Sign In

By signing in or creating an account, you agree with Associated Broadcasting Company's Terms & Conditions and Privacy Policy.

Paris Paralympics 2024: ಆರ್ಚರಿಯಲ್ಲಿ ಇತಿಹಾಸ ಸೃಷ್ಟಿಸಿದ ಎರಡೂ ಕೈಗಳಿಲ್ಲದ 17 ವರ್ಷದ ಶೀತಲ್ ದೇವಿ..!

Paris Paralympics 2024: ತಮ್ಮ ಚೊಚ್ಚಲ ಪ್ಯಾರಾಲಿಂಪಿಕ್​ ಆಡುತ್ತಿರುವ ಶೀತಲ್ ದೇವಿ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಎಂಬ ಸಣ್ಣ ಹಳ್ಳಿಯ ನಿವಾಸಿ. 17 ವರ್ಷದ ಶೀತಲ್ ಫೋಕೊಮೆಲಿಯಾ ಎಂಬ ಜನ್ಮಜಾತ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಶೀತಲ್​ ಅವರಿಗೆ ಎರಡೂ ಕೈಗಳಿಲ್ಲ. ಆದರೆ ಸಾಧನೆಗೆ ಇದ್ಯಾವುದು ಲೆಕ್ಕಕ್ಕಿಲ್ಲ ಎಂಬುದು ವಿಶ್ವಕ್ಕೆ ತೋರಿಸಿಕೊಟ್ಟಿರುವ ಈ ಛಲಗಾತಿ ಇದೀಗ ಪ್ಯಾರಿಸ್​ನಲ್ಲಿ ಭಾರತಕ್ಕೆ ಕೀರ್ತಿ ತಂದಿದ್ದಾರೆ.

Paris Paralympics 2024: ಆರ್ಚರಿಯಲ್ಲಿ ಇತಿಹಾಸ ಸೃಷ್ಟಿಸಿದ ಎರಡೂ ಕೈಗಳಿಲ್ಲದ 17 ವರ್ಷದ ಶೀತಲ್ ದೇವಿ..!
ಶೀತಲ್ ದೇವಿ
Follow us
ಪೃಥ್ವಿಶಂಕರ
|

Updated on:Aug 30, 2024 | 3:47 PM

ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್ ಮುಕ್ತಾಯಗೊಂಡಿದ್ದು, ಇದೀಗ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಸರದಿಯಾಗಿದೆ. ನಿನ್ನೆಯಿಂದ ಆರಂಭವಾಗಿರುವ ಈ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್‌ಗಳು ಮೊದಲ ದಿನವೇ ಅಮೋಘ ಆಟ ಪ್ರದರ್ಶಿಸಿದರು. ಅನೇಕ ಕ್ರೀಡಾಪಟುಗಳು ಮೊದಲ ಸುತ್ತನ್ನು ಗೆದ್ದು ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದಾರೆ. ಇದರಲ್ಲಿ ಕೇವಲ 17 ವರ್ಷದ ಬಿಲ್ಲುಗಾರ್ತಿ ಶೀತಲ್ ದೇವಿ ತಮ್ಮ ಚೊಚ್ಚಲ ಪ್ಯಾರಾಲಿಂಪಿಕ್​ನಲ್ಲೇ ಇತಿಹಾಸ ಸೃಷ್ಟಿಸಿದ್ದಾರೆ. ಪ್ಯಾರಿಸ್‌ನಲ್ಲಿ ನಡೆದ ಆರ್ಚರಿ ರ‍್ಯಾಂಕಿಂಗ್ ಸುತ್ತಿನಲ್ಲಿ 720 ಅಂಕಗಳಿಗೆ 703 ಅಂಕಗಳನ್ನು ಕಲೆಹಾಕಿದ ಶೀತಲ್ ವಿಶ್ವ ದಾಖಲೆಯನ್ನು ಸೃಷ್ಟಿಸಿದರು. ಆದರೆ ಸ್ವಲ್ಪ ಸಮಯದ ನಂತರ ಟರ್ಕಿಯಾದ ಓಜ್ನೂರ್ ಗಿರ್ಡಿ ಕ್ಯೂರ್ ಅವರು 704 ಅಂಕಗಳನ್ನು ಕಲೆಹಾಕುವುದರೊಂದಿಗೆ ಶೀತಲ್ ಅವರನ್ನು ಹಿಂದಿಕ್ಕಿ ಈ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಆದಾಗ್ಯೂ ಶೀತಲ್ ಅವರ ಈ ಸಾಧನೆಗೆ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಅದಕ್ಕೆ ಕಾರಣವೂ ಇದೆ.

720 ಅಂಕಗಳಿಗೆ 703 ಅಂಕ

ತಮ್ಮ ಚೊಚ್ಚಲ ಪ್ಯಾರಾಲಿಂಪಿಕ್​ ಆಡುತ್ತಿರುವ ಶೀತಲ್ ದೇವಿ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಎಂಬ ಸಣ್ಣ ಹಳ್ಳಿಯ ನಿವಾಸಿ. 17 ವರ್ಷದ ಶೀತಲ್ ಫೋಕೊಮೆಲಿಯಾ ಎಂಬ ಜನ್ಮಜಾತ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆಗೆ ತುತ್ತಾದವರ ದೇಹದಲ್ಲಿ ಕೆಲವು ಅಂಗಾಂಗಳು ಬೆಳೆಯುವುದಿಲ್ಲ. ಹೀಗಾಗಿ ಶೀತಲ್​ ಅವರಿಗೆ ಎರಡೂ ಕೈಗಳಿಲ್ಲ. ಆದರೆ ಸಾಧನೆಗೆ ಇದ್ಯಾವುದು ಲೆಕ್ಕಕ್ಕಿಲ್ಲ ಎಂಬುದನ್ನು ವಿಶ್ವಕ್ಕೆ ತೋರಿಸಿಕೊಟ್ಟಿರುವ ಈ ಛಲಗಾತಿ ಇದೀಗ ಪ್ಯಾರಿಸ್​ನಲ್ಲಿ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಶೀತಲ್ 720 ಅಂಕಗಳಿಗೆ 703 ಅಂಕಗಳನ್ನು ಗಳಿಸಿ ರ‍್ಯಾಂಕಿಂಗ್ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸ್ಕೋರ್ ಕೂಡ ಆಗಿದೆ. ಇದರೊಂದಿಗೆ 700 ಅಂಕ ಗಳಿಸಿದ ಭಾರತದ ಮೊದಲ ಮಹಿಳಾ ಬಿಲ್ಲುಗಾರ್ತಿ ಎನಿಸಿಕೊಂಡಿದ್ದಾರೆ. ರ್ಯಾಂಕಿಂಗ್​ನಲ್ಲಿ 2ನೇ ಸ್ಥಾನ ಪಡೆದಿರುವ ಶೀತಲ್ ಅವರಿಗೆ ಮುಂದಿನ ಸುತ್ತಿನಲ್ಲಿ ಬೈ ಸಿಕ್ಕಿದ್ದು, ಇದೀಗ ಅವರು ತಮ್ಮ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಗಸ್ಟ್ 31 ರಂದು ರಾತ್ರಿ 9 ಗಂಟೆಗೆ ಆಡಲಿದ್ದಾರೆ.

ಮಿಶ್ರ ಈವೆಂಟ್​ನಲ್ಲೂ ದಾಖಲೆ

ಶೀತಲ್ ದೇವಿ ವೈಯಕ್ತಿಕ ಈವೆಂಟ್​ನಲ್ಲಿ ವಿಶ್ವದಾಖಲೆ ನಿರ್ಮಿಸಿದ ನಂತರ ಮಿಶ್ರ ಈವೆಂಟ್​ನಲ್ಲೂ ದಾಖಲೆ ಬರೆದಿದ್ದಾರೆ. ಶೀತಲ್ ದೇವಿ ಮತ್ತು ರಾಕೇಶ್ ಕುಮಾರ್ ತಂಡವು ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಆರ್ಚರಿಯಲ್ಲಿ ವಿಶ್ವ ಮತ್ತು ಪ್ಯಾರಾಲಿಂಪಿಕ್ ದಾಖಲೆಯನ್ನು ಸೃಷ್ಟಿಸಿದೆ. ಶೀತಲ್ ಅವರ 703 ಅಂಕಗಳ ನಂತರ, ರಾಕೇಶ್ ಕುಮಾರ್ ತಮ್ಮ ವೈಯಕ್ತಿಕ ಶ್ರೇಯಾಂಕದ ಸುತ್ತಿನಲ್ಲಿ 696 ಅಂಕಗಳನ್ನು ಗಳಿಸಿದರು. ಈ ಮೂಲಕ ತಮ್ಮ ತಮ್ಮ ರ ್ಯಾಂಕಿಂಗ್ ಸುತ್ತುಗಳು ಮುಗಿದ ಬಳಿಕ ಇಬ್ಬರೂ ಸೇರಿ ಒಟ್ಟು 1399 ಪಾಯಿಂಟ್ಸ್ ಕಲೆಹಾಕಿದರು. ಇದು ಮಿಶ್ರ ತಂಡ ಸ್ಪರ್ಧೆಯಲ್ಲಿ ಇದುವರೆಗಿನ ಗರಿಷ್ಠ ಸ್ಕೋರ್ ಆಗಿದೆ. ಇದರೊಂದಿಗೆ ಎರಡೂ ಜೋಡಿಗಳು ಇದೀಗ ಕ್ವಾರ್ಟರ್ ಫೈನಲ್ ತಲುಪಿವೆ. ಇದೀಗ ಅವರ ಕ್ವಾರ್ಟರ್ ಫೈನಲ್ ಪಂದ್ಯ ಸೆಪ್ಟೆಂವರ್ 2ರಂದು ರಾತ್ರಿ 8:40ಕ್ಕೆ ನಡೆಯಲಿದೆ.

ವೃತ್ತಿಜೀವನ ಶುರುವಾಗಿದ್ದು ಹೀಗೆ

ಪ್ಯಾರಾಲಿಂಪಿಕ್​ನಲ್ಲೇ ಕೇವಲ 17ನೇ ವಯಸ್ಸಿನಲ್ಲೇ ಇತಿಹಾಸ ಸೃಷ್ಟಿಸಿದ ಶೀತಲ್ 15ನೇ ವಯಸ್ಸಿನವರೆಗೂ ಬಿಲ್ಲು-ಬಾಣವನ್ನೂ ನೋಡಿರಲಿಲ್ಲ. ಆದರೆ 2022, ಅವರ ಜೀವನದ ದಿಕ್ಕನೇ ಬದಲಿಸಿತು. ತನ್ನ ಪರಿಚಯಸ್ಥರೊಬ್ಬರಿಂದಾಗಿ ಶೀತಲ್ ಜಮ್ಮುವಿನ ಕತ್ರಾದಲ್ಲಿರುವ ಶ್ರೀ ಮಾತಾ ವೈಷ್ಣೋದೇವಿ ಶ್ರೈನ್ ಬೋರ್ಡ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್​ನಲ್ಲಿ ಬಿಲ್ಲುಗಾರಿಕೆ ತರಬೇತಿಗೆ ಸೇರಿದರು. ಇದು ಅವರ ಮನೆಯಿಂದ ಸುಮಾರು 200 ಕಿಮೀ (124 ಮೈಲುಗಳು) ದೂರದಲ್ಲಿದೆ. ಅಲ್ಲಿ ಅಭಿಲಾಷಾ ಚೌಧರಿ ಮತ್ತು ಕುಲದೀಪ್ ವೆಡ್ವಾನ್ ಅವರ ಮಾರ್ಗದರ್ಶನದಲ್ಲಿ ಆರ್ಚರಿ ತರಬೇತಿ ಆರಂಭಿಸಿದರು. ಅಲ್ಲಿಂದ ಕೇವಲ 2 ವರ್ಷಗಳಲ್ಲಿ ಬಿಲ್ಲುಗಾರಿಕೆಯಲ್ಲಿ ಪ್ರಾವಿಣ್ಯತೆ ಪಡೆದ ಶೀತಲ್, ಇದೀಗ ಪ್ಯಾರಾಲಿಂಪಿಕ್ಸ್​ನಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ದೇಹದ ಎಲ್ಲಾ ಅಂಗಾಂಗಳು ಸರಿ ಇದ್ದು, ಸರಿಯಾದ ಜೀವನ ಕಟ್ಟಿಕ್ಕೊಳಲಾಗದೆ ಇತರರನ್ನು ದೂಷಿಸುವವರ ನಡುವೆ ಶೀತಲ್ ನಮಗೆಲ್ಲ ಮಾದರಿಯಾಗಿದ್ದಾರೆ. ಎರಡೂ ಕೈಗಳಿಲ್ಲದೆ ಆರ್ಚರಿಯಲ್ಲಿ ಸಾಧನೆಯ ಶಿಖರವನ್ನೇರಿರುವ ಶೀತಲ್ ಅವರು ದೇಶಕ್ಕೆ ಪದಕ ಗೆದ್ದುಕೊಡಲಿ ಎಂದು ನಾವೆಲ್ಲರು ಹಾರೈಸೋಣ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:37 pm, Fri, 30 August 24

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್