Paralympics 2024: ಭಾರತಕ್ಕೆ 21ನೇ ಪದಕ; ಶಾಟ್ ಪುಟ್ – F46 ವಿಭಾಗದಲ್ಲಿ ಬೆಳ್ಳಿ ಗೆದ್ದ ಸಚಿನ್
Paralympics 2024: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತನ್ನ ಎಂಟನೇ ಬೆಳ್ಳಿ ಪದಕವನ್ನು ಪಡೆದುಕೊಂಡಿದೆ. ಕ್ರೀಡಾಕೂಟದ ಏಳನೇ ದಿನ ಪುರುಷರ ಶಾಟ್ಪುಟ್ ಎಫ್46 ವಿಭಾಗದಲ್ಲಿ ಭಾರತದ ಸಚಿನ್ ಸರ್ಜೆರಾವ್ ಖಿಲಾರಿ ತನ್ನ ಎರಡನೇ ಪ್ರಯತ್ನದಲ್ಲಿ 16.32 ಮೀಟರ್ ದೂರ ಶಾಟ್ಪುಟ್ ಎಸೆದು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು. ಇದರೊಂದಿಗೆ ಭಾರತ ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಇದುವರೆಗೆ ಒಟ್ಟು 21 ಪದಕಗಳನ್ನು ತನ್ನದಾಗಿಸಿಕೊಂಡಿದೆ.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತನ್ನ ಎಂಟನೇ ಬೆಳ್ಳಿ ಪದಕವನ್ನು ಪಡೆದುಕೊಂಡಿದೆ. ಕ್ರೀಡಾಕೂಟದ ಏಳನೇ ದಿನ ಪುರುಷರ ಶಾಟ್ಪುಟ್ ಎಫ್46 ವಿಭಾಗದಲ್ಲಿ ಭಾರತದ ಸಚಿನ್ ಸರ್ಜೆರಾವ್ ಖಿಲಾರಿ ತನ್ನ ಎರಡನೇ ಪ್ರಯತ್ನದಲ್ಲಿ 16.32 ಮೀಟರ್ ದೂರ ಶಾಟ್ಪುಟ್ ಎಸೆದು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು. ಈ ಬೆಳ್ಳಿ ಪದಕದ ಗೆಲುವಿನೊಂದಿಗೆ, ಸಚಿನ್ 40 ವರ್ಷಗಳಲ್ಲಿ ಪ್ಯಾರಾಲಿಂಪಿಕ್ ಶಾಟ್-ಪುಟ್ ಪದಕ ಗೆದ್ದ ಮೊದಲ ಭಾರತೀಯ ಪುರುಷ ಅಥ್ಲೀಟ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 1984ರಲ್ಲಿ ಭಾರತ ಪುರುಷರ ಶಾಟ್‌ಪುಟ್‌ನಲ್ಲಿ ಮೊದಲ ಪದಕ ಗೆದ್ದಿತ್ತು. ಸಚಿನ್ ಅವರ ಈ ಪದಕದೊಂದಿಗೆ ಭಾರತದ ಪದಕಗಳ ಸಂಖ್ಯೆ 21ಕ್ಕೆ ತಲುಪಿದೆ. ಏಷ್ಯನ್ ದಾಖಲೆಯ 16.32 ಮೀಟರ್ ದೂರ ಶಾಟ್ ಪುಟ್ ಎಸೆದ ಸಚಿನ್ ಎರಡನೇ ಸ್ಥಾನ ಪಡೆದರೆ, ಕೆನಡಾದ ಗ್ರೆಗ್ ಸ್ಟೀವರ್ಟ್ ಚಿನ್ನದ ಪದಕ ಗೆದ್ದರು. ಉಳಿದಂತೆ ಕಂಚಿನ ಪದಕ ಕ್ರೊವೇಷಿಯಾದ ಲುಕಾ ಬಾಕೊವಿಕ್ ಪಾಲಾಯಿತು.
#Silver🥈for Sachin🤩🥳#ParaAthletics: Men’s Shot Put F46 Final👇
Sachin Khilari gets #Silver with an Area Record (Asian) of 16.32m 😍 marking Medal No. 21 for India at the #ParisParalympics2024🥳
Meanwhile, compatriots Mohd Yaseer & Rohit Kumar finish 8th and 9th with throws… pic.twitter.com/przGebsFfl
— SAI Media (@Media_SAI) September 4, 2024
ತನ್ನದೆ ಏಷ್ಯನ್ ದಾಖಲೆ ಉಡೀಸ್
ಬೆಳ್ಳಿ ಪದಕ ಗೆಲ್ಲುವುದಲ್ಲದೆ ಸಚಿನ್, ತಮ್ಮ ಎರಡನೇ ಪ್ರಯತ್ನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ 16.30 ಮೀಟರ್ ದೂರ ಎಸೆದು ತಮ್ಮದೇ ಆದ ಏಷ್ಯನ್ ದಾಖಲೆಯನ್ನು ಮುರಿದರು. ಅವರು ಇದೇ ಮೇ ತಿಂಗಳಲ್ಲಿ ಜಪಾನ್‌ನಲ್ಲಿ ನಡೆದ ವಿಶ್ವ ಪ್ಯಾರಾ-ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಈ ದಾಖಲೆಯನ್ನು ಮಾಡಿದ್ದರು. ಖಿಲಾರಿ ಅವರ ಬೆಳ್ಳಿ ಪದಕವು ನಡೆಯುತ್ತಿರುವ ಪ್ಯಾರಾ ಗೇಮ್ಸ್‌ನಲ್ಲಿ ಪ್ಯಾರಾ-ಅಥ್ಲೆಟಿಕ್ಸ್‌ನಲ್ಲಿ ಗೆದ್ದ 11 ನೇ ಪದಕವಾಗಿದೆ. ಇನ್ನು ಸಚಿನ್, ಕಳೆದ ವರ್ಷ ಚೀನಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನೂ ಗೆದ್ದಿದ್ದರು.
ಶಾಟ್‌ಪುಟ್‌ನಲ್ಲಿ ಮೂರನೇ ಪದಕ
ಸಚಿನ್ ಖಿಲಾರಿ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಶಾಟ್‌ಪುಟ್‌ನಲ್ಲಿ ಪದಕ ಗೆದ್ದ ಮೂರನೇ ಭಾರತೀಯ ಅಥ್ಲೀಟ್. ಇದಕ್ಕೂ ಮುನ್ನ 1984ರಲ್ಲಿ ಜೋಗಿಂದರ್ ಸಿಂಗ್ ಬೇಡಿ ಕಂಚಿನ ಪದಕ ಹಾಗೂ ಮಹಿಳಾ ಅಥ್ಲೀಟ್ ದೀಪಾ ಮಲಿಕ್ 2016ರ ರಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಇದೀಗ 8 ವರ್ಷಗಳ ನಂತರ ಈ ಮೂರನೇ ಪದಕ ಬಂದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:36 pm, Wed, 4 September 24