕ ಗೆದ್ದುಕೊಂಡಿತು. ಪದಕ ಗೆದ್ದ ನಂತರ ರಾಕೇಶ್ ಕುಮಾರ್​ಗೆ ಕರೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಪದಕ ಗೆದ್ದಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು.

ನಾನು ನಿಮ್ಮನ್ನು ಬೈಯಬೇಕು

ಈ ವೇಳೆ ಮುಂದುವರೆದು ಮಾತನಾಡಿದ ಪ್ರಧಾನಿ ಮೋದಿ ಅವರು ರಾಕೇಶ್ ಅವರ ತೂಕದ ಬಗ್ಗೆ ಗದರಿದರು. ಪ್ರಧಾನಿ ಮೋದಿ, ‘ನಾನು ನಿಮ್ಮನ್ನು ಬೈಯಬೇಕು. ನೀವು ತೂಕ ಇಳಿಸಿಕೊಳ್ಳುತ್ತೇವೆ ಎಂದು ನನಗೆ ಭರವಸೆ ನೀಡಿದ್ದೀರಿ, ಆದರೆ ನೀವು ಅದನ್ನು ಮಾಡಲಿಲ್ಲ ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ರಾಕೇಶ್ ಕುಮಾರ್, ‘ಪ್ಯಾರಾಲಿಂಪಿಕ್ ತರಬೇತಿಯಿಂದ ತೂಕ ಇಳಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಆದರೆ ಈಗ ನನ್ನ ತೂಕವನ್ನು ಸಾಕಷ್ಟು ಕಡಿಮೆ ಮಾಡುಕೊಳ್ಳುತ್ತೇನೆ’ ಎಂದಿದ್ದಾರೆ. ಈ ಇಬ್ಬರ ನಡುವಿನ ತಮಾಷದಾಯಕ ಸಂಭಾಷಣೆ ಇದೀಗ ವೈರಲ್ ಆಗಿದೆ.

ರಾಕೇಶ್ ಕುಮಾರ್ ಯಾರು?

ರಾಕೇಶ್ ಕುಮಾರ್ ಜಮ್ಮು ಮತ್ತು ಕಾಶ್ಮೀರದ ಕತ್ರಾ ನಿವಾಸಿ. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ರಾಕೇಶ್ ಅವರ ತಂದೆ ಬಡಗಿ ಮತ್ತು ತಾಯಿ ಗೃಹಿಣಿ. 2010ರಲ್ಲಿ ನಡೆದ ಅಪಘಾತದಿಂದಾಗಿ ತಮ್ಮ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡ ರಾಕೇಶ್, ಅಂದಿನಿಂದ ಗಾಲಿಕುರ್ಚಿಯ ಆಧಾರದಿಂದಾಗಿ ಜೀವನ ಸಾಗಿಸುತ್ತಿದ್ದಾರೆ. ಈ ಅಪಘಾತದಿಂದಾಗಿ ತಮ್ಮ ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದ್ದ ರಾಕೇಶ್ ಒಮ್ಮೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡಿದ್ದರು. ಆದರೆ ಇದಾದ ನಂತರ ಆರ್ಚರಿ ಮೇಲೆ ಕೇಂದ್ರೀಕರಿಸಿದ ರಾಕೇಶ್ ಇಂದು ದೇಶದ ಅಗ್ರ ಪ್ಯಾರಾ ಅಥ್ಲೀಟ್‌ಗಳಲ್ಲಿ ಒಬ್ಬರಾಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:28 pm, Wed, 4 September 24