ವಿನೇಶ್ ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್ 2024ರ ಕುಸ್ತಿ ಸ್ಪರ್ಧೆಯ 50 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಜಪಾನ್‌ನ ಯುಯಿ ಸುಸಾಕಿ ಅವರನ್ನು 16ನೇ ಸುತ್ತಿನಲ್ಲಿ ಸೋಲಿಸಿದ್ದಾರೆ. ಸುಸಾಕಿ ವಿಶ್ವ ಚಾಂಪಿಯನ್ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದು, ಇದೀಗ ವಿನೇಶ್ ಫೋಗಟ್ ಮುಂದೆ ಮಂಡಿಯೂರಿದ್ದಾರೆ.
ಸುಸಾಕಿ ತನ್ನ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಜಪಾನೀಸ್ ಅಲ್ಲದ ಎದುರಾಳಿಯ ವಿರುದ್ಧ ಸೋತಿದ್ದಾರೆ. ಇದಲ್ಲದೆ, ಇದು 14 ವರ್ಷಗಳಲ್ಲಿ ಅವರ ವೃತ್ತಿಜೀವನದ ನಾಲ್ಕನೇ ಸೋಲು ಎಂದು ಹೇಳಲಾಗಿದೆ. ಇನ್ನು ವಿನೇಶ್ ಫೋಗಟ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಫೋಗಾಟ್ ಆರಂಭಿಕ ಸುತ್ತಿನ ನಂತರ 0-2 ರಿಂದ ಹಿಂದುಳಿದಿದ್ದು, ಕೊನೆಯ 12 ಸೆಕೆಂಡುಗಳ ವರೆಗೆ ಅದೇ ಸ್ಥಿತಿ ಇತ್ತು. ಕೊನೆಯಲ್ಲಿ ಮಾಡು ಇಲ್ಲವೆ ಮಡಿ ಎಂಬಂತೆ ತನ್ನ ಬಲ ಪ್ರದರ್ಶನ ಮಾಡಿ ಸುಸಾಕಿ ಅವರನ್ನು ಸೋಲಿಸಿದರು.
ವಿನೇಶ್ ಫೋಗಟ್ ಈಗ ಕ್ವಾರ್ಟರ್‌ಫೈನಲ್ ಸುತ್ತಿನಲ್ಲಿ ಉಕ್ರೇನ್‌ನ ಒಕ್ಸಾನಾ ಲಿವಾಚ್ ಅವರ ಮುಂದೆ ಸ್ಪರ್ಧಿಸಲಿದ್ದಾರೆ. ಇಲ್ಲಿ ವಿನೇಶ್ ಫೋಗಟ್ ಅವರು ತಮ್ಮ ಇದೇ ರೀತಿಯ ತಂತ್ರವನ್ನು ಉಪಯೋಗಿಸಿ ಪೈನಲ್ ಹೋಗುತ್ತಾರ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ವಿನೇಶ್ ಅವರ ಈ ಸಾಧನೆಗೆ ಭಾರತೀಯ ಕ್ರಿಕೆಟಿಗ ಮನೋಜ್ ತಿವಾರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಜಾವೆಲಿನ್ನಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಚಿನ್ನ ಹುಡುಗ ನೀರಜ್ ಚೋಪ್ರಾ
ಒಲಿಂಪಿಕ್ ಚಾಂಪಿಯನ್ ಮತ್ತು 4ನೇ ಬಾರಿ ವಿಶ್ವ ಚಾಂಪಿಯನ್, ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯಲು ಜಪಾನ್‌ನ ಕುಸ್ತಿ ದಂತಕಥೆ ಯುಯಿ ಸುಸಾಕಿ ಅವರನ್ನು 2-0 ಅಂತರದಿಂದ ಸೋಲಿಸಿದರು! ಚೆನ್ನಾಗಿದೆ ಹುಡುಗಿ! ಚೆನ್ನಾಗಿದೆ!!” ತಿವಾರಿ ಟ್ವೀಟ್ ಮಾಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:28 pm, Tue, 6 August 24