Paris Olympics 2024: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ರತಿಕ್ರೀಡೆ: 3 ಲಕ್ಷ ಕಾಂಡೋಮ್ ವಿತರಣೆ
Paris Olympics 2024: ಒಲಿಂಪಿಕ್ಸ್ ಆಯೋಜಕರು ಕಾಂಡೋಮ್‌ಗಳನ್ನು ನೀಡುವ ಟ್ರೆಂಡ್ ಶುರುವಾಗಿದ್ದು 1988 ರಲ್ಲಿ. ಸಿಯೋಲ್ನಲ್ಲಿ ನಡೆದ ಒಲಿಂಪಿಕ್ಸ್ ವೇಳೆ ಏಡ್ಸ್ ಸಾಂಕ್ರಾಮಿಕ ರೋಗವು ಉತ್ತುಂಗದಲ್ಲಿತ್ತು. ಈ ಬಗ್ಗೆ ಜಾಗೃತಿ ಮೂಡಿಲು ಈ ಅಭಿಯಾನ ಶುರುವಾಗಿತ್ತು. ಈ ಅಭಿಯಾನವು ಇದೀಗ ಟ್ರೆಂಡ್ ಆಗಿ ಮಾರ್ಪಟ್ಟಿದೆ. ಅಲ್ಲದೆ ಪ್ರತಿ ಒಲಿಂಪಿಕ್ಸ್ನಲ್ಲೂ ಆಯೋಜಕರು ಕಾಂಡೋಮ್‌ಗಳನ್ನು ವಿತರಿಸುತ್ತಿದ್ದಾರೆ.

Paris Olympics 2024: 33ನೇ ಒಲಿಂಪಿಕ್ಸ್ ಕ್ರೀಡಾಕೂಟಕ್ಕಾಗಿ ಪ್ರಣಯದೂರು ಪ್ಯಾರಿಸ್ ಸಜ್ಜಾಗಿ ನಿಂತಿದೆ. ಜುಲೈ 26 ರಿಂದ ಶುರುವಾಗಲಿರುವ ಒಲಿಂಪಿಯಾಡ್ನಲ್ಲಿ ಈ ಬಾರಿ 206 ದೇಶಗಳ 10 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಹೀಗೆ ಕ್ರೀಡೆಗಾಗಿ ಆಗಮಿಸುವ ಅಥ್ಲೀಟ್‌ಗಳಿಗೆ 3 ಲಕ್ಷ ಕಾಂಡೋಮ್‌ಗಳನ್ನು ವಿತರಿಸಲು ಒಲಿಂಪಿಕ್ಸ್ ಆಯೋಜಕರು ಮುಂದಾಗಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ರತಿಕ್ರೀಡೆಯು ಸಾಮಾನ್ಯ. ಮುಖ್ಯವಾಗಿ ಕೆಲ ಕ್ರೀಡಾಪಟುಗಳು ಒತ್ತಡವನ್ನು ನಿವಾರಿಸಿಕೊಳ್ಳಲು ಸೆಕ್ಸ್ ಮೊರೆ ಹೋಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಲೈಂಗಿಕ ಕಾಯಿಲೆಗಳಿಂದ ಪಾರಾಗಲು ಅಥ್ಲೀಟ್‌ಗಳಿಗೆ ಕಾಂಡೋಮ್‌ಗಳನ್ನು ನೀಡಲು ಒಲಿಂಪಿಕ್ಸ್ ಆಯೋಜಕರು ನಿರ್ಧರಿಸಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸೆಕ್ಸ್ ನಿಷೇಧ:
2021 ರ ಟೋಕಿಯೋ ಒಲಿಂಪಿಕ್ಸ್ ವೇಳೆ ಕ್ರೀಡಾಪಟುಗಳ ಲೈಂಗಿಕ ಕ್ರಿಯೆಗೆ ನಿರ್ಬಂಧ ವಿಧಿಸಲಾಗಿತ್ತು. ಇದಕ್ಕೆ ಮುಖ್ಯ ಕಾರಣ ಕೊರೋನಾ. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಅನ್ಯೋನ್ಯತೆ ಮೇಲೆ ನಿಷೇಧ ಹೇರಿದ್ದರು. ಆದರೆ ಈ ಬಾರಿ ಅಂತಹ ಯಾವುದೇ ಕಟ್ಟುಪಾಡಿಲ್ಲ ಎಂದು ಪ್ಯಾರಿಸ್ ಒಲಿಂಪಿಕ್ಸ್ ಆಯೋಜಕರು ತಿಳಿಸಿದ್ದಾರೆ.
ಕಾಂಡೋಮ್ ಟ್ರೆಂಡ್ ಶುರುವಾಗಿದ್ದು ಹೇಗೆ?
ಒಲಿಂಪಿಕ್ಸ್‌ನಲ್ಲಿ ಕಾಂಡೋಮ್‌ಗಳನ್ನು ನೀಡುವ ಟ್ರೆಂಡ್ ಶುರುವಾಗಿದ್ದು 1988 ರಲ್ಲಿ. ಸಿಯೋಲ್ನಲ್ಲಿ ನಡೆದ ಒಲಿಂಪಿಕ್ಸ್ ವೇಳೆ ಏಡ್ಸ್ ಸಾಂಕ್ರಾಮಿಕ ರೋಗವು ಉತ್ತುಂಗದಲ್ಲಿತ್ತು. ಈ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನವಾಗಿ ಒಲಿಂಪಿಕ್ಸ್‌ನಲ್ಲಿ ಕಾಂಡೋಮ್‌ಗಳನ್ನು ವಿತರಿಸಲಾಗಿತ್ತು.
ಅಂದು ಸುಮಾರು 8,500 ಕಾಂಡೋಮ್‌ಗಳನ್ನು ಸರಬರಾಜು ಮಾಡಲಾಗಿತ್ತು. ಇದಾದ ಬಳಿಕ ಒಲಿಂಪಿಕ್ಸ್‌ನಲ್ಲಿ ಸೆಕ್ಸ್ ಎಂಬುದು ಸರ್ವೆ ಸಾಮಾನ್ಯವಾಗಿ ಬಿಟ್ಟಿದೆ. ಅದರಂತೆ ಪ್ರತಿ ವರ್ಷ ಕಾಂಡೋಮ್ಗಳ ಬೇಡಿಕೆ ಕೂಡ ಹೆಚ್ಚಾಗ ತೊಡಗಿದೆ. ಇದಕ್ಕೆ ಸಾಕ್ಷಿ ಸಿಡ್ನಿ ಒಲಿಂಪಿಕ್ಸ್.
ಕಾಂಡೋಮ್ಗಳ ಬೇಡಿಕೆ:
2000 ರಲ್ಲಿ ಆಸ್ಟ್ರೇಲಿಯಾದ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಸುಮಾರು 70 ಸಾವಿರ ಕಾಂಡೋಮ್‌ಗಳನ್ನು ವಿತರಿಸಲಾಗಿತ್ತು. ಆದರೆ ಆ ಬಳಿಕ ಮತ್ತಷ್ಟು ಕಾಂಡೋಮ್ಗಳಿಗಾಗಿ ಬೇಡಿಕೆ ಕಂಡು ಬಂದಿದೆ. ಇದರಿಂದಾಗಿ ಸಂಘಟಕರು ಹೆಚ್ಚುವರಿ 20,000 ಕಾಂಡೋಮ್‌ಗಳನ್ನು ಆರ್ಡರ್ ಮಾಡಬೇಕಾಯಿತು.
2016ರಲ್ಲಿ ನಡೆದ ರಿಯೊ ಒಲಿಂಪಿಕ್ಸ್‌ನಲ್ಲಿ ಅಥ್ಲೀಟ್‌ಗಳಿಗೆ 450,000 ಕಾಂಡೋಮ್‌ಗಳನ್ನು ಪೂರೈಸಲಾಗಿತ್ತು. ಹಾಗೆಯೇ 2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸೆಕ್ಸ್ ನಿಷೇಧದ ಹೊರತಾಗಿಯೂ ಸಂಘಟಕರು ಸುಮಾರು 150,000 ಕಾಂಡೋಮ್‌ಗಳನ್ನು ವಿತರಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Paris Olympics 2024: ಸಮ್ಮರ್ ಮತ್ತು ವಿಂಟರ್ ಒಲಿಂಪಿಕ್ಸ್ ನಡುವಣ ವ್ಯತ್ಯಾಸವೇನು?
ಡೆಂಟಲ್ ಡ್ಯಾಮ್ ವಿತರಣೆ:
ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವವರಿಗೆ 2 ಲಕ್ಷ ಪುರುಷ ಕಾಂಡೋಮ್‌ಗಳನ್ನು ವಿತರಿಸಲಾಗುತ್ತದೆ. ಹಾಗೆಯೇ 20 ಸಾವಿರ ಮಹಿಳಾ ಕಾಂಡೋಮ್‌ಗಳನ್ನು ಪೂರೈಸಲಿದ್ದಾರೆ. ಇದರ ಜೊತೆ ಒರಲ್ ಸೆಕ್ಸ್ಗಾಗಿ 10 ಸಾವಿರ ಡೆಂಟಲ್ ಡ್ಯಾಮ್ (ಬಾಯಿಗೆ ಇರಿಸುವ ಪಟ್ಟಿ) ಸಹ ಲಭ್ಯವಿರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಅದರಂತೆ ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸುಮಾರು 3 ಲಕ್ಷ ಕಾಂಡೋಮ್‌ಗಳನ್ನು ವಿತರಿಸಲು ಆಯೋಜಕರು ಮುಂದಾಗಿದ್ದಾರೆ.
Published On - 10:18 am, Wed, 17 July 24
