AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paris Olympics 2024: ಸಮ್ಮರ್ ಮತ್ತು ವಿಂಟರ್ ಒಲಿಂಪಿಕ್ಸ್ ನಡುವಣ ವ್ಯತ್ಯಾಸವೇನು?

Summer and Winter Olympics: ಸಮ್ಮರ್ ಒಲಿಂಪಿಕ್ಸ್​ನಲ್ಲಿ ಭಾರತೀಯ ಕ್ರೀಡಾಪಟುಗಳು ಈವರೆಗೆ 35 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ 10 ಚಿನ್ನ, 9 ಬೆಳ್ಳಿ ಮತ್ತು 16 ಬೆಳ್ಳಿ ಪದಕಗಳು ಸೇರಿವೆ. ಆದರೆ 11 ವಿಂಟರ್ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿರುವ ಭಾರತೀಯ ಕ್ರೀಡಾಪಟುಗಳು ಒಮ್ಮೆಯೂ ಪದಕ ಗೆಲ್ಲಲು ಸಾಧ್ಯವಾಗಿಲ್ಲ.

Paris Olympics 2024: ಸಮ್ಮರ್ ಮತ್ತು ವಿಂಟರ್ ಒಲಿಂಪಿಕ್ಸ್ ನಡುವಣ ವ್ಯತ್ಯಾಸವೇನು?
Olympics
ಝಾಹಿರ್ ಯೂಸುಫ್
|

Updated on: Jul 16, 2024 | 10:47 AM

Share

ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್​​ಗೆ (Paris Olympics 2024) ದಿನಗಣನೆ ಶುರುವಾಗಿದೆ. ಜುಲೈ 26 ರಿಂದ ಆರಂಭವಾಗಲಿರುವ ಈ ಕ್ರೀಡಾಕೂಟದಲ್ಲಿ 206 ದೇಶಗಳ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ವಿಶೇಷ ಎಂದರೆ ಈ ಬಾರಿ ನಡೆಯುತ್ತಿರುವುದು ಒಲಿಂಪಿಯಾಡ್. ಅಂದರೆ ಸಮ್ಮರ್ ಒಲಿಂಪಿಕ್ಸ್. ಒಲಿಂಪಿಕ್ಸ್​ನಲ್ಲೂ ಎರಡು ವಿಧವಿದೆ. ಅವೆಂದರೆ ಸಮ್ಮರ್ ಒಲಿಂಪಿಕ್ಸ್ ಮತ್ತು ವಿಂಟರ್  ಒಲಿಂಪಿಕ್ಸ್.

ಇಲ್ಲಿ ಸಮ್ಮರ್ ಒಲಿಂಪಿಕ್ಸ್​ ಎಂದರೆ ಬೇಸಿಗೆ ಕಾಲದ ಕ್ರೀಡಾಕೂಟ. ಹಾಗೆಯೇ ವಿಂಟರ್ ಒಲಿಂಪಿಕ್ಸ್​ ಎಂದರೆ ಚಳಿಗಾಲದ ಕ್ರೀಡಾಕೂಟ. ಇನ್ನು ಸರಳವಾಗಿ ಹೇಳಬೇಕೆಂದರೆ ಬೇಸಿಗೆ ಕಾಲದಲ್ಲಿ ಆಡಲಾಗುವ ಆಟಗಳನ್ನು ಸಮ್ಮರ್ ಒಲಿಂಪಿಕ್ಸ್​ನಲ್ಲಿ ಆಡಲಾಗುತ್ತದೆ. ಹಾಗೆಯೇ ಚಳಿಗಾಲದಲ್ಲಿ ಅಥವಾ ಶೀತ ಹವಾಮಾನದಲ್ಲಿ ಆಡಬಹುದಾದ ಕ್ರೀಡೆಗಳನ್ನು ವಿಂಟರ್ ಒಲಿಂಪಿಕ್ಸ್​ನಲ್ಲಿ ಆಯೋಜಿಸಲಾಗುತ್ತದೆ.

ಈ ಒಲಿಂಪಿಕ್ಸ್​ಗಳನ್ನು ಯಾವಾಗ ಆಯೋಜಿಸಲಾಗುತ್ತದೆ?

ಬೇಸಿಗೆ ಒಲಿಂಪಿಕ್ಸ್ ಅನ್ನು ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್‌ನಲ್ಲಿ ಆಯೋಜಿಸಲಾಗುತ್ತದೆ. ಹಾಗೆಯೇ ಚಳಿಗಾಲದ ಒಲಿಂಪಿಕ್ಸ್ ಅನ್ನು ಸಾಮಾನ್ಯವಾಗಿ ಫೆಬ್ರವರಿಯಲ್ಲಿ ನಡೆಸಲಾಗುತ್ತದೆ. ಇಲ್ಲಿ ವಿಂಟರ್ ಒಲಿಂಪಿಕ್ಸ್ ಆಯೋಜಿಸಲು ಚಳಿ ಅಥವಾ ಶೀತದಿಂದ ಕೂಡಿದ ಹವಮಾನ ಇರಬೇಕಾಗುತ್ತದೆ. ಹೀಗಾಗಿ ಒಲಿಂಪಿಕ್ಸ್ ಅನ್ನು ಎರಡು ಅವಧಿಗಳಿಗೆ ವಿಂಗಡಿಸಲಾಗಿದೆ.

ಸಮ್ಮರ್-ವಿಂಟರ್​ ಒಲಿಂಪಿಕ್ಸ್​ನ ಕ್ರೀಡೆಗಳಾವುವು?

  • ಬೇಸಿಗೆ ಒಲಿಂಪಿಕ್ ಕ್ರೀಡೆಗಳು:
  • ಅಥ್ಲೆಟಿಕ್ಸ್
  • ಫುಟ್​ಬಾಲ್
  • ಹಾಕಿ
  • ಟೆನಿಸ್
  • ವಾಲಿಬಾಲ್
  • ಬಿಲ್ಲುಗಾರಿಕೆ
  • ಈಜು
  • ಬ್ಯಾಡ್ಮಿಂಟನ್
  • ಬಾಸ್ಕೆಟ್ ಬಾಲ್
  • ಬೀಚ್ ವಾಲಿಬಾಲ್
  • ಬಾಕ್ಸಿಂಗ್
  • ಕ್ಯಾನೋ ಸ್ಲಾಲೋಮ್
  • ಕ್ಯಾನೋ ಸ್ಪ್ರಿಂಟ್
  • ಸೈಕ್ಲಿಂಗ್
  • ಮೌಂಟೇನ್ ಬೈಕ್ (ಸೈಕ್ಲಿಂಗ್)
  • ಡೈವಿಂಗ್
  • ಕುದುರೆ ಸವಾರಿ
  • ಫೆನ್ಸಿಂಗ್
  • ಗಾಲ್ಫ್
  • ಜಿಮ್ನಾಸ್ಟಿಕ್ಸ್
  • ಹ್ಯಾಂಡ್​ಬಾಲ್
  • ಜೂಡೋ
  • ಪೆಂಟಾಥ್ಲಾನ್
  • ರೋಯಿಂಗ್
  • ರಗ್ಬಿ
  • ನೌಕಾಯಾನ
  • ಶೂಟಿಂಗ್
  • ಟೇಬಲ್ ಟೆನ್ನಿಸ್
  • ಟೇಕ್ವಾಂಡೋ
  • ಟ್ರ್ಯಾಂಪೊಲೈನ್
  • ಟ್ರಯಥ್ಲಾನ್
  • ವಾಟರ್ ಪೋಲೋ
  • ವೇಟ್ ಲಿಫ್ಟಿಂಗ್
  • ಕುಸ್ತಿ

ಇದನ್ನೂ ಓದಿ: Paris Olympic 2024: ಪ್ಯಾರಿಸ್ ಒಲಿಂಪಿಕ್ಸ್​ ಪದಕದಲ್ಲಿ ಐಫೆಲ್ ಟವರ್ ತುಣುಕು

  • ಚಳಿಗಾಲದ ಕ್ರೀಡೆಗಳು:
  • ಐಸ್ ಹಾಕಿ
  • ಆಲ್ಪೈನ್ ಸ್ಕೀಯಿಂಗ್
  • ಬಯಾಥ್ಲಾನ್
  • ಬಾಬ್ಸ್ಲೀ
  • ಕ್ರಾಸ್-ಕಂಟ್ರಿ ಸ್ಕೀಯಿಂಗ್
  • ಕರ್ಲಿಂಗ್
  • ಫಿಗರ್ ಸ್ಕೇಟಿಂಗ್
  • ಫ್ರೀಸ್ಟೈಲ್ ಸ್ಕೀಯಿಂಗ್
  • ಲೂಜ್
  • ನಾರ್ಡಿಕ್ ಕಂಬೈಂಡ್
  • ಶಾರ್ಟ್ ಟ್ರ್ಯಾಕ್
  • ಸ್ಕೀ ಜಂಪಿಂಗ್
  • ಸ್ನೋಬೋರ್ಡಿಂಗ್
  • ಸ್ಪೀಡ್ ಸ್ಕೇಟಿಂಗ್

ವಿಂಟರ್ ಒಲಿಂಪಿಕ್ಸ್ ಯಾವಾಗ?

ಸಮ್ಮರ್ ಒಲಿಂಪಿಕ್ಸ್​ನಂತೆ ವಿಂಟರ್ ಒಲಿಂಪಿಕ್ಸ್ ಅನ್ನು ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ.  2022 ರ ವಿಂಟರ್ ಒಲಿಂಪಿಕ್ಸ್​ಗೆ ಚೀನಾದ ಬೀಜಿಂಗ್​ ನಗರ ಆತಿಥ್ಯವಹಿಸಿತ್ತು. ಹಾಗೆಯೇ 2026 ರ ವಿಂಟರ್ ಒಲಿಂಪಿಕ್ಸ್​ಗೆ ಇಟಲಿ ದೇಶದಲ್ಲಿ ನಡೆಯಲಿದೆ.

ಭಾರತೀಯರು ವಿಂಟರ್ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ್ದಾರೆಯೇ?

1924 ರಲ್ಲಿ ಶುರುವಾದ ವಿಂಟರ್ ಒಲಿಂಪಿಕ್ಸ್​ನಲ್ಲಿ ಭಾರತೀಯ ಕ್ರೀಡಾಪಟುಗಳ ಭಾಗವಹಿಸುವಿಕೆ ತೀರ ವಿರಳ. ಇದಕ್ಕೆ ಮುಖ್ಯ ಕಾರಣ ಭಾರತದಲ್ಲಿ ಚಳಿಗಾಲದ ಕ್ರೀಡೆಗಳಿಗೆ ಪ್ರಾಮುಖ್ಯತೆ ಇಲ್ಲದಿರುವುದು. ಇದಾಗ್ಯೂ 11 ವಿಂಟರ್ ಒಲಿಂಪಿಕ್ಸ್​ನಲ್ಲಿ ಭಾರತೀಯ ಕ್ರೀಡಾಪಟುಗಳು ಕಾಣಿಸಿಕೊಂಡಿದ್ದಾರೆ. ಅವರೆಂದರೆ…

ವರ್ಷ ಕ್ರೀಡಾಪಟುಗಳ ಸಂಖ್ಯೆ ಕ್ರೀಡಾಪಟುಗಳ ಹೆಸರು ಮತ್ತು ಕ್ರೀಡೆ
1964 1 ಜೆರೆಮಿ ಬುಜಕೋವ್ಸ್ಕಿ (ಡೌನ್​ಹಿಲ್)
1968 1 ಜೆರೆಮಿ ಬುಜಕೋವ್ಸ್ಕಿ (ಡೌನ್​ಹಿಲ್, ಜೈಂಟ್ ಸ್ಲಾಲೋಮ್, ಸ್ಲಾಲೋಮ್)
1988 3 ಶೈಲಜಾ ಕುಮಾರ್ (ಮಹಿಳಾ ಸ್ಲಾಲೊಮ್); ಗುಲ್ ದೇವ್ (ಸ್ಲಾಲೋಮ್); ಕಿಶೋರ್ ರಹತ್ನಾ ರೈ (ಸ್ಲಾಲೋಮ್)
1992 2 ಲಾಲ್ ಚುನಿ (ಸ್ಲಾಲೋಮ್, ಜೈಂಟ್ ಸ್ಲಾಲೋಮ್); ನಾನಕ್ ಚಂದ್ (ಸ್ಲಾಲೋಮ್, ಜೈಂಟ್ ಸ್ಲಾಲೋಮ್)
1998 1 ಶಿವ ಕೇಶವನ್ (ಲೂಜ್)
2002 1 ಶಿವ ಕೇಶವನ್ (ಲೂಜ್)
2006 4 ನೇಹಾ ಅಹುಜಾ (ಮಹಿಳಾ ಸ್ಲಾಲೋಮ್, ಜೈಂಟ್ ಸ್ಲಾಲೋಮ್); ಹೀರಾ ಲಾಲ್ (ಜೈಂಟ್ ಸ್ಲಾಲೋಮ್); ಬಹದ್ದೂರ್ ಗುಪ್ತಾ (ಕ್ರಾಸ್ ಕಂಟ್ರಿ ಸ್ಪ್ರಿಂಟ್); ಶಿವ ಕೇಶವನ್ (ಲೂಜ್)
2010 3 ಜಮ್ಯಾಂಗ್ ನಾಮ್ಗಿಯಲ್ (ಜೈಂಟ್ ಸ್ಲಾಲೋಮ್); ತಾಶಿ ಲುಂಡಪ್ (ಕ್ರಾಸ್ ಕಂಟ್ರಿ 15 ಕಿಮೀ ಫ್ರೀಸ್ಟೈಲ್); ಶಿವ ಕೇಶವನ್ (ಲೂಜ್)
2014 3 ಹಿಮಾಂಶು ಠಾಕೂರ್ (ಜೈಂಟ್ ಸ್ಲಾಲೋಮ್); ನದೀಮ್ ಇಕ್ಬಾಲ್ (ಕ್ರಾಸ್ ಕಂಟ್ರಿ 15 ಕಿಮೀ ಕ್ಲಾಸಿಕಲ್); ಶಿವ ಕೇಶವನ್ (ಲೂಜ್)
2018 2 ಜಗದೀಶ್ ಸಿಂಗ್ (ಕ್ರಾಸ್ ಕಂಟ್ರಿ 15 ಕಿಮೀ ಫ್ರೀಸ್ಟೈಲ್); ಶಿವ ಕೇಶವನ್ (ಲೂಜ್)
2022 1 ಆರಿಫ್ ಮೊಹಮ್ಮದ್ ಖಾನ್ (ಸ್ಲಾಲೊಮ್, ಜೈಂಟ್ ಸ್ಲಾಲೊಮ್)