AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Olympic Logo: ಒಲಿಂಪಿಕ್ ಚಿಹ್ನೆಯ ಅರ್ಥವೇನು? ಇಲ್ಲಿ 5 ರಿಂಗ್​ಗಳು ಯಾಕಿವೆ?

Paris Olympics 2024: ಪ್ಯಾರಿಸ್​ನಲ್ಲಿ ನಡೆಯಲಿರುವ ಸಮ್ಮರ್ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 29 ರಿಂದ ಶುರುವಾಗಲಿದ್ದು, ಆಗಸ್ಟ್ 11 ರವರೆಗೆ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ 206 ದೇಶಗಳ 10 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಹಾಗೆಯೇ ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಭಾರತದಿಂದ ಒಟ್ಟು 117 ಅಥ್ಲೀಟ್‌ಗಳು ಮತ್ತು 140 ಸಹಾಯಕ ಸಿಬ್ಬಂದಿ ಭಾಗವಹಿಸಲಿದ್ದಾರೆ.

Olympic Logo: ಒಲಿಂಪಿಕ್ ಚಿಹ್ನೆಯ ಅರ್ಥವೇನು? ಇಲ್ಲಿ 5 ರಿಂಗ್​ಗಳು ಯಾಕಿವೆ?
Olympics
ಝಾಹಿರ್ ಯೂಸುಫ್
|

Updated on:Jul 27, 2024 | 7:15 AM

Share

ಪ್ಯಾರಿಸ್ ಒಲಿಂಪಿಕ್ಸ್​ಗಾಗಿ ದಿನಗಣನೆ ಶುರುವಾಗಿದೆ. ಜುಲೈ 26 ರಿಂದ ಆರಂಭವಾಗಲಿರುವ 33ನೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಒಟ್ಟು 206 ದೇಶಗಳು ಪಾಲ್ಗೊಳ್ಳಲಿವೆ. ಈ ಎಲ್ಲಾ ದೇಶಗಳು ಒಲಿಂಪಿಕ್ಸ್ ಚಿಹ್ನೆಯ ಅಡಿಯಲ್ಲಿ ಕಣಕ್ಕಿಳಿಯಲಿರುವುದು ವಿಶೇಷ. ಅಂದರೆ ಒಲಿಂಪಿಕ್ಸ್ ಧ್ಯೇಯವಾಕ್ಯಗಳೊಂದಿಗೆ ಒಪ್ಪಿತವಾಗಿರುವ ದೇಶಗಳಿಗೆ ಮಾತ್ರ ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ. ಹೀಗಾಗಿಯೇ ಪ್ರತಿ ಕ್ರೀಡಾಪಟುಗಳ ವಸ್ತ್ರದ ಮೇಲೆ ಒಲಿಂಪಿಕ್ ಚಿಹ್ನೆಯನ್ನು ಬಳಸಲಾಗುತ್ತದೆ. ಹೀಗೆ ಬಳಸಲಾಗುವ ಐದು ಬಣ್ಣದ ರಿಂಗ್ ಚಿಹ್ನೆ ವಿಶೇಷ ಅರ್ಥವಿದೆ ಎಂಬುದೇ ವಿಶೇಷ.

ಪ್ರತಿ ಒಲಿಂಪಿಕ್ಸ್ ವೇಳೆಯು ಕಾಣಿಸಿಕೊಳ್ಳುವ ಒಲಿಂಪಿಕ್ ಧ್ವಜದಲ್ಲಿ ಐದು ವಿಭಿನ್ನ ಬಣ್ಣಗಳಿಂದ ಕೂಡಿದ ರಿಂಗ್​ಗಳನ್ನು ನೀವು ನೋಡಿರುತ್ತೀರಿ. ಇಲ್ಲಿ (ಎಡದಿಂದ ಬಲಕ್ಕೆ)- ನೀಲಿ, ಹಳದಿ, ಕಪ್ಪು, ಹಸಿರು ಮತ್ತು ಕೆಂಪು ಬಣ್ಣಗಳನ್ನು ಬಳಸಲಾಗಿದೆ. ಈ ಐದು ಬಣ್ಣಗಳು ಮತ್ತು ರಿಂಗ್​ಗಳು 5 ಜನವಸತಿಯ ಖಂಡಗಳನ್ನು ಪ್ರತಿನಿಧಿಸುತ್ತದೆ. ಆ ಖಂಡಗಳೆಂದರೆ…

  • ಆಫ್ರಿಕಾ
  • ಅಮೆರಿಕ (ಉತ್ತರ-ದಕ್ಷಿಣ ಅಮೆರಿಕ ಖಂಡಗಳನ್ನು ಒಂದು ಖಂಡವಾಗಿ ಪರಿಗಣಿಸಲಾಗಿದೆ)
  • ಏಷ್ಯಾ
  • ಯುರೋಪ್
  • ಓಷಿಯಾನಿಯಾ

ರಿಂಗ್​ಗೆ ನೀಡಲಾದ ಬಣ್ಣಗಳ ಅರ್ಥವೇನು?

ಒಲಿಂಪಿಕ್ಸ್ ಧ್ವಜದ ರಿಂಗ್​ಗೆ ಐದು ಬಣ್ಣಗಳನ್ನು ನೀಡಲಾಗಿದೆ. ಪ್ರಪಂಚದಾದ್ಯಂತ ಬಹುತೇಕ ಎಲ್ಲಾ ಧ್ವಜಗಳಿಗೆ ಸಾಮಾನ್ಯವಾಗಿರುವ ಬಣ್ಣಗಳನ್ನು (ನೀಲಿ, ಕಪ್ಪು, ಕೆಂಪು, ಹಳದಿ ಮತ್ತು ಹಸಿರು) ಪ್ರತಿನಿಧಿಸಲು ಈ ಬಣ್ಣಗಳನ್ನು ಬಳಸಲಾಗಿದೆ. ಇದಾಗ್ಯೂ ನಿರ್ದಿಷ್ಟ ರಾಷ್ಟ್ರ ಅಥವಾ ಸಮುದಾಯವನ್ನು ಈ ಬಣ್ಣಗಳು ಪ್ರತಿನಿಧಿಸುವುದಿಲ್ಲ. ಬದಲಾಗಿ ಜನವಸತಿಯಿರುವ ಇದು ಐದು ಖಂಡಗಳ ಒಕ್ಕೂಟ ಮತ್ತು ಒಲಿಂಪಿಕ್ ಕ್ರೀಡಾಕೂಟದಲ್ಲಿ ಪ್ರಪಂಚದಾದ್ಯಂತದ ಕ್ರೀಡಾಪಟುಗಳನ್ನು ಈ ಬಣ್ಣ ಮತ್ತು ಚಿಹ್ನೆ ಪ್ರತಿನಿಧಿಸುತ್ತದೆ.

ಒಲಿಂಪಿಕ್ ಧ್ಯೇಯವಾಕ್ಯ:

ಒಲಂಪಿಕ್​ನ ಮೂಲ ಧ್ಯೇಯವಾಕ್ಯವೆಂದರೆ ಹೆಂಡಿಯಾಟ್ರಿಸ್ ಸಿಟಿಯಸ್, ಅಲ್ಟಿಯಸ್, ಫೋರ್ಟಿಯಸ್. ಅಂದರೆ ಲ್ಯಾಟಿನ್ ಭಾಷೆಯಲ್ಲಿ “ವೇಗ, ಉನ್ನತ, ಶಕ್ತಿಶಾಲಿ”. ಈ ಧ್ಯೇಯವಾಕ್ಯವನ್ನು 1924 ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪರಿಚಯಿಸಲಾಯಿತು.

ಇದಾದ ಬಳಿಕ 2021 ರ ಟೋಕಿಯೊ ಒಲಿಂಪಿಕ್ಸ್​ನಲ್ಲಿ ನಾಲ್ಕನೇ ಧ್ಯೇಯವಾಕ್ಯವಾಗಿ ಜೊತೆಯಾಗಿ ಯನ್ನು ಸೇರಿಸಲಾಯಿತು. ಅದರಂತೆ ಇದೀಗ  ಶತಮಾನದ ಬಳಿಕ ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​ನಲ್ಲಿ​ ವೇಗ, ಉನ್ನತ, ಶಕ್ತಿಶಾಲಿ ಮತ್ತು ಜೊತೆಯಾಗಿ ಧ್ಯೇಯ ವಾಕ್ಯದಲ್ಲಿ ಕ್ರೀಡಾಪಟುಗಳು ಕಣಕ್ಕಿಳಿಯಲಿದ್ದಾರೆ.

ಇದನ್ನೂ ಓದಿ: Paris Olympics 2024: ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ರತಿಕ್ರೀಡೆ: 3 ಲಕ್ಷ ಕಾಂಡೋಮ್ ವಿತರಣೆ

ಪ್ಯಾರಿಸ್ ಒಲಿಂಪಿಕ್ಸ್ ಯಾವಾಗ ಶುರು?

ಫ್ರಾನ್ಸ್ ರಾಜಧಾನಿ ಪ್ಯಾರಿಸ್​ನಲ್ಲಿ ನಡೆಯಲಿರುವ ಸಮ್ಮರ್ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 29 ರಿಂದ ಶುರುವಾಗಲಿದ್ದು, ಆಗಸ್ಟ್ 11 ರವರೆಗೆ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ 206 ದೇಶಗಳ 10 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

Published On - 12:01 pm, Wed, 17 July 24

ಸೂರಜ್‌ಕುಂಡ್ ಜಾತ್ರೆ ದುರಂತ; ಸುನಾಮಿ ಉಯ್ಯಾಲೆ ತುಂಡಾಗಿ ಪೊಲೀಸ್ ಸಾವು
ಸೂರಜ್‌ಕುಂಡ್ ಜಾತ್ರೆ ದುರಂತ; ಸುನಾಮಿ ಉಯ್ಯಾಲೆ ತುಂಡಾಗಿ ಪೊಲೀಸ್ ಸಾವು
‘ಕಾವು, ಕಾವು’ ಎಂದವರಿಗೆ ಟಾಂಗ್ ಕೊಟ್ಟ ಗಿಲ್ಲಿ: ವಿಡಿಯೋ
‘ಕಾವು, ಕಾವು’ ಎಂದವರಿಗೆ ಟಾಂಗ್ ಕೊಟ್ಟ ಗಿಲ್ಲಿ: ವಿಡಿಯೋ
ಮಲೇಷ್ಯಾದ 800 ಕಲಾವಿದರಿಂದ ಪ್ರಧಾನಿ ಮೋದಿಗೆ ಶಾಸ್ತ್ರೀಯ ನೃತ್ಯದ ಸ್ವಾಗತ
ಮಲೇಷ್ಯಾದ 800 ಕಲಾವಿದರಿಂದ ಪ್ರಧಾನಿ ಮೋದಿಗೆ ಶಾಸ್ತ್ರೀಯ ನೃತ್ಯದ ಸ್ವಾಗತ
ನಿಂದಿಸಿದ ಶ್ರೀನಿವಾಸ್​​ಗೆ ಪ್ರತ್ಯುತ್ತರ ಕೊಟ್ಟ ನಿರ್ದೇಶಕ ಎಪಿ ಅರ್ಜುನ್
ನಿಂದಿಸಿದ ಶ್ರೀನಿವಾಸ್​​ಗೆ ಪ್ರತ್ಯುತ್ತರ ಕೊಟ್ಟ ನಿರ್ದೇಶಕ ಎಪಿ ಅರ್ಜುನ್
ಎಲೆಕ್ಟ್ರಾನಿಕ್ಸ್ ಘಟಕ ನಿರ್ಮಾಣಕ್ಕೆ ಕರ್ನಾಟಕಕ್ಕೆ 10,000 ಕೋಟಿ ಅನುದಾನ
ಎಲೆಕ್ಟ್ರಾನಿಕ್ಸ್ ಘಟಕ ನಿರ್ಮಾಣಕ್ಕೆ ಕರ್ನಾಟಕಕ್ಕೆ 10,000 ಕೋಟಿ ಅನುದಾನ
ಯುವತಿ ತಲೆ ಮೇಲೆ ಹರಿದ BMTC ಎಲೆಕ್ಟ್ರಿಕ್ ಬಸ್
ಯುವತಿ ತಲೆ ಮೇಲೆ ಹರಿದ BMTC ಎಲೆಕ್ಟ್ರಿಕ್ ಬಸ್
ಮಲೇಷ್ಯಾಗೆ ತೆರಳಿದ ಪ್ರಧಾನಿ ಮೋದಿಗೆ ಅಪ್ಪುಗೆಯ ಸ್ವಾಗತ
ಮಲೇಷ್ಯಾಗೆ ತೆರಳಿದ ಪ್ರಧಾನಿ ಮೋದಿಗೆ ಅಪ್ಪುಗೆಯ ಸ್ವಾಗತ
ತೇಜಸ್ವಿ ಸೂರ್ಯಗೆ ಇನ್ನೂ ಅನುಭವವಿಲ್ಲ: ಬರೀ ಖಾಲಿ ಮಾತು ಬೇಡ ಎಂದ ಡಿಕೆಶಿ
ತೇಜಸ್ವಿ ಸೂರ್ಯಗೆ ಇನ್ನೂ ಅನುಭವವಿಲ್ಲ: ಬರೀ ಖಾಲಿ ಮಾತು ಬೇಡ ಎಂದ ಡಿಕೆಶಿ
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಸುದ್ದಿಗೋಷ್ಠಿ
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಹತ್ವದ ಸುದ್ದಿಗೋಷ್ಠಿ
ಪ್ರತಿ ವರ್ಷ ಮೆಟ್ರೋ ದರ ಹೆಚ್ಚಾಗಬೇಕು ಎಂದು ಸಲಹೆ ನೀಡಿದ್ದು ರಾಜ್ಯ ಸರ್ಕಾರ
ಪ್ರತಿ ವರ್ಷ ಮೆಟ್ರೋ ದರ ಹೆಚ್ಚಾಗಬೇಕು ಎಂದು ಸಲಹೆ ನೀಡಿದ್ದು ರಾಜ್ಯ ಸರ್ಕಾರ