ಭಾರತದ ಚಿನ್ನ ಹುಡುಗ ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲೇ ಪುರುಷರ ಜಾವೆಲಿನ್ನಲ್ಲಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. 89.34 ಮೀಟರ್ ದೂರ ಎಸೆಯುವ ಮೂಲಕ ಬಂಗಾರದ ಭರವಸೆ ಮೂಡಿಸಿದ್ದಾರೆ. 89.34 ಮೀಟರ್ ದೂರ ಎಸೆತ ಇದು ಜಾಗತಿಕ ಚಾಂಪಿಯನ್‌ಶಿಪ್‌ನಲ್ಲಿ ಚೋಪ್ರಾ ಅವರ ಅತ್ಯುತ್ತಮ ಎಸೆತ ಎಂದು ಹೇಳಲಾಗಿದೆ. ಈ ಹಿಂದೆ ಅವರು 89.94 ಮೀ ಎಸೆತ ಮೂಲಕ ಇತಿಹಾಸ ಸೃಷ್ಟಿಸಿದರು. ಚೋಪ್ರಾ ಅವರು ವೈಯಕ್ತಿಕ ಒಲಿಂಪಿಕ್ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಜಾವೆಲಿನ್ನಲ್ಲೂ ಹಾಗೂ ಒಲಿಂಪಿಕ್ ಹೊಸ ಅಧ್ಯಾಯವನ್ನು ಸೃಷ್ಟಿಸಿದರು. ಇನ್ನು ಅಂತಿಮ ಪಂದ್ಯ ಆಗಸ್ಟ್ 8 ರಂದು ನಡೆಯುವ ಸಾಧ್ಯತೆ ಇದೆ.
ಈ ವರ್ಷ ಕೇವಲ ಮೂರು ಈವೆಂಟ್‌ಗಳಲ್ಲಿ ಭಾಗವಹಿಸಿದ್ದರೂ, ವಿಶ್ವ ಚಾಂಪಿಯನ್ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಈಗಾಗಲೇ ನೀರಜ್ ಚೋಪ್ರಾ ಅವರು ವಿಶ್ವ ಮಟ್ಟದಲ್ಲಿ ಭಾರಿ ಪೈಪೋಟಿಯನ್ನು ನೀಡುತ್ತಾರೆ. 88.36 ಮೀಟರ್ ಎಸೆದ ಚೋಪ್ರಾ ಮೇನಲ್ಲಿ ನಡೆದ ದೋಹಾ ಡೈಮಂಡ್ ಲೀಗ್‌ನಲ್ಲಿ ಎರಡನೇ ಸ್ಥಾನವನ್ನು ಗಳಿಸಿದರು. ಇದು ಕೂಡ ಅವರ ಉತ್ತಮ ಸಾಧನೆ ಆಗಿತ್ತು. ನಂತರ ಆಡ್ಕ್ಟರ್ ಸಮಸ್ಯೆಯಿಂದ ಮೇ 28 ರಂದು ಆಸ್ಟ್ರಾವಾ ಗೋಲ್ಡನ್ ಸ್ಪೈಕ್ ಈವೆಂಟ್‌ನಿಂದ ಹಿಂದೆ ಸರಿದರು. ಜೂನ್ 18 ರಂದು ಫಿನ್‌ಲ್ಯಾಂಡ್‌ನಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್‌ನಲ್ಲಿ 85.97 ಮೀಟರ್‌ಗಳ ಎಸೆಯುವ ಮೂಲಕ ಮತ್ತೊಂದು ಮಹತ್ವದ ಸಾಧನೆಯನ್ನು ಮಾಡಿದರು.
ಇದನ್ನೂ ಓದಿ: ಕುಸ್ತಿ ಸ್ಪರ್ಧೆಯಲ್ಲಿ ವಿನೇಶ್ ಫೋಗಟ್ ಮುಂದೆ ಮಂಡಿಯೂರಿದ ಯುಯಿ ಸುಸಾಕಿ
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನಂತರ, ಚೋಪ್ರಾ ಅವರು 15 ಸ್ಪರ್ಧೆಗಳಲ್ಲಿ ಎರಡು ಬಾರಿ 85 ಮೀಟರ್‌ಗಿಂತ ಕಡಿಮೆ ಎಸೆತ ಎಂದು ಹೇಳಬಹುದು. ಚೋಪ್ರಾ ಅವರ ಪ್ರಮುಖ ಸ್ಪರ್ಧಿಗಳೆಂದರೆ ಜರ್ಮನಿಯ ಜೂಲಿಯನ್ ವೆಬರ್, ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್ ಮತ್ತು ಜೆಕ್ ಎಸೆತಗಾರ ಜಾಕುಬ್ ವಡ್ಲೆಜ್. ವಡ್ಲೆಜ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದರು ಮತ್ತು ದೋಹಾ ಡೈಮಂಡ್ ಲೀಗ್‌ನಲ್ಲಿ ಚೋಪ್ರಾ ಸೋತರು.
ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದ ಮೊದಲ ಭಾರತೀಯ. ಇದೀಗ ಎರಿಕ್ ಲೆಮ್ಮಿಂಗ್, ಜೊನ್ನಿ ಮೈರಾ, ಜಾನ್ ಝೆಲೆಜ್ನಿ ಮತ್ತು ಆಂಡ್ರಿಯಾಸ್ ಥೋರ್ಕಿಲ್ಡ್‌ಸೆನ್ ಸಾಲಿಗೆ ನೀರಜ್ ಚೋಪ್ರಾ ಸೇರಿದ್ದಾರೆ. ಇದು ಭಾರತ ಕ್ರೀಡಾ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:49 pm, Tue, 6 August 24