PBKS vs RCB Playing XI: Rcb ತಂಡದಲ್ಲಿ ಮಹತ್ವದ ಬದಲಾವಣೆ: ಉಭಯ ತಂಡಗಳು ಹೀಗಿವೆ

PBKS vs RCB Playing XI: ಆರ್​ಸಿಬಿ ತಂಡದಲ್ಲಿ ಅತ್ಯುತ್ತಮ ಆರಂಭಿಕನಾಗಿ ಫಾಫ್ ಡುಪ್ಲೆಸಿಸ್ ಇದ್ದರೆ, ಪಂಜಾಬ್ ತಂಡದಲ್ಲಿ ಶಿಖರ್ ಧವನ್ ಇದ್ದಾರೆ. ಹಾಗೆಯೇ ದಿನೇಶ್ ಕಾರ್ತಿಕ್​ಗೆ ಸರಿಸಾಟಿಯಾಗಿ ಮಯಾಂಕ್ ಅಗರ್ವಾಲ್ ಇದ್ದಾರೆ. ಇನ್ನು ಆರ್​ಸಿಬಿಯಲ್ಲಿ ವಿರಾಟ್ ಕೊಹ್ಲಿ ಇದ್ದರೆ ಪಂಜಾಬ್ ತಂಡದಲ್ಲಿ ಸ್ಪೋಟಕ ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಕಾಣಿಸಿಕೊಂಡಿದ್ದಾರೆ.

PBKS vs RCB Playing XI: Rcb ತಂಡದಲ್ಲಿ ಮಹತ್ವದ ಬದಲಾವಣೆ: ಉಭಯ ತಂಡಗಳು ಹೀಗಿವೆ
PBKS vs RCB Playing XI
Edited By:

Updated on: Mar 27, 2022 | 7:18 PM

RCB Playing 11: ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ನ (IPL 2022) 3ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ ತಂಡವು ಟಾಸ್ ಗೆದ್ದಿದೆ. ಅಲ್ಲದೆ ನಾಯಕ  ಮಯಾಂಕ್ ಅಗರ್ವಾಲ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಮೊದಲು ಬ್ಯಾಟ್ ಮಾಡಲಿದ್ದು, ಈ ಮೂಲಕ ಬೃಹತ್ ಮೊತ್ತ ಪೇರಿಸುವ ಇರಾದೆಯಲ್ಲಿದೆ ಫಾಫ್ ಡುಪ್ಲೆಸಿಸ್ ಪಡೆ. ಉಭಯ ತಂಡಗಳೂ ಮೊದಲ ಪಂದ್ಯದಲ್ಲಿ ಗೆಲುವಿನೊಂದಿಗೆ ಐಪಿಎಲ್​ ಅಭಿಯಾನ ಆರಂಭಿಸುವ ಇರಾದೆಯಲ್ಲಿದೆ. ಹೀಗಾಗಿ ಎರಡೂ ತಂಡಗಳಿಂದ ರೋಚಕ ಹೋರಾಟ ನಿರೀಕ್ಷಿಸಬಹುದು. ಮೇಲ್ನೋಟಕ್ಕೆ ಎರಡೂ ತಂಡಗಳು ಬಲಿಷ್ಠವಾಗಿದೆ. ಆದರೆ ಈ ಹಿಂದಿನ ಅಂಕಿ ಅಂಶಗಳನ್ನು ನೋಡಿದ್ರೆ ಪಂಜಾಬ್ ಕಿಂಗ್ಸ್​ ಮೇಲುಗೈ ಹೊಂದಿದೆ.

ಏಕೆಂದರೆ ಪಂಜಾಬ್ ಕಿಂಗ್ಸ್ ಹಾಗೂ RCB ಇದುವರೆಗೆ 28 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಆರ್​ಸಿಬಿ 13 ಬಾರಿ ಮಾತ್ರ ಗೆದ್ದಿದೆ. ಅಂದರೆ 15 ಗೆಲುವು ದಾಖಲಿಸಿ ಪಂಜಾಬ್ ಕಿಂಗ್ಸ್​ ಮೇಲುಗೈ ಹೊಂದಿದೆ. ಹಾಗೆಯೇ ಕೊನೆಯ 5 ಮುಖಾಮುಖಿಯಲ್ಲಿ ಪಂಜಾಬ್ ಕಿಂಗ್ಸ್ 3 ಪಂದ್ಯ ಗೆದ್ದಿದೆ. ಇದಾಗ್ಯೂ ಕಳೆದ ಬಾರಿ ಎರಡೂ ತಂಡಗಳು ಒಂದೊಂದು ಪಂದ್ಯ ಗೆದ್ದುಕೊಂಡಿತ್ತು. ಆದರೆ ಈ ಹಿಂದಿನ ಆರ್​ಸಿಬಿ ವಿರುದ್ದದ ಪಂದ್ಯದ ಗೆಲುವಿನಲ್ಲಿ ಕೆಎಲ್ ರಾಹುಲ್ ಪ್ರಮುಖ ಪಾತ್ರವಹಿಸಿದ್ದರು. ಆದರೆ ಈ ಬಾರಿ ಕೆಎಲ್ ರಾಹುಲ್ ಪಂಜಾಬ್ ತಂಡದಲ್ಲಿಲ್ಲ. ಅದೇ ರೀತಿ ಇತ್ತ ಆರ್​ಸಿಬಿ ತಂಡದಲ್ಲಿ ಎಬಿಡಿ ಕೂಡ ಇಲ್ಲ ಎಂಬುದನ್ನು ಸಹ ಗಮನಿಸಬೇಕಾಗುತ್ತದೆ. ಹೀಗಾಗಿ ಉಭಯ ತಂಡಗಳಿಂದ ಸಮಬಲದ ಹೋರಾಟ ನಿರೀಕ್ಷಿಸಬಹುದು.

ಇನ್ನು ಆರ್​ಸಿಬಿ ತಂಡದಲ್ಲಿ ಅತ್ಯುತ್ತಮ ಆರಂಭಿಕನಾಗಿ ಫಾಫ್ ಡುಪ್ಲೆಸಿಸ್ ಇದ್ದರೆ, ಪಂಜಾಬ್ ತಂಡದಲ್ಲಿ ಶಿಖರ್ ಧವನ್ ಇದ್ದಾರೆ. ಹಾಗೆಯೇ ದಿನೇಶ್ ಕಾರ್ತಿಕ್​ಗೆ ಸರಿಸಾಟಿಯಾಗಿ ಮಯಾಂಕ್ ಅಗರ್ವಾಲ್ ಇದ್ದಾರೆ. ಇನ್ನು ಆರ್​ಸಿಬಿಯಲ್ಲಿ ವಿರಾಟ್ ಕೊಹ್ಲಿ ಇದ್ದರೆ ಪಂಜಾಬ್ ತಂಡದಲ್ಲಿ ಸ್ಪೋಟಕ ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಡೇಂಜರಸ್ ಶಾರೂಖ್ ಖಾನ್ ಕೂಡ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದಾರೆ. ಹಾಗೆಯೇ ಬೌಲರ್​ಗಳಾಗಿ ಇತ್ತ ಹರ್ಷಲ್ ಪಟೇಲ್ ಹಾಗೂ ಸಿರಾಜ್ ಇದ್ದರೆ, ಅತ್ತ ಅರ್ಷದೀಪ್ ಸಿಂಗ್ ಹಾಗೂ ಸಂದೀಪ್ ಶರ್ಮಾ ಕಾಣಿಸಿಕೊಂಡಿದ್ದಾರೆ.

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಹೀಗಿದೆ.

ಆರ್​ಸಿಬಿ ಪ್ಲೇಯಿಂಗ್ 11:
ಫಾಫ್ ಡುಪ್ಲೆಸಿಸ್, ಅನೂಜ್ ರಾವತ್, ವಿರಾಟ್ ಕೊಹ್ಲಿ, ಶೆರ್ಫಾನ್ ರುದರ್​ಫೋರ್ಡ್​, ದಿನೇಶ್ ಕಾರ್ತಿಕ್, ಡೇವಿಡ್ ವಿಲ್ಲಿ, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11:
ಮಯಾಂಕ್ ಅಗರ್ವಾಲ್ (ನಾಯಕ), ಶಿಖರ್ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಭಾನುಕಾ ರಾಜಪಕ್ಸೆ (ವಿಕೆಟ್ ಕೀಪರ್), ಶಾರುಖ್ ಖಾನ್, ಒಡಿಯನ್ ಸ್ಮಿತ್, ರಾಜ್ ಬಾವಾ, ಅರ್ಷ್‌ದೀಪ್ ಸಿಂಗ್, ಹರ್‌ಪ್ರೀತ್ ಬ್ರಾರ್, ಸಂದೀಪ್ ಶರ್ಮಾ, ರಾಹುಲ್ ಚಾಹರ್

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಇದನ್ನೂ ಓದಿ:  IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು

Published On - 7:16 pm, Sun, 27 March 22