
Paris Olympics 2024: ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ ಆರಂಭಕ್ಕೆ ಇನ್ನು ಉಳಿದಿರುವುದು ಕೇವಲ ದಿನಗಳು ಮಾತ್ರ. ಜುಲೈ 26 ರಿಂದ ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ಶುರುವಾಗಲಿರುವ ಅದ್ಧೂರಿ ಕ್ರೀಡಾಕೂಟದಲ್ಲಿ ಈ ಬಾರಿ 206 ದೇಶಗಳು ಪಾಲ್ಗೊಳ್ಳುತ್ತಿವೆ. ಈ ದೇಶಗಳಲ್ಲಿ ಭಾರತ ಕೂಡ ಒಂದು.
ಭಾರತದಿಂದ ಒಟ್ಟು 117 ಕ್ರೀಡಾಪಟುಗಳು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕಣಕ್ಕಿಳಿಯಲಿದ್ದಾರೆ. ಇವರಲ್ಲಿ ಭಾರತೀಯ ಹಾಕಿ ತಂಡ ಕೂಡ ಸೇರಿದೆ.
ವಿಶೇಷ ಎಂದರೆ ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿಕ ಪದಕ ಗೆದ್ದು ಭಾರತದ ಕೀರ್ತಿ ಪಾತಾಕೆಯನ್ನು ಮುಗಿಲೆತ್ತರಕ್ಕೇರಿಸಿದ ಭಾರತ ಹಾಕಿ ತಂಡವು ಈ ಬಾರಿ ಕೂಡ ಪದಕದೊಂದಿಗೆ ಹಿಂತಿರುಗುವ ವಿಶ್ವಾಸದಲ್ಲಿದೆ. ಇದಕ್ಕಾಗಿ ಬಲಿಷ್ಠ ಪಡೆಯನ್ನೆ ಆಯ್ಕೆ ಮಾಡಿಕೊಂಡಿದೆ.
ಇದನ್ನೂ ಓದಿ: Paris Olympics 2024: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ರತಿಕ್ರೀಡೆ: 3 ಲಕ್ಷ ಕಾಂಡೋಮ್ ವಿತರಣೆ
‘ಬ್ಲೂ ಬ್ರಿಗೇಡ್’ ಖ್ಯಾತಿಯ ಭಾರತ ಹಾಕಿ ತಂಡ ಒಲಿಂಪಿಕ್ಸ್ನಲ್ಲಿ ಒಟ್ಟು ಎಂಟು ಚಿನ್ನದ ಪದಕಗಳನ್ನು ಗೆದ್ದಿದೆ. ಆದರೆ 1980ರ ದಶಕದ ನಂತರ ಫೀಲ್ಡ್ ಹಾಕಿಯಲ್ಲಿ ಭಾರತದ ಪ್ರಾಬಲ್ಯ ಕುಸಿಯಿತು. ಇದಾದ ಬಳಿಕ ಪದಕ ಗೆಲ್ಲಲು ಬರೋಬ್ಬರಿ 41 ವರ್ಷಗಳನ್ನು ಕಾಯಬೇಕಾಯಿತು ಎಂಬುದೇ ಸತ್ಯ. ಅದರಂತೆ 2021ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಭಾರತೀಯ ಹಾಕಿ ತಂಡ ನಾಲ್ಕು ದಶಕಗಳ ಮೆಡಲ್ ಬರವನ್ನು ನೀಗಿಸಿದರು. ಈ ಬಾರಿ ಕೂಡ ಭಾರತ ಹಾಕಿ ತಂಡ ಪದಕ ಗೆಲ್ಲುವ ಫೇವರೇಟ್ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಪ್ಯಾರಿಸ್ನಲ್ಲೂ ಭಾರತದ ಕೀರ್ತಿ ಪಾತಾಕೆ ಮುಗಿಲೆತ್ತರಕ್ಕೇರುವ ನಿರೀಕ್ಷೆಯಿದೆ.
Published On - 10:05 am, Thu, 18 July 24