India vs Germany Hockey Semifinals: ಜರ್ಮನಿ vs ಭಾರತ ಹಾಕಿ ಪಂದ್ಯ ಯಾವಾಗ, ಎಲ್ಲಿ ವೀಕ್ಷಿಸಬೇಕು?
ಭಾರತ ಮತ್ತು ಜರ್ಮನಿ ಹಾಕಿ ಸೆಮಿಫೈನಲ್ ಪಂದ್ಯಾ ನಡೆಯಲಿದೆ. ಈಗಾಗಲೇ, ರಣರೋಚಕ ಪಂದ್ಯಾದ ಮೂಲಕ ಭಾರತ ಸೆಮಿಫೈನಲ್ ತಲುಪಿದ್ದು, ಜರ್ಮನಿ ಮುಂದೆ ಘರ್ಜಿಸಲಿದೆ. ಜರ್ಮನಿ vs ಭಾರತ ಹಾಕಿ ಪಂದ್ಯಾ ಯಾವಾಗ ಮತ್ತು ಎಲ್ಲಿ ವೀಕ್ಷಿಸಬೇಕು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅದ್ಭುತ ಆಟದೊಂದಿಗೆ ಭಾರತ ಹಾಕಿ ತಂಡ, ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಇದೀಗ ಹರ್ಮನ್‌ಪ್ರೀತ್ ಸಿಂಗ್ ಸೇನೆಯು ಬಲಿಷ್ಠ ಜರ್ಮನಿಯನ್ನು ಎದುರಿಸಲಿದೆ. ಈಗಾಗಲೇ ತಂಡ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆದರೆ ಇದರ ಮಧ್ಯೆ ಭಾರತ ಹಾಕಿ ತಂಡಕ್ಕೆ ಅಂತರಾಷ್ಟ್ರೀಯ ಹಾಕಿ ಫೆಡರೇಶನ್ ಬಿಗ್ ಶಾಕ್ ನೀಡಿದೆ. ಅಮಿತ್ ರೋಹಿದಾಸ್ ಅವರನ್ನು ಸೆಮಿಫೈನಲ್ ಪಂದ್ಯದಿಂದ ನಿಷೇಧಿಸಿದೆ. ಪಂದ್ಯದ ಸಮಯದಲ್ಲಿ, ಅವರ ಹಾಕಿ ಸ್ಟಿಕ್ ಗ್ರೇಟ್ ಬ್ರಿಟನ್ ತಂಡದ ಆಟಗಾರನ ಮುಖಕ್ಕೆ ಆಕಸ್ಮಿಕವಾಗಿ ಬಡಿದಿತ್ತು. ಇದರಿಂದಾಗಿ ಅವರಿಗೆ ಆನ್-ಫೀಲ್ಡ್ ರೆಫ್ರಿ, ರೆಡ್ ಕಾರ್ಡ್ ನೀಡಿದ್ದರು. ಹೀಗಾಗಿ ಅವರನ್ನು ಆಟದಿಂದ ಹೊರಗೆ ಇಡುವಂತಾಗಿದೆ, ಅದರೂ ಭಾರತ ತಂಡ ಕುಗ್ಗದೇ, ಸೆಮಿಫೈನಲ್ ಉತ್ತಮ ಪ್ರದರ್ಶನ ನೀಡಲಿದೆ.
ಪುರುಷರ ಹಾಕಿ ಸೆಮಿಫೈನಲ್ ಪಂದ್ಯ ಯಾವಾಗ?
ಭಾರತ ಪುರುಷರ ಹಾಕಿ ತಂಡವು ಮಂಗಳವಾರ (ಆಗಸ್ಟ್ 6), 2024 ರಂದು ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಜರ್ಮನಿ ವಿರುದ್ಧ ಸೆಮಿಫೈನಲ್ ಪಂದ್ಯವನ್ನು ಆಡಲಿದೆ.
ಭಾರತ ಪುರುಷರ ಹಾಕಿ ಸೆಮಿಫೈನಲ್ ಪಂದ್ಯ ಎಷ್ಟು ಗಂಟೆಗೆ?
ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತ ಪುರುಷರ ಹಾಕಿ ತಂಡದ ಸೆಮಿಫೈನಲ್ ಪಂದ್ಯವು 10:30 PM IST ಕ್ಕೆ ಪ್ರಾರಂಭವಾಗುತ್ತದೆ.
ಭಾರತ ಮತ್ತು ಜರ್ಮನಿ ಪಂದ್ಯ ಹೇಗೆ ವೀಕ್ಷಿಸುವುದು?
ಭಾರತ vs ಜರ್ಮನಿ ಹಾಕಿ ಪಂದ್ಯವನ್ನು ಸ್ಪೋರ್ಟ್ಸ್ 18 ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.
ಭಾರತ ಮತ್ತು ಜರ್ಮನಿ ಪಂದ್ಯ ಲೈವ್ ಸ್ಟ್ರೀಮ್
ಭಾರತ vs ಜರ್ಮನಿ ಹಾಕಿ ಪಂದ್ಯವನ್ನು JioCinema ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.
ಇದನ್ನೂ ಓದಿ: ಚಿನ್ನದ ಬೇಟೆಗೆ ನೀರಜ್ ಚೋಪ್ರಾ ಸಿದ್ಧ, ಪಂದ್ಯಾವನ್ನು ಯಾವಾಗ, ಎಲ್ಲಿ ವೀಕ್ಷಿಸಬೇಕು?
ಭಾರತದ ಪ್ರಮುಖ ಆಟಗಾರರು
ಹರ್ಮನ್‌ಪ್ರೀತ್ ಸಿಂಗ್ ಅವರು ಭಾರತಕ್ಕೆ ನಾಯಕ. ಆರು ಪಂದ್ಯಗಳಲ್ಲಿ ಏಳು ಗೋಲುಗಳನ್ನು ಗಳಿಸಿರುವ ಸಿಂಗ್ ಅವರ ಭಾರತದ ಭರವಸೆಗೆ ನಿರ್ಣಾಯಕವಾಗಿದೆ. ಒಂದು ಪಂದ್ಯದ ನಿಷೇಧಕ್ಕೆ ಒಳಗಾಗಿರುವ ಡಿಫೆಂಡರ್ ಅಮಿತ್ ರೋಹಿದಾಸ್ ಅವರ ಅನುಪಸ್ಥಿತಿ ಇದ್ದರು ತಂಡ ಗೆಲ್ಲುವ ಭರವಸೆಯನ್ನು ಹೊಂದಿದೆ. ವರುಣ್ ಕುಮಾರ್ ಮತ್ತು ಸುರೇಂದರ್ ಕುಮಾರ್ ಜರ್ಮನಿಯ ಆಕ್ರಮಣವನ್ನು ತಡೆಯಲು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬೇಕಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:48 am, Tue, 6 August 24