Paralympics 2024: 100 ಮೀ. ಓಟದ ಸ್ಪರ್ಧೆಯಲ್ಲಿ ಕಂಚು ಗೆದ್ದು ಇತಿಹಾಸ ಬರೆದ ಪ್ರೀತಿ ಪಾಲ್
Paralympics 2024: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನ ಎರಡನೇ ದಿನ ಭಾರತಕ್ಕೆ ಒಂದರ ಹಿಂದೆ ಒಂದರಂತೆ ಶುಭ ಸುದ್ದಿಗಳು ಸಿಗುತ್ತಿವೆ.ಇಂದು ಒಂದೇ ದಿನ ಭಾರತಕ್ಕೆ ಮೂರನೇ ಪದಕ ಸಿಕ್ಕಿದೆ. 100 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತದ ಪ್ರೀತಿ ಪಾಲ್ ಕಂಚಿನ ಪದಕ ಗೆದ್ದಿದ್ದಾರೆ. ಮಹಿಳೆಯರ 100 ಮೀಟರ್ ಟಿ-35 ಫೈನಲ್‌ನಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಪ್ರೀತಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು.

ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನ ಎರಡನೇ ದಿನ ಭಾರತಕ್ಕೆ ಒಂದರ ಹಿಂದೆ ಒಂದರಂತೆ ಶುಭ ಸುದ್ದಿಗಳು ಸಿಗುತ್ತಿವೆ.ಇಂದು ಒಂದೇ ದಿನ ಭಾರತಕ್ಕೆ ಮೂರನೇ ಪದಕ ಸಿಕ್ಕಿದೆ. ಮೂರನೇ ಪದಕದ ರೂಪದಲ್ಲಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತದ ಪ್ರೀತಿ ಪಾಲ್ ಕಂಚಿನ ಪದಕ ಗೆದ್ದಿದ್ದಾರೆ. ಮಹಿಳೆಯರ 100 ಮೀಟರ್ ಟಿ-35 ಫೈನಲ್‌ನಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಪ್ರೀತಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು. ಇದರೊಂದಿಗೆ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಟ್ರ್ಯಾಕ್ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರಿಗೂ ಮೊದಲು ಮಹಿಳೆಯರ 10 ಮೀಟರ್ ಏರ್ ರೈಫಲ್ ಎಸ್‌ಎಚ್ 1 ಫೈನಲ್ ಸ್ಪರ್ಧೆಯಲ್ಲಿ ಅವನಿ ಲೆಖರಾ ಚಿನ್ನದ ಪದಕ ಗೆದ್ದಿದ್ದರೆ, ಮೋನಾ ಅಗರ್ವಾಲ್ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದರು.
ಮಹಿಳೆಯರ 100 ಮೀಟರ್ಸ್ (T35) ಸ್ಪರ್ಧೆಯಲ್ಲಿ 14.21 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಪ್ರೀತಿ ಪಾಲ್ ಕಂಚು ಗೆದ್ದರೆ, ಚೀನಾದ ಝೌ ಜಿಯಾ 13.58 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡರು. ಇನ್ನು ಚೀನಾದವರೆ ಆದ ಗುವೊ ಕಿಯಾನ್ಕಿಯಾನ್ 13.74 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕ ಗೆದ್ದರು. ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ T35 ವರ್ಗವು ಹೈಪರ್ಟೋನಿಯಾ, ಅಟಾಕ್ಸಿಯಾ ಮತ್ತು ಅಥೆಟೋಸಿಸ್ ಮತ್ತು ಸೆರೆಬ್ರಲ್ ಪಾಲ್ಸಿ ಮುಂತಾದ ಸಮನ್ವಯ ಅಸ್ವಸ್ಥತೆಗಳನ್ನು ಹೊಂದಿರುವ ಪ್ಯಾರಾ ಕ್ರೀಡಾಪಟುಗಳಿಗೆ ನಡೆಸುವ ಸ್ಪರ್ಧೆಯಾಗಿದೆ.
Athletics, #ParisParalympics: PREETI PAL IS ON THE PODIUM!!!
The Indian sprinter clocks a PB of 14.21s (wind: -0.1m/s) in the women’s 100m (T35 category) to bring home a bronze medal!!!
Well done Preeti on a phenomenal performance on the biggest stage of them all..
👏🇮🇳🥉 pic.twitter.com/HC1NjxeVMz
— Vishank Razdan (@VishankRazdan) August 30, 2024
ಪ್ರೀತಿ ಪಾಲ್ ಯಾರು?
ಪ್ರೀತಿ ಪಾಲ್ ಉತ್ತರ ಪ್ರದೇಶದ ಮೀರತ್ ನಗರದ ಕಸೇರು ಬಕ್ಸರ್ ನಿವಾಸಿಯಾಗಿದ್ದು, ಇವರ ತಂದೆ ಅನಿಲ್ ಕುಮಾರ್ ಡೈರಿ ನಡೆಸುತ್ತಿದ್ದಾರೆ. ಪ್ರೀತಿಗೆ ಚಿಕ್ಕ ವಯಸ್ಸಿನಲ್ಲೇ ಸೆರೆಬ್ರಲ್ ಪಾಲ್ಸಿ ಇರುವುದು ಪತ್ತೆಯಾಯಿತು. ಆ ಬಳಿಕ ಸಾಧನೆಯ ಛಲ ಬಿಡದ ಪ್ರೀತಿ, ಆರಂಭದಲ್ಲಿ ಮೀರತ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆ ಬಳಿಕ ತನ್ನ ಚಿಕಿತ್ಸೆಗಾಗಿ ದೆಹಲಿಯಲ್ಲಿ ನೆಲೆಸಿದ ಪ್ರೀತಿ, ಅಲ್ಲಿಯೇ ಇರುವ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಕೋಚ್ ಗಜೇಂದ್ರ ಸಿಂಗ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪ್ರಾರಂಭಿಸಿದರು.
Preeti Pal wins third medal for India. 1st medal for India in Paralympics track history.Preeti Pal creates new PB of 14.21 in 100m T35.#Paralympics2024 pic.twitter.com/ZhyaQh8UbM
— Paralympics 2024 Updates (@Badminton7799) August 30, 2024
ಪ್ರೀತಿ ಪಾಲ್ ಅವರ ವೃತ್ತಿಜೀವನ ಹೀಗಿದೆ
ಈ ವರ್ಷ ಮೇ ತಿಂಗಳಲ್ಲಿ ಜಪಾನ್‌ನ ಕೋಬೆಯಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪ್ರೀತಿ ಪಾಲ್ ಕಂಚಿನ ಪದಕ ಗೆದ್ದಿದ್ದಾರೆ. ಅವರು ಮಹಿಳೆಯರ 135, 200 ಮೀಟರ್ಸ್ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿ, 30.49 ಸೆಕೆಂಡುಗಳಲ್ಲಿ ಗುರಿ ತಲುಪಿ ಪದಕ ಗೆದ್ದರು. ಇದರೊಂದಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಅಥ್ಲೀಟ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಈ ಮೂಲಕ ಪ್ಯಾರಿಸ್ ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆಗಿಟ್ಟಿಸಿಕೊಂಡಿದ್ದರು. ಇದಲ್ಲದೆ ಪ್ರೀತಿ ಬೆಂಗಳೂರಿನಲ್ಲಿ ನಡೆದ 6 ನೇ ಇಂಡಿಯನ್ ಓಪನ್ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 2 ಚಿನ್ನದ ಪದಕಗಳನ್ನು ಗೆದ್ದಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:23 pm, Fri, 30 August 24