Vinesh Phogat: ವಿನೇಶ್ ಫೋಗಟ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

|

Updated on: Aug 07, 2024 | 3:09 PM

Paris Olympics 2024: ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನ ಫೈನಲ್‌ನಿಂದ ಹೊರಬಿದ್ದಿದ್ದಾರೆ. ತೂಕ ಇಳಿಸುವ ಸಲುವಾಗಿ ರಾತ್ರಿ ಇಡೀ ಶ್ರಮಿಸಿದ್ದ ವಿನೇಶ್, ನಿರ್ಜಲೀಕರಣದಿಂದ ಬಳಲುತ್ತಿದ್ದು ಅವರನ್ನು ಕ್ಲಿನಿಕ್‌ಗೆ ಕರೆದೊಯ್ಯಲಾಗಿದೆ. ವಿನೇಶ್ ಕ್ಲಿನಿಕ್‌ಗೆ ದಾಖಲಾಗಿರುವ ಸುದ್ದಿ ತಿಳಿದ ನಂತರ ಪಿಟಿ ಉಷಾ ಮತ್ತು ಭಾರತೀಯ ಅಧಿಕಾರಿಗಳ ತಂಡ ಅವರನ್ನು ಭೇಟಿ ಮಾಡಲು ಅಲ್ಲಿಗೆ ತೆರಳಿದೆ ಎಂದು ವರದಿಯಾಗಿದೆ.

Vinesh Phogat: ವಿನೇಶ್ ಫೋಗಟ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು
ವಿನೇಶ್ ಫೋಗಟ್
Follow us on

ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನ ಫೈನಲ್‌ನಿಂದ ಹೊರಬಿದ್ದಿದ್ದಾರೆ. 50 ಕೆಜಿ ವಿಭಾಗದ ಫೈನಲ್‌ಗೆ ತಲುಪಿದ್ದ ವಿನೇಶ್ ಫೋಗಟ್, ಪ್ರಶಸ್ತಿ ಪಂದ್ಯಕ್ಕೂ ಮುನ್ನ 100 ಗ್ರಾಂ ಹೆಚ್ಚು ತೂಕ ಹೊಂದಿದ್ದರಿಂದ ಅವರನ್ನು ಕ್ರೀಡಾಕೂಟದಿಂದ ಅನರ್ಹಗೊಳಿಸಲಾಗಿದೆ. ಈ ಕ್ರಮದ ನಂತರ ಇಡೀ ದೇಶ ವಿನೇಶ್ ಜೊತೆ ನಿಂತಿದೆ. ಪ್ರಧಾನಿ ಮೋದಿ ಕೂಡ ವಿನೇಶ್ ಬೆಂಬಲಕ್ಕೆ ಬಂದಿದ್ದು, ಸರ್ಕಾರದಿಂದ ಸಾಧ್ಯವಾಗುವುದೆಲ್ಲವನ್ನು ಮಾಡುವಾಗಿ ಭರವಸೆ ನೀಡಿದ್ದಾರೆ. ಇದೆಲ್ಲದರ ನಡುವೆ ವಿನೇಶ್ ಫೋಗಟ್ ಅವರ ಆರೋಗ್ಯ ಹದಗೆಟ್ಟಿದ್ದು, ಅವರು ಪ್ರಸ್ತುತ ಪ್ಯಾರಿಸ್​ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.ನಿರ್ಜಲೀಕರಣದಿಂದಾಗಿ ವಿನೇಶ್ ಅವರನ್ನು ಕ್ಲಿನಿಕ್‌ಗೆ ಕರೆದೊಯ್ಯಲಾಗಿದೆ. ವಿನೇಶ್ ಕ್ಲಿನಿಕ್‌ಗೆ ದಾಖಲಾಗಿರುವ ಸುದ್ದಿ ತಿಳಿದ ನಂತರ ಪಿಟಿ ಉಷಾ ಮತ್ತು ಭಾರತೀಯ ಅಧಿಕಾರಿಗಳ ತಂಡ ಅವರನ್ನು ಭೇಟಿ ಮಾಡಲು ಅಲ್ಲಿಗೆ ತೆರಳಿದೆ ಎಂಬ ಮಾಹಿತಿ ತಿಳಿದುಬಂದಿದೆ.

ವಿನೇಶ್ ಫೋಗಟ್ ನಿರ್ಜಲೀಕರಣದಿಂದ ಬಳಲುತ್ತಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ತೂಕ ಇಳಿಸಿಕೊಳ್ಳಲು ವಿನೇಶ್ ಮಾಡಿದ ಪ್ರಯತ್ನದಿಂದ ಅವರು ನಿರ್ಜಲೀಕರಣಗೊಂಡಿದ್ದಾರೆ. ವಾಸ್ತವವಾಗಿ, ವಿನೇಶ್ ತನ್ನ ತೂಕವನ್ನು ಕಡಿಮೆ ಮಾಡಲು ಇಡೀ ರಾತ್ರಿ ಶ್ರಮಿಸಿದ್ದು, ಅವರು ನೀರನ್ನು ಕುಡಿಯದ ಕಾರಣ ಹೀಗಾಗಿದೆ ಎಂದು ಹೇಳಲಾಗುತ್ತಿದೆ.

ಚಿಕ್ಕಪ್ಪ ಮಹಾವೀರ್ ಫೋಗಟ್ ವಿಶ್ವಾಸ

ನಿಗದಿತ ತೂಕ ಇಲ್ಲದ ಕಾರಣ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿರುವ ವಿಷಯ ತಿಳಿದಕೂಡಲೇ ಅವರ ಚಿಕ್ಕಪ್ಪ ಮಹಾವೀರ್ ಫೋಗಟ್ ಅಸ್ವಸ್ತಗೊಂಡಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ವಿನೇಶ್​ ಫೋಗಟ್ ಚಿನ್ನ ಗೆಲ್ಲುತ್ತಾರೆಂದು ಇಡೀ ದೇಶ ನಿರೀಕ್ಷಿಸಿತ್ತು. ಆದರೆ
50-100 ಗ್ರಾಂ ಅಧಿಕ ತೂಕ ಹೊಂದಿದ್ದರಿಂದ ಅನುಮತಿಸಲಾಗುತ್ತದೆ. ಹೀಗಾಗಿ ಹತಾಶರಾಗಬೇಡಿ ಎಂದು ನಾನು ದೇಶದ ಜನರನ್ನು ಕೇಳುತ್ತೇನೆ. ಮುಂದೆ ಒಂದು ದಿನ ಅವಳು ಖಂಡಿತವಾಗಿಯೂ ಪದಕವನ್ನು ತರುತ್ತಾಳೆ.ಮುಂದಿನ ಒಲಿಂಪಿಕ್ಸ್‌ಗೆ ವಿನೇಶ್​ ಫೋಗಟ್‌ರನ್ನ ಸಿದ್ಧಪಡಿಸುತ್ತೇನೆ ಎಂದು ವಿನೇಶ್​ ಫೋಗಟ್ ಚಿಕ್ಕಪ್ಪ ಮಹಾವೀರ್ ಫೋಗಟ್ ಹೇಳಿಕೆ ನೀಡಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ವಿನೇಶ್  ಪ್ರದರ್ಶನ

ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತನ್ನ ಪಯಣವನ್ನು ಉತ್ತಮವಾಗಿ ಆರಂಭಿಸಿದ್ದರು. ಅವರು ತಮ್ಮ ಮೊದಲ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಜಪಾನ್‌ನ ಸುಸಾಕಿಯನ್ನು ಸೋಲಿಸಿದ್ದರು. ಇದರ ನಂತರ, ಅವರು ಕ್ವಾರ್ಟರ್-ಫೈನಲ್ ಮತ್ತು ಸೆಮಿ-ಫೈನಲ್‌ಗಳಲ್ಲಿ ಪ್ರಚಂಡ ಗೆಲುವು ದಾಖಲಿಸಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದರು. ಆದರೆ, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಸಿಗಬಹುದು ಎಂದು ಅನಿಸುತ್ತಿರುವಾಗಲೇ ಅವರ ಅನರ್ಹತೆಯ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಿಂದ ವಿನೇಶ್ ಫೋಗಟ್ ನಿರ್ಗಮಿಸುವುದರೊಂದಿಗೆ ಭಾರತದ ಪದಕದ ನಿರೀಕ್ಷೆಯೂ ಕಮರಿ ಹೋಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:30 pm, Wed, 7 August 24