Paris Olympic 2024: ಪ್ಯಾರಿಸ್ ಒಲಿಂಪಿಕ್ಸ್​ ಪದಕದಲ್ಲಿ ಐಫೆಲ್ ಟವರ್ ತುಣುಕು

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 12, 2024 | 2:23 PM

Paris Olympic 2024: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 26 ರಿಂದ ಶುರುವಾಗಲಿದ್ದು, ಆಗಸ್ಟ್ 11 ರವರೆಗೆ ನಡೆಯಲಿದೆ. ಇದಾದ ಬಳಿಕ ಪ್ಯಾರಿಸ್​ನಲ್ಲೇ ಪ್ಯಾರಾಲಿಂಪಿಕ್ಸ್ ಕೂಡ ಆರಂಭವಾಗಲಿದ್ದು, ಈ ಕ್ರೀಡಾಕೂಟವು ಆಗಸ್ಟ್ 28 ರಿಂದ ಸೆಪ್ಟೆಂಬರ್ 8 ರವರೆಗೆ ನಡೆಯಲಿದೆ. ಈ ವೇಳೆ ನೀಡಲಾಗುವ ಪದಕಗಳಲ್ಲಿ ಐಫೆಲ್ ಟವರ್​ನ ಕಬ್ಬಿಣದ ತುಣುಕುಗಳನ್ನು ಬಳಸಲಾಗಿರುವುದು ವಿಶೇಷ.

Paris Olympic 2024: ಪ್ಯಾರಿಸ್ ಒಲಿಂಪಿಕ್ಸ್​ ಪದಕದಲ್ಲಿ ಐಫೆಲ್ ಟವರ್ ತುಣುಕು
ಪ್ಯಾರಿಸ್ ಒಲಿಂಪಿಕ್ಸ್ ಪದಕ
Follow us on

ಪ್ಯಾರಿಸ್ ಒಲಿಂಪಿಕ್ಸ್ (Paris Olympic 2024) ಕ್ರೀಡಾಕೂಟದಲ್ಲಿ ವಿಜೇತರಿಗೆ ನೀಡಲಾಗುವ ಪದಕಗಳ ಫಸ್ಟ್ ಲುಕ್ ಬಹಿರಂಗವಾಗಿದೆ. ಈ ಬಾರಿ ನೀಡಲಾಗುವ ಪದಕದಲ್ಲಿ ಷಡ್ಭುಜಾಕೃತಿಯ ಭಾಗವನ್ನು ವಿನ್ಯಾಸಗೊಳಿಸಲಾಗಿದೆ. ಈ ವಿನ್ಯಾಸಕ್ಕಾಗಿ ಪ್ಯಾರಿಸ್‌ನ ಐಫೆಲ್ ಟವರ್‌ನಿಂದ ತೆಗೆದ ಕಬ್ಬಿಣವನ್ನು ಬಳಸಲಾಗಿರುವುದು ವಿಶೇಷ. ಅದರಂತೆ ಈ ಬಾರಿಯ ಒಲಿಂಪಿಕ್ಸ್ ಪದಕ ಗೆಲ್ಲುವವರು ಐತಿಹಾಸಿಕ ಐಫೆಲ್ ಟವರ್​ನ ತುಣುಕನ್ನು ಮನೆಗೆ ತೆಗೆದುಕೊಂಡು ಹೋಗಲಿದ್ದಾರೆ ಎಂದು ಅಯೋಜಕರು ತಿಳಿಸಿದ್ದಾರೆ.

ಇದಾಗ್ಯೂ ಈ ಬಾರಿ ಕೂಡ ಒಲಿಂಪಿಕ್ಸ್​ ಪದಕವನ್ನು ಸಾಂಪ್ರದಾಯಿಕ ಶೈಲಿಯಲ್ಲೇ ವಿನ್ಯಾಸಗೊಳಿಸಲಾಗಿದೆ. ಪದಕದ ಭಾಗದಲ್ಲಿ ಗ್ರೀಸ್‌ನಲ್ಲಿ ನಡೆದ ಕ್ರೀಡಾಕೂಟದ ಮರುಹುಟ್ಟಿನ ಕಥೆಯನ್ನು ಪ್ರತಿನಿಧಿಸುವಂತೆ ಸಾಂಪ್ರದಾಯಿಕ ವೈಶಿಷ್ಟ್ಯ, ವಿಜಯದ ದೇವತೆ ಅಥೇನಾ ನೈಕ್ ಅನ್ನು ಚಿತ್ರೀಕರಿಸಲಾಗಿದೆ. ಮತ್ತೊಂದು ಭಾಗದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಅನ್ನು ಪ್ರತಿನಿಧಿಸಿದ ಬರಹ ಮತ್ತು ಲೋಗೋವನ್ನು ಬಳಸಲಾಗಿದೆ.

ಪ್ಯಾರಿಸ್ ಒಲಿಂಪಿಕ್ಸ್ ಪದಕ

ಇಲ್ಲಿ ಪ್ಯಾರಿಸ್ ಒಲಿಂಪಿಕ್ಸ್ 2024 ಮತ್ತು ಲೋಗೋವನ್ನು ಚಿತ್ರಿಸಲು ಐಫೆಲ್ ಟವರ್‌ನ ಕಬ್ಬಿಣದ ತುಣುಕುಗಳನ್ನು ಬಳಸಲಾಗಿದೆ. ಇದೇ ಕಾರಣಕ್ಕೆ ಈ ಬಾರಿ ಪದಕ ಗೆಲ್ಲುವ ಕ್ರೀಡಾಪಟುಗಳು ಐಫೆಲ್ ಟವರ್​ನ ತುಣುಕನ್ನು ಮನೆಗೆ ಕೊಂಡೊಯ್ಯಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ಮಾರ್ಟಿನ್ ಫೋರ್ಕೇಡ್ ಅವರ ಅಧ್ಯಕ್ಷತೆಯಲ್ಲಿ ಪ್ಯಾರಿಸ್ 2024 ಕ್ರೀಡಾಪಟುಗಳ ಆಯೋಗವು ಒಲಂಪಿಕ್ ಕ್ರೀಡಾಕೂಟಕ್ಕಾಗಿ ಪದಕಗಳನ್ನು ವಿನ್ಯಾಸಗೊಳಿಸಿದ್ದಾರೆ. ಫ್ರಾನ್ಸ್ ಮತ್ತು ಪ್ಯಾರಿಸ್‌ನ ಸಾಂಪ್ರದಾಯಿಕ ಸ್ಮಾರಕವಾದ ಐಫೆಲ್ ಟವರ್ ಅನ್ನು ಕ್ರೀಡಾಕೂಟದ ಸಂಯೋಜಿಸುವಲ್ಲಿ ಯಶಸ್ವಿಯಾಗಿದ್ದೇವೆ.

ಈ ವಿನ್ಯಾಸವು ಒಟ್ಟು 5084 ಪದಕಗಳಲ್ಲೂ ಕಂಡು ಬರಲಿದೆ. ಅಲ್ಲದೆ 18-ಗ್ರಾಂ ಷಡ್ಭುಜಾಕೃತಿಯ ಟೋಕನ್‌ಗಳನ್ನು ಹೊಂದಿರುವ ಪದಕಗಳನ್ನು ಈ ಹಿಂದೆ ಸ್ಮಾರಕದ ನವೀಕರಣದ ಸಮಯದಲ್ಲಿ ಐಫೆಲ್ ಟವರ್‌ನಿಂದ ತೆಗೆದ ಕಬ್ಬಿಣವನ್ನು ಬಳಸಲಾಗಿದೆ ಎಂದು ಮಾರ್ಟಿನ್ ಫೋರ್ಕೇಡ್ ತಿಳಿಸಿದ್ದಾರೆ.

ಐಫೆಲ್ ಟವರ್ ಇತಿಹಾಸ:

ಫ್ರೆಂಚ್ ಕ್ರಾಂತಿಯ 100ನೇ ವಾರ್ಷಿಕೋತ್ಸವವನ್ನು ಆಚರಿಸಿದ ಪ್ಯಾರಿಸ್‌ನಲ್ಲಿ 1889ರ ವಿಶ್ವ ಮೇಳದ ಕೇಂದ್ರಬಿಂದುವಾಗಿ ಐಫೆಲ್ ಟವರ್ ಅನ್ನು ನಿರ್ಮಿಸಲಾಯಿತು. ಈ ಟವರ್​ ನಿರ್ಮಾಣವು 1887 ರಲ್ಲಿ ಪ್ರಾರಂಭವಾಯಿತು. ಅಲ್ಲದೆ ಕೇವಲ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗಿತ್ತು.

ಇದನ್ನೂ ಓದಿ: Paris Olympics 2024: ಒಲಿಂಪಿಕ್ಸ್​ನಲ್ಲಿ ಕಣಕ್ಕಿಳಿಯಲಿರುವ ಭಾರತೀಯ ಸ್ಪರ್ಧಿಗಳ ಪಟ್ಟಿ ಇಲ್ಲಿದೆ

ಇದೀಗ ಈ ಐತಿಹಾಸಿಕ ಸ್ಮಾರಕವನ್ನು ಒಲಿಂಪಿಕ್ಸ್​ನೊಂದಿಗೆ ಸಂಯೋಜಿಸುವಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಆಯೋಜಕರು ಯಶಸ್ವಿಯಾಗಿದ್ದಾರೆ. ಅದರಂತೆ ಈ ಬಾರಿಯ ಒಲಿಂಪಿಕ್ಸ್ ಪದಕದ ಮಧ್ಯ ಭಾಗದಲ್ಲಿ ಐಫೆಲ್ ಟವರ್​ನ ಕಬ್ಬಿಣದ ತುಣುಕಿನ ಭಾಗವೊಂದು ಕಾಣಿಸಿಕೊಳ್ಳಲಿದೆ.

 

 

Published On - 1:56 pm, Wed, 10 July 24