Paris Olympics 2024: ವಿನೇಶ್ ಫೋಗಟ್ ಬದಲು ಕುಸ್ತಿ ಫೈನಲ್ಗೆ ಮತ್ತೊಬ್ಬ ಸ್ಪರ್ಧಿಯ ಆಯ್ಕೆ
Paris Olympics 2024: ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹಗೊಂಡ ನಂತರ ಇದೀಗ 50 ಕೆ.ಜಿ. ವಿಭಾಗದ ಫೈನಲ್ ಪಂದ್ಯ ಅಮೆರಿಕದ ಕುಸ್ತಿಪಟು ಸಾರಾ ಆನ್ ಹಿಲ್ಡೆಬ್ರಾಂಡ್ ಮತ್ತು ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ನಡುವೆ ನಡೆಯಲಿದೆ. ಪ್ಯಾರಿಸ್ ಒಲಿಂಪಿಕ್ ಸಂಘಟನಾ ಸಮಿತಿಯು ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದೆ.
ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹಗೊಂಡ ನಂತರ ಇದೀಗ 50 ಕೆ.ಜಿ. ವಿಭಾಗದ ಫೈನಲ್ ಪಂದ್ಯ ಅಮೆರಿಕದ ಕುಸ್ತಿಪಟು ಸಾರಾ ಆನ್ ಹಿಲ್ಡೆಬ್ರಾಂಡ್ ಮತ್ತು ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ನಡುವೆ ನಡೆಯಲಿದೆ. ಪ್ಯಾರಿಸ್ ಒಲಿಂಪಿಕ್ ಸಂಘಟನಾ ಸಮಿತಿಯು ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ‘ಎರಡನೇ ದಿನ ನಡೆಸಿದ ತೂಕ ಪರೀಕ್ಷೆಯಲ್ಲಿ ವಿನೇಶ್ ನಿಗದಿಗಿಂದ ಅಧಿಕ ತೂಕ ಹೊಂದಿರುವುದು ಕಂಡು ಬಂದಿರುವುದರಿಂದ ಅವರನ್ನು ಅನರ್ಹಗೊಳಿಸಲಾಗಿದೆ. ಅಂತರಾಷ್ಟ್ರೀಯ ಕುಸ್ತಿಯ ನಿಯಮಗಳ ಸೆಕ್ಷನ್ 11 ರ ಪ್ರಕಾರ, ಇದೀಗ ಫೈನಲ್ನಲ್ಲಿ ವಿನೇಶ್ ಅವರ ಸ್ಥಾನವನ್ನು ಸೆಮಿಫೈನಲ್‌ನಲ್ಲಿ ವಿನೇಶ್ ವಿರುದ್ಧ ಸೋತಿದ್ದ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರಿಗೆ ನೀಡಲಾಗಿದೆ. ಉಳಿದಂತೆ ಕಂಚಿನ ಪದಕಕ್ಕಾಗಿ ಜಪಾನ್‌ನ ಯುಯಿ ಸುಸಾಕಿ ಮತ್ತು ಉಕ್ರೇನ್‌ನ ಒಕ್ಸಾನಾ ಲಿವಾಚ್ ನಡುವೆ ರಿಪಿಚೇಜ್ ಪಂದ್ಯ ನಡೆಯಲಿದೆ ಎಂದು ತಿಳಿಸಿದೆ.
ವಿನೇಶ್ ಫೋಗಟ್ ಅನರ್ಹ
ವಿನೇಶ್ ಫೋಗಟ್ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಅವರನ್ನು ಏಕಪಕ್ಷೀಯ ರೀತಿಯಲ್ಲಿ ಸೋಲಿಸಿದ್ದರು. ವಿನೇಶ್ ಈ ಪಂದ್ಯವನ್ನು 5-0 ಅಂತರದಿಂದ ಗೆದ್ದಿದ್ದರು. ಆದರೆ ಈ ಪಂದ್ಯದ ನಂತರ ಆಕೆಗೆ ಮತ್ತು ಭಾರತೀಯ ಅಭಿಮಾನಿಗಳು ಊಹಿಸಲೂ ಸಾಧ್ಯವಾಗದಂತಹ ಘಟನೆ ಸಂಭವಿಸಿದೆ. ಸೆಮಿಫೈನಲ್ ಪಂದ್ಯವನ್ನು ಗೆದ್ದ ನಂತರ ವಿನೇಶ್ ಫೋಗಟ್ ಅವರ ತೂಕವನ್ನು ಪರೀಕ್ಷಿಸಲಾಗಿದ್ದು, ಅವರ ತೂಕದಲ್ಲಿ ನಿಗದಿತ ಮಿತಿಗಿಂತ ಹೆಚ್ಚಳ ಕಂಡುಬಂದಿತ್ತು. ಹೀಗಾಗಿ ವಿನೇಶ್ ತಮ್ಮ ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟರು. ಇದರ ಹೊರತಾಗಿಯೂ ಅವರ ತೂಕ 50 ಕೆಜಿ, 100 ಗ್ರಾಂಗಿಂತ ಹೆಚ್ಚಿತ್ತು. ಹೀಗಾಗಿ ಅವರನ್ನು ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಲಾಯಿತು.
ತೂಕ ಇಳಿಸಲು ನಾನಾ ಕಸರತ್ತು
ವರದಿಗಳ ಪ್ರಕಾರ, ಮಂಗಳವಾರ ವಿನೇಶ್ ಫೋಗಟ್ ತನ್ನ ಮೊದಲ ಪಂದ್ಯವನ್ನು ಆಡುವುದಕ್ಕಿಂತ ಮುಂಚೆ ಅವರ ತೂಕವನ್ನು ಪರೀಕ್ಷಿಸಲಾಗಿತ್ತು. ಆ ಸಮಯದಲ್ಲಿ ಅವರ ತೂಕ 49 ಕೆಜಿ, 900 ಗ್ರಾಂ ಆಗಿತ್ತು. ಆದರೆ ಸೆಮಿಫೈನಲ್‌ನಲ್ಲಿ ಗೆದ್ದ ಬಳಿಕ ಅವರ ತೂಕವನ್ನು ಪರೀಕ್ಷಿಸಲಾಗಿ ಅವರ ತೂಕದಲ್ಲಿ ಸುಮಾರು 2.8 ಕೆಜಿಯಷ್ಟು ಹೆಚ್ಚಳ ಕಂಡುಬಂದಿತ್ತು. ಇದರ ನಂತರ, ವಿನೇಶ್ ಫೋಗಟ್ ಈ ತೂಕವನ್ನು ಕಡಿಮೆ ಮಾಡಲು ರಾತ್ರಿಯಿಡೀ ಶ್ರಮಿಸಿದರು. ರನ್ನಿಂಗ್, ಸ್ಕಿಪ್ಪಿಂಗ್, ಸೈಕ್ಲಿಂಗ್ ಮಾಡಿದ್ದರು. ಅಷ್ಟೇ ಅಲ್ಲ, ತೂಕ ಇಳಿಸಿಕೊಳ್ಳಲು ಕೂದಲು, ಉಗುರುಗಳನ್ನೂ ಸಹ ಕತ್ತರಿಸಿದ್ದಾರೆ. ಜೊತೆಗೆ ರಕ್ತವನ್ನು ಸಹ ತೆಗೆದಿದ್ದರು ಎಂಬ ವರದಿಗಳಿವೆ. ಆದರೆ ಇದರ ಹೊರತಾಗಿಯೂ ಅವರು ತನ್ನ ತೂಕವನ್ನು 50 ಕೆಜಿಗೆ ಇಳಿಸುವಲ್ಲಿ ವಿಫಲರಾಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:37 pm, Wed, 7 August 24