Paris Olympics 2024; ಟೋಕಿಯೊದಲ್ಲಿ ಕೈಕೊಟ್ಟಿದ್ದ ಪಿಸ್ತೂಲ್; ಪ್ಯಾರಿಸ್‌ನಲ್ಲಿ ಇತಿಹಾಸ ಸೃಷ್ಟಿಸಿದ ಮನು ಭಾಕರ್
Paris Olympics 2024, Manu Bhaker: ಒಲಿಂಪಿಕ್ಸ್ ಪದಕ ವಿಜೇತೆ ಮನು ಭಾಕರ್ ಅತಿ ಹೆಚ್ಚು ಬಾಕ್ಸರ್‌ಗಳು ಮತ್ತು ಕುಸ್ತಿಪಟುಗಳನ್ನು ನೀಡಿದ ಹರಿಯಾಣ ರಾಜ್ಯದಿಂದ ಬಂದವರು. ಇಲ್ಲಿನ ಕ್ರೀಡಾಪಟುಗಳು ವಿಶ್ವದಾದ್ಯಂತ ತಮ್ಮ ಪ್ರತಿಭೆ ಪ್ರದರ್ಶಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಶೂಟಿಂಗ್ ಗರ್ಲ್ ಮನು ಭಾಕರ್ ಕೂಡ ಇದೇ ರಾಜ್ಯದಿಂದ ಬಂದಿದ್ದು, ಈ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟಿದ್ದಾರೆ.

ಭಾರತದ 22 ವರ್ಷದ ಶೂಟರ್ ಮನು ಭಾಕರ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಶೂಟಿಂಗ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಸ್ಪರ್ಧಿ ಎಂಬ ದಾಖಲೆ ನಿರ್ಮಿಸಿದ್ದಾರೆ. ವಿಶೇಷವೆಂದರೆ ಕಳೆದ ಒಲಂಪಿಕ್ಸ್‌ನಲ್ಲಿ ಮನು ಭಾಕರ್ ತಮ್ಮ ಪಿಸ್ತೂಲಿನಲ್ಲಿ ಕಂಡುಬಂದ ದೋಷದಿಂದಾಗಿ ಪದಕದ ರೇಸ್ನಿಂದ ಹೊರಬಿದ್ದಿದ್ದರು. ಆದರೆ ಈ ಬಾರಿ ಅವರು ಕೋಟ್ಯಂತರ ಭಾರತೀಯರ ಕನಸನ್ನು ನನಸಾಗಿಸಿದ್ದಾರೆ.
ಒಲಿಂಪಿಕ್ಸ್ ಪದಕ ವಿಜೇತೆ ಮನು ಭಾಕರ್ ಅತಿ ಹೆಚ್ಚು ಬಾಕ್ಸರ್‌ಗಳು ಮತ್ತು ಕುಸ್ತಿಪಟುಗಳನ್ನು ನೀಡಿದ ಹರಿಯಾಣ ರಾಜ್ಯದಿಂದ ಬಂದವರು. ಇಲ್ಲಿನ ಕ್ರೀಡಾಪಟುಗಳು ವಿಶ್ವದಾದ್ಯಂತ ತಮ್ಮ ಪ್ರತಿಭೆ ಪ್ರದರ್ಶಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಶೂಟಿಂಗ್ ಗರ್ಲ್ ಮನು ಭಾಕರ್ ಕೂಡ ಇದೇ ರಾಜ್ಯದಿಂದ ಬಂದಿದ್ದು, ಈ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟಿದ್ದಾರೆ. ಹರಿಯಾಣದ ಜಜ್ಜಾರ್‌ನಲ್ಲಿ ಜನಿಸಿದ ಮನು ಭಾಕರ್ ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರು. ಟೆನ್ನಿಸ್‌ನಿಂದ ಹಿಡಿದು ಸ್ಕೇಟಿಂಗ್ ಮತ್ತು ಬಾಕ್ಸಿಂಗ್‌ವರೆಗಿನ ಸ್ಪರ್ಧೆಗಳಲ್ಲಿ ಆಗಾಗ್ಗೆ ಭಾಗವಹಿಸುತ್ತಿದ್ದರು. ಇದಲ್ಲದೇ ‘ಥಾನ್ ತಾ’ ಎಂಬ ಸಮರ ಕಲೆಯಲ್ಲೂ ಭಾಗವಹಿಸಿ ರಾಷ್ಟ್ರಮಟ್ಟದಲ್ಲಿ ಪದಕ ಗೆದ್ದಿದ್ದಾರೆ.
ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸಕ್ತಿ
ಮನು ಭಾಕರ್ 14 ವರ್ಷದವರಿದ್ದಾಗ, ಶೂಟಿಂಗ್‌ನಲ್ಲಿ ತನ್ನ ವೃತ್ತಿಜೀವನವನ್ನು ಆರಂಭಿಸಲು ನಿರ್ಧರಿಸಿದರು. ಆ ವೇಳೆಗೆ 2016 ರ ರಿಯೊ ಒಲಿಂಪಿಕ್ಸ್ ಕೂಡ ಮುಗಿದಿತ್ತು. ಹೀಗಾಗಿ ಶೂಟಿಂಗ್‌ನಲ್ಲಿ ವೃತ್ತಿಜೀವನ ಕಟ್ಟಿಕ್ಕೊಳ್ಳಲು ಮುಂದಾದ ಮನು, ಅಭ್ಯಾಸ ಮಾಡಲು ಪಿಸ್ತೂಲ್ ತರುವಂತೆ ತಂದೆ ರಾಮ್ ಕಿಶನ್ ಭಾಕರ್ ಬಳಿ ಮನವಿ ಮಾಡಿದರು. ಮಗಳ ಆಸಕ್ತಿ ನೋಡಿದ ಅವರ ತಂದೆ ಕೂಡ ಮಗಳ ಕನಸಿಗೆ ನಿರೇರೆದರು.
ಒಲಿಂಪಿಯನ್ಗೆ ಸೋಲಿನ ಶಾಕ್
2017 ರಲ್ಲಿ ಮನು ಭಾಕರ್ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ 10 ಮೀಟರ್ ಏರ್ ಪಿಸ್ತೂಲ್‌ನ ಫೈನಲ್‌ನಲ್ಲಿ ಒಲಿಂಪಿಯನ್ ಮತ್ತು ಮಾಜಿ ವಿಶ್ವ ನಂ-1 ಆಟಗಾರ್ತಿ ಹೀನಾ ಸಿಧು ಅವರನ್ನು ಸೋಲಿಸಿದರು. ಇದಲ್ಲದೆ, ಅವರು 2017 ರಲ್ಲಿ ಏಷ್ಯನ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದು, ಇಡೀ ದೇಶದಲ್ಲಿ ಪ್ರಸಿದ್ಧರಾದರು.
ಚೊಚ್ಚಲ ವಿಶ್ವಕಪ್‌ನಲ್ಲಿ ದಾಖಲೆ
ಆ ಬಳಿಕ ಮನು ಭಾಕರ್, ಮೆಕ್ಸಿಕೋದ ಗ್ವಾಡಲಜಾರಾದಲ್ಲಿ ನಡೆದ ಇಂಟರ್ನ್ಯಾಷನಲ್ ಸ್ಪೋರ್ಟ್ಸ್ ಶೂಟಿಂಗ್ ಫೆಡರೇಶನ್ ವಿಶ್ವಕಪ್‌ನಲ್ಲಿ ಆಡಿದ ತಮ್ಮ ಚೊಚ್ಚಲ ಪಂದ್ಯದಲ್ಲೇ ವಿಶ್ವದಾಖಲೆ ನಿರ್ಮಿಸಿದರು. 10 ಮೀಟರ್ ಏರ್ ಪಿಸ್ತೂಲ್‌ನ ಮಹಿಳೆಯರ ಫೈನಲ್‌ನಲ್ಲಿ, ಅವರು ಒಲಿಂಪಿಕ್ ಚಿನ್ನದ ಪದಕ ವಿಜೇತೆ ಮತ್ತು ವಿಶ್ವಕಪ್ ವಿಜೇತಯನ್ನು ಹಿಂದಿಕ್ಕಿದರು. ಕೇವಲ 16 ನೇ ವಯಸ್ಸಿನಲ್ಲಿ, ಅವರು ISSF ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದ ಅತ್ಯಂತ ಕಿರಿಯ ಭಾರತೀಯ ಸ್ಪರ್ಧಿ ಎನಿಸಿಕೊಂಡರು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವಘಡ
ವಾಸ್ತವವಾಗಿ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಅವರ ಪಿಸ್ತೂಲ್, ಸ್ಪರ್ಧೆ ನಡೆಯುವ ಸಮಯದಲ್ಲೇ ಕೈಕೊಟ್ಟಿತು. ಇದರಿಂದಾಗಿ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಅವರು 20 ನಿಮಿಷಗಳ ಸಮಯವನ್ನು ಕಳೆದುಕೊಳ್ಳಬೇಕಾಯಿತು. ಮನು ಅವರ ಪಿಸ್ತೂಲಿನ ಕಾಕಿಂಗ್ ಲಿವರ್ ಹಾನಿಗೊಳಗಾಗಿತ್ತು. ಇದರಿಂದಾಗಿ ಅವರು 55 ನಿಮಿಷಗಳಲ್ಲಿ 44 ಶಾಟ್‌ಗಳನ್ನು ಮಾಡಬೇಕಿತ್ತು. ಆದಾಗ್ಯೂ, ಪಿಸ್ತೂಲ್ ಸರಿ ಹೋದ ಬಳಿಕ ಮನು ಫೈರಿಂಗ್ ಪಾಯಿಂಟ್‌ಗೆ ಮರಳಿದರಾದರೂ ಅಷ್ಟರಲ್ಲಿ ಅದು ತುಂಬಾ ತಡವಾಗಿತ್ತು. ಮನು ಉಳಿದ ಶಾಟ್‌ಗಳನ್ನು ಕೇವಲ 36 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕಾಯಿತು. ಇದು ಬಹುತೇಕ ಅಸಾಧ್ಯವಾದ ಕೆಲಸವಾಗಿತ್ತು. ಅಂತಿಮವಾಗಿ ಪದಕದ ರೇಸ್ನಿಂದ ಮನು ಹೊರಬರಬೇಕಾಯಿತು.
Published On - 5:27 pm, Sun, 28 July 24
