Paris Olympics 2024: ಚಿನ್ನದ ಬೇಟೆಗೆ ನೀರಜ್ ಚೋಪ್ರಾ ಸಿದ್ಧ, ಪಂದ್ಯವನ್ನು ಯಾವಾಗ, ಎಲ್ಲಿ ವೀಕ್ಷಿಸಬೇಕು?
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಜಾವೆಲಿನ್ ಮಾಸ್ಟರ್ಗಳಾದ ನೀರಜ್ ಚೋಪ್ರಾ ಮತ್ತು ಕಿಶೋರ್ ಜೆನಾ ಅವರು ಭಾಗವಹಿಸಲಿದ್ದಾರೆ. ಈ ಬಾರಿಯೂ ಭಾರತಕ್ಕೆ ಚಿನ್ನದ ಭರವಸೆಯನ್ನು ಈ ಇಬ್ಬರು ಹುಟ್ಟಿಸಿದ್ದಾರೆ. ಇನ್ನು ಇವರ ಪಂದ್ಯ ಯಾವಾಗ? ಎಲ್ಲಿ ವೀಕ್ಷಿಸಬೇಕು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಜಾವೆಲಿನ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಇನ್ನು ಇವರ ಜತೆಗೆ ಕಿಶೋರ್ ಜೆನಾ ಕೂಡ ಪಂದ್ಯಾದಲ್ಲಿ ಭಾಗವಹಿಸಲಿದ್ದಾರೆ. ಭಾರತದ ಜಾವೆಲಿನ್ ಮಾಸ್ಟರ್ಗಳ ರಣರೋಚಕ ಪಂದ್ಯ ನಡೆಯಲಿದೆ. ಅಷ್ಟಕ್ಕೂ ಈ ಪಂದ್ಯ ಎಲ್ಲಿ? ಯಾವಾಗ? ನಡೆಯಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. 2020 ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದು ಭಾರತದ ಕ್ರೀಡಾ ಕ್ಷೇತ್ರದ ಶ್ರೇಷ್ಠೆಯನ್ನು ಹೆಚ್ಚಿಸಿದ ಬಂಗಾರದ ಹುಡುಗ ನೀರಜ್ ಚೋಪ್ರಾ, ಈ ಬಾರಿಯೂ ಚಿನ್ನ ಗೆಲ್ಲುತ್ತಾರೆ ಎಂಬ ಭರವಸೆಯನ್ನು ಭಾರತ ಇಟ್ಟುಕೊಂಡಿದೆ.
ಪಂದ್ಯಗಳು ಯಾವಾಗ?
- 1:50 PM: ಪುರುಷರ ಜಾವೆಲಿನ್ ಥ್ರೋ ಅರ್ಹತಾ ಗುಂಪು A ನಲ್ಲಿ ಕಿಶೋರ್ ಜೆನಾ ಭಾಗವಹಿಸಲಿದ್ದಾರೆ.
- 3:20 PM: ನೀರಜ್ ಚೋಪ್ರಾ ಅವರು ಪುರುಷರ ಜಾವೆಲಿನ್ ಥ್ರೋ ಅರ್ಹತಾ ಗುಂಪಿನ ಬಿ ನಲ್ಲಿ ಭಾಗವಹಿಸಲಿದ್ದಾರೆ.
ಲೈವ್ ವೀಕ್ಷಿಸುವುದು ಎಲ್ಲಿ?
ರಿಲಯನ್ಸ್ ಮಾಲೀಕತ್ವದ Viacom18 2024 ರ ಪ್ಯಾರಿಸ್ ಗೇಮ್ಸ್ ಅನ್ನು ಪ್ರಸಾರ ಮಾಡಲಿದೆ. ಇನ್ನು Sports18 ನೆಟ್‌ವರ್ಕ್ ಮತ್ತು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ JioCinema ಈವೆಂಟ್ನಲ್ಲೂ ಕೂಡ ಪ್ರಸಾರವಾಗಲಿದೆ.
Sports18 – 1 ತಮಿಳು ಮತ್ತು ತೆಲುಗು ಭಾಷೆಯ ಆಯ್ಕೆಗಳ ಜೊತೆಗೆ ಇಂಗ್ಲಿಷ್‌ನಲ್ಲಿ ಕ್ರೀಡಾಕೂಟಗಳನ್ನು ಪ್ರಸಾರ ಮಾಡುತ್ತದೆ. JioCinema – ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಉಚಿತ ಲೈವ್ ಸ್ಟ್ರೀಮಿಂಗ್ ಇದೆ.
ಇದನ್ನೂ ಓದಿ: ಒಲಿಂಪಿಕ್ಸ್ ಸಮಾರೋಪ ಸಮಾರಂಭದಲ್ಲಿ ಮನು ಭಾಕರ್ ಭಾರತದ ಧ್ವಜಧಾರಿ
ಇಂದು ಇತರ ಟೀಮ್ ಇಂಡಿಯಾ ಗೇಮ್‌ಗಳು, ಯಾರು? ಯಅರ ವಿರುದ್ಧ ಸ್ವರ್ಧೆ:
- 1:30 PM: ಹರ್ಮೀತ್ ದೇಸಾಯಿ, ಶರತ್ ಕಮಲ್ ಮತ್ತು ಮಾನವ್ ಠಕ್ಕರ್ ಅವರು ಪುರುಷರ ತಂಡ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಚೀನಾ ವಿರುದ್ಧ ಸ್ಪರ್ಧಿಸಲಿದ್ದಾರೆ .
- 2:30 PM: ವಿನೇಶ್ ಫೋಗಟ್ ಮಹಿಳೆಯರ ಫ್ರೀಸ್ಟೈಲ್ 50 ಕೆಜಿ ರೌಂಡ್ ಆಫ್ 16 ರಲ್ಲಿ ಯುಯಿ ಸುಸಾಕಿ (ಜಪಾನ್) ಅವರನ್ನು ಎದುರಿಸಲಿದ್ದಾರೆ.
- 2:50 PM: ಕಿರಣ್ ಪಹಲ್ ಮಹಿಳೆಯರ 400 ಮೀ ರೆಪೆಚೇಜ್ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ.
- 4:20 PM: ಅರ್ಹತೆ ಪಡೆದರೆ, ವಿನೇಶ್ ಫೋಗಟ್ ಮಹಿಳೆಯರ ಫ್ರೀಸ್ಟೈಲ್ 50 ಕೆಜಿ ಕ್ವಾರ್ಟರ್‌ಫೈನಲ್‌ನಲ್ಲಿ ಸ್ಪರ್ಧಿಸುತ್ತಾರೆ.
- 10:25 PM: ಮುಂದುವರಿದರೆ, ವಿನೇಶ್ ಫೋಗಟ್ ಮಹಿಳೆಯರ ಫ್ರೀಸ್ಟೈಲ್ 50 ಕೆಜಿ ಸೆಮಿಫೈನಲ್‌ನಲ್ಲಿ ಭಾಗವಹಿಸುತ್ತಾರೆ.
- 10:30 PM: ಪುರುಷರ ಸೆಮಿಫೈನಲ್‌ನಲ್ಲಿ ಭಾರತದ ಹಾಕಿ ತಂಡ ಜರ್ಮನಿ ವಿರುದ್ಧ ಆಡಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:17 am, Tue, 6 August 24